ಕಲಬುರಗಿ: ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಇಂಧನಕಲ್ಲ ಗ್ರಾಮವು ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಇಂಧನಕಲ್ಲ ಗ್ರಾಮಸ್ಥರು ಚಿತ್ತಾಪೂರ ತಹಸೀಲ್ದಾರ್ ಇವರಿಗೆ ಮನವಿ ಸಲ್ಲಿಸಲಾಯಿತು.
ಕಾಳಗಿ ತಾಲೂಕವು ಕೇವಲ ೧೨ ಕಿ.ಮೀ ದೂರ ಮಾತ್ರ ಇದ್ದು, ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ಹೋಗಿ ಬರುವುದಕ್ಕೆ ಮತ್ತು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ತುಂಬಾ ಸಮೀಪವಿರುತ್ತದೆ. ಇಂಧನಕಲ್ ಗ್ರಾಮದಿಂದ ಚಿತ್ತಾಪೂರ ತಾಲೂಕಿಗೆ ಬರಲು ಸುಮಾರು ೩೫ ಕಿ.ಮೀ ದೂರವಿರುತ್ತದೆ ಆದ್ದರಿಂದ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳಿಗೆ ಅಲೆದಾಡಲು ಮತ್ತು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ.
ಆದ್ದರಿಂದ ನೂತನವಾಗಿ ರಚನೆಯಾಗಿರುವ ಕಾಳಗಿ ತಾಲೂಕಿಗೆ ನಮ್ಮ ಇಂಧನಕಲ್ ಗ್ರಾಮ ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಿ ಸಾರ್ವಜನಿಕರಿಗೆ ವೈದ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಇಂಧನಕಲ್ ಗ್ರಾಮದ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರುಗಳು ಒತ್ತಾಯಿಸಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮರಾವ್ ಪಾಟೀಲ,ಶೇಕರ ಸಾಹುಕಾರ, ಸಿದ್ದಣ್ಣ ಮಂಗಲಗಿ,ಮಲ್ಲಣ್ಣ ತೆಂಗಳಿ,ಅನೀಲ ಹುಣಚಿಕರ್ ಇನ್ನೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.