ಕರೋನಾ ನಿಯಂತ್ರಣಕ್ಕಾಗಿ ಸೇವೆಗೈದ ಸಾಧಕರಿಗೆ ಸನ್ಮಾನ

0
33

ಕಲಬುರಗಿ: ಕರೋನಾ ನಿಯಂತ್ರಣಕ್ಕಾಗಿ ಹರಗಲಿರುಳು ಜೀವದ ಹಂಗನ್ನು ತೊರೆದು ಸೇವೆಗೈದ ವೈದ್ಯರುಗಳು, ನರ್ಸ್‌ಗಳು- ಪೌರಕಾರ್ಮಿಕರಿಗೆ ಹಾಗೂ ಸಮಾಜಸೇವಕರನ್ನು ಗುರುತಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯ ಘಟಕದ ವತಿಯಿಂದ ಸನ್ಮಾನಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಂ ಪ್ರಭು ಪಾಟೀಲ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆವ ವತಿಯಿಂದ ೬೫ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಐತಿಹಾಸಿಕ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಕರೋನಾ ನಿಯಂತ್ರಣಕ್ಕಾಗಿ ಸೇವೆ ಸಲ್ಲಿಸಿದರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನುದ್ದೇಶಿ ಮಾತನಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಷ.ಬ್ರ.ಶ್ರೀ. ಸೋಮಶೇಖರ ಶಿವಾಚಾರ್ಯರು, ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚೀನ್ ಪರತಾಬಾದ, ಸೈಯದ ದಾನಿಶ ಖಾದ್ರಿ ಶಿರೆ, ಭವಾನಿಸಿಂಗ್ ಠಾಕೂರ, ರಾಜು ಎಂ ದೇಶಮುಖ, ಸಂತೋಷ ಪಾಟೀಲ್ ದಣ್ಣೂರ, ಮಲ್ಲಿಕಾರ್ಜುನ್ ನಿಲೂರ್, ಸತೀಶ ಫರಹತಾಬಾದ, ರಾಹುಲ ಫರಹತಾಬಾದ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here