ಕಲಬುರಗಿ : ಕಳೆದ ಹಲವು ದಿನಗಳಿಂದ ಮಾನವ ಬದುಕನ್ನು ಆತಂಕದಲ್ಲಿಟ್ಟಿರುವ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಬರೆದಿರುವ ಆ ಲಾಕ್‍ಡೌನ್ ದಿನಗಳು ಕಾದಂಬರಿಯು ವಾಸ್ತವ ಬದುಕಿನ ಚಿತ್ರಣವಾಗಿದೆ ಎಂದು ಸಾರ್ವಜನಿಕ ರಾಜ್ಯ ಗ್ರಂಥಾಲಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿ ಅವರು ಹೇಳಿದರು.
ಇಲ್ಲಿಯ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ಆನ್‍ಲೈನನಲ್ಲಿ ಆಯೋಜಿಸಿದ್ದ ಲೇಖಕ ಹನುಮೇಶ ದೇಸಾಯಿ ಬೆಂಗಳೂರು ಅವರ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಲಾಕ್‍ಡೌನ್ ದಿನಗಳಲ್ಲಿ ಬರವಣಿಗೆಯನ್ನು ಮಾಡಿದ ಲೇಖಕರನ್ನು ಅಭಿನಂದಿಸಿಲ್ಲದೇ, ಕೊರೊನಾ ಬರುವ ಲಕ್ಷಣಗಳು, ಪರಿಹಾರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಕಲ್ಪನೆಯ ಕಥೆಯ ಜೊತೆಗೆ ವಾಸ್ತವ ಬದುಕಿನ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಜಿಲ್ಲಾ ಗ್ರಂಥಾಲಯ ಅಧಿಕಾರಿ ಅಜಯಕುಮಾರ, ಡಾ.ಕೇದಾರನಾಥ, ರಾಜಕುಮಾರ ಕನ್ನಾ ಇತರರಿದ್ದರು. ಆನ್‍ಲೈನಿನಲ್ಲಿ ಸೇಡಂನಲ್ಲಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು ಕಾದಂಬರಿಯನ್ನು ಬಿಡುಗಡೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿದರು.
ಬೆಂಗಳೂರಿನಲ್ಲಿ ಕಾದಂಬರಿಕಾರ ಹನುಮೇಶ ದೇಸಾಯಿ ಸೇರಿದಂತೆ ಇತರರಿದ್ದರು.