ಸುರಪುರ: ನಗರದ ತಿಮ್ಮಾಪುರದಲ್ಲಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃಧ್ಧಿ ಸಂಸ್ಥೆಯ ಕಚೇರಿಯಲ್ಲಿ ಶಾಲಾ ಮಕ್ಕಳಿಗಾಗಿ ರಿಯಾಯಿತಿ ದರದಲ್ಲಿ ಲ್ಯಾಪಟಾಪ್ ಮತ್ತು ಟ್ಯಾಬ್ ವಿತರಣಾ ಕಾರ್ಯಕ್ರಮ ಜ್ಞಾನತಾಣ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಸುಜಾತಾ ವೇಣುಗೋಪಾಲ ಜೇವರ್ಗಿ ಮಾತನಾಡಿ,ಕೊರೊನಾ ಕಾರಣದಿಂದ ಬಹಳಷ್ಟು ಮಕ್ಕಳಿಗೆ ಆನ್ಲೈನ್ ಶಿಕ್ಷಣವು ದೊರೆಯುವುದು ಕಷ್ಟವಾಗಿದೆ,ಇದನ್ನ ಅರಿತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃಧ್ಧಿ ಸಂಸ್ಥೆಯಲ್ಲಿನ ಸದಸ್ಯತ್ವ ಹೊಂದಿರುವವರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಲ್ಯಾಪಟಾಪ್ ಮತ್ತು ಟ್ಯಾಬ್‌ಗಳನ್ನು ನೀಡುವ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ಸ್ಸ ಯೂನಿಯನ್ ಅಧ್ಯಕ್ಷ ಪತ್ರಕರ್ತ ರಾಜು ಕುಂಬಾರ ಮಾತನಾಡಿ,ಹಿಂದಿನಿಂದಲೂ ಕಳೆದ ಯದು ವರ್ಷಗಳಿಂದ ಈ ಸಂಸ್ಥೆಯು ಮಹಿಳೆಯರ ಸ್ವಾಲಂಭಿ ಬದುಕಿಗಾಗಿ ಆರ್ಥಿಕ ಏಳಿಗೆಯ ಯೋಜನೆಯನ್ನು ನಡೆಸುತ್ತಾ ಬಂದಿದೆ.ಅಲ್ಲದೆ ಅನೇಕ ಜನಪರವಾದ ಕಾರ್ಯ ಮಾಡುತ್ತಿದೆ.ಅದರಂತೆ ಇಂದು ಪದವಿ ಹಂತದ ೫೦ ಮಕ್ಕಳಿಗೆ ಕೇವಲ ೨೪ ಸಾವಿರಕ್ಕೆ ಲ್ಯಾಪಟಾಪ್ ಹಾಗು ೧೦೦ ಪ್ರೌಢಶಾಲಾ ಹಂತದ ಮಕ್ಕಳಿಗೆ ಕೇವಲ ೬ ಸಾವಿರ ರೂಪಾಯಿಗಳಲ್ಲಿ ಟ್ಯಾಬ್ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ.ಅದರಂತೆ ಲ್ಯಾಪಟಾಪ್ ಹಾಗು ಟ್ಯಾಬ್ ವಿತರಣೆಯ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವಂತೆ ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಯೋಜನಾಧಿಕಾರಿ ಸಂದೀಪ್ ಡಿ ಮಾತನಾಡಿ,ಇಂದು ಇಡೀ ರಾಜ್ಯಾದ್ಯಂತ ಮಕ್ಕಳಿಗೆ ಲ್ಯಾಪಟಾಪ್ ಮತ್ತು ಟ್ಯಾಬ್ ವಿತರಣೆಯ ಜ್ಞಾನತಾಣ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ನಮ್ಮ ಪೂಜ್ಯರಾದ ವಿರೇಂದ್ರ ಹೆಗ್ಗಡೆಜಿಯವರು ಉದ್ಘಾಟಿಸುತ್ತಿದ್ದು,ಮಕ್ಕಳ ಸಂಖ್ಯೆಯನ್ನು ಇನ್ನು ಹೆಚ್ಚಿಸುವುದಾಗಿ ಈಗಾಗಲೆ ಪೂಜ್ಯರು ಹೇಳಿದ್ದಾರೆ.ಅದರಂತೆ ಇನ್ನೂ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಲ್ಯಾಪಟಾಪ್ ಟ್ಯಾಬ್ ವಿತರಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜ್ಞಾನತಾಣ ಯೋಜನೆ ಹಾಗು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃಧ್ಧಿ ಸಂಸ್ಥೆಯ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.