ಶಾಂತಿ ಕದಡಿಸುವ ಪ್ರಯತ್ನ ನಡೆಸಿದರೆ ರೌಡಿಶಿಟರ್ ತೆರೆಯಲಾಗುವುದು: ಡಿವೈಎಸ್.ಪಿ ಎಚ್ಚರಿಕೆ

0
111

ಕಲಬುರಗಿ: ಶಾಂತಿ ಕದಡಿಸುವ ಪ್ರಯತ್ನ ನಡೆಸಿದರೆ ಅಂತಹವರ ವಿರುದ್ದ ರೌಡಿಶೀಟರ್ ತೆರೆಯಲಾಗುವುದು ಎಂದು ಡಿ.ವೈ ಎಸ್.ಪಿ ವೆಂಕನಗೌಡ ಪಾಟೀಲ್ ಎಚ್ಚರಿಸಿದರು.

ಎರಡು ದಿನಗಳ ಹಿಂದೆ ಹಲಕರ್ಟಿ ಗ್ರಾಮದಲ್ಲಿ ನಡೆದ ಕೊಲೆ ಹಿನ್ನೆಲೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪುಡಿ ರೌಡಿಗಳ ಆಟಹಾಸ ನಡೆಸಲು ಬಿಡುವುದಿಲ್ಲ, ಗ್ರಾಮದಲ್ಲಿ ಶಾಂತಿ ಕದಡಿಸುವ ಪ್ರಯತ್ನ ನಡೆಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವದರ ಜೊತೆಗೆ ರೌಡಿಶಿಟರ್ ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಹಲಕರ್ಟಿ ಗ್ರಾಮ ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುವಂತೆ ಗ್ರಾಮವಾಗಿದ್ದು, ಗ್ರಾಮದಲ್ಲಿ  ಈ ರೀತಿ ಘಟನೆ ನಡೆದಿರುವುದು ವಿಪರ್ಯಾಸ, ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಂಡು ಹೋಗುವುದು ನಮ್ಮೆಲರ ಜವಾಬ್ದಾರಿಯಾಗಿದ್ದು, ಗ್ರಾಮದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯಲು ಸಂಪೂರ್ಣ ಕ್ರಮಕೈಗೋಳ್ಳಲಾಗುದು ಆದಕ್ಕೆ ಗ್ರಾಮಸ್ಥರ ಸಹರಕಾರ ಅಗತ್ಯವಾಗಿದೆ ಎಂದರು.

ಊರಲ್ಲಿ ಯಾವುದೆ ಅಹಿತಕರ ಘಟನೆ ನಡೆದಲ್ಲಿ ಪೋಲಿಸರ ಗಮನಕ್ಕೆ ತರುವ‌ ಮೂಲಕ ಈ ರೀತಿಯ ಅಹಿತಕರ ಘಟನರಗೆ ತಡೆಯು ನೆರವಾಗಬೇಕು ಎಂದು ಕರೆ ನೀಡಿದ ಅವರು. ಘಟನೆಗಳ ಕುರಿತು ಮಾಹಿತಿ ನೀಡಿದವರ ಹೆಸರನ್ನು ಬಹಿರಂಗ ಪಡಿಸದೆ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಇದೆ ವೇಳೆ ಮಾತನಾಡಿದ ವೀರಭದ್ರೇಶ್ವರ ದೇವಸ್ಥಾನದ ಪೀಠಾಧಿಪತಿ ಮುನಿಂದ್ರ ಶಿವಾಚಾರ್ಯರು, ಹಲಕರ್ಟಿ ಗ್ರಾಮದ ಒಂದು ಇತಿಹಾಸ ಸಾರುವಂತ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಮಠ-ದರ್ಗಾ ಒಟ್ಟಾಗಿ ಸೌಹಾರ್ದತೆ ಭೀತ್ತರಿಸುತ್ತದೆ‌. ಕೆಟ್ಟಗಳಿಗೆಯಲ್ಲಿ ಒಂದೆರಡು ದುರ್ಘಟನೆಗಳು ನಡೆದುಹೋಗಿವೆ ಮುಂದೆ ಈ ರೀತಿ ನಡೆಯದಂತೆ ಶಾಂತಿ ಸಹಬಾಳ್ವೆ ಜೀವನ ನಡೆಸುವಂತೆ ಗ್ರಾಮಸ್ಥರಿಗೆ ಕರೆ ಕೊಟ್ಟರು.

ವಾಡಿ ಪೋಲಿಸ್ ಠಾಣೆ ಪಿಎಸ್ಐ ವಿಜಯಕುಮಾರ್ ಬಾವಗಿ, ಮಲ್ಲಣ ಸಾಹುಕಾರ್, ಈರಣ್ಣಾ ರಾವೂರ್ಕರ್, ಅಜೀಜ್ ಪಾಷಾ ಪಟೇಲ್, ಜಗದೀಶ ಶಿಂಧೆ, ಇಬ್ರಾಹಿಂ ಪಟೇಲ್, ರಾಘವೆಂದ್ರ ಅಲಿಪೂರ್ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮದ ಹಲವು ಸಮುದಾಯದ ಮುಖಂಡರು, ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here