ಮಾನವೀಯತೆಯ ಸಾಕಾರ ಮೂರ್ತಿ ಡಾ.ಬಾಬಾಸಾಹೇಬ್ ಅಂಬೇಡ್ಕರ

0
30

ಕಲಬುರಗಿ: ತಲ-ತಲಾಂತರಗಳಿಂದ ಶೋಷಣೆಯನ್ನು ಅನುಭವಿಸುತ್ತಾ ಮೂಕ ರೋಧನೆಗೆ ಒಳಗಾಗಿದ್ದ ದೀನ, ದಲಿತ, ಶೋಷಿತ ಜನಾಂಗಕ್ಕೆ ಬೆಳಕಾಗಿ, ಸಂವಿಧಾನದ ಮೂಲಕ ಅವರಿಗೆ ಸ್ವಾಭಿಮಾನದ ದೀಕ್ಷೆಯನ್ನು ಕರುಣಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಾನವೀಯತೆಯ ಮೇರು ಶಿಖರವಾಗಿದ್ದಾರೆಂದಬ್ಸಮಾಜ ಸೇವಕ ಸುನೀಲಕುಮಾರ ವಂಟಿ ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಶೇಖರೋಜಾ ಅಂಬೇಡ್ಕರ ಆಶ್ರ ಕಾಲನಿಯಲ್ಲಿ ಭಾನುವಾರ ಸಂಜೆ ಜರುಗಿದ ಜೀ ವಾಹಿನಿಯ ಮಹಾನಾಯಕ ಧಾರಾವಾಹಿಯ ಪೋಸ್ಟರ್ ಅನಾವರಣಗೊಳಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಚಿಂತಕ ಹಣಮಂತ ಬೋಧನಕರ್ ಮಾತನಾಡಿ, ಅಂಬೇಡ್ಕರ ಅವರನ್ನು ನಿಜವಾಗಿ ಅರ್ಥಮಾಡಿಕೊಂಡಿರುವವ ಸಂಖ್ಯೆ ವಿರಳ. ಅವರ ಭಾವಚಿತ್ರದ ಪೂಜೆಗಷ್ಟೆ ಸೀಮಿತವಾದರೆ ಪ್ರಯೋಜನೆಯಿಲ್ಲ. ಬದಲಿಗೆ ಶೋಷಿತ ಜನಾಂಗವು ದುಷ್ಚಟಗಳಿಂದ ಮುಕ್ತರಾಗಬೇಕು. ಶಿಕ್ಷಣ ಪಡೆದು, ಸಂವಿಧಾನ ನೀಡಿರುವ ಎಲ್ಲಾ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಹೊಂದಬೇಕು. ಬಾಬಾಸಾಹೇಬರ್ ತತ್ವಗಳನ್ನು ಜೀವನದಲ್ಲಿ ತಪ್ಪದೆ ಪಾಲಿಸಬೇಕು. ನಿಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡಿದರೆ, ಅದು ಬಾಬಾಸಾಹೇಬ್ ಅವರಿಗೆ ಮಾಡಿದ ಅಪಮಾನ. ಮಹಾನಾಯಕ ಧಾರಾವಾಯಿಯು ಅಂಬೇಡ್ಕರ ಅವರ ಜೀವನ, ಅವರು ಪಟ್ಟ ಕಷ್ಟಗಳು, ಸಾಧನೆ, ಕೊಡುಗೆಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಅದು ಯಾವುದೇ ಕಾರಣಕ್ಕೂ ನಿಲ್ಲಿಸಲು ಬಿಡುವುದಿಲ್ಲವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶರಣು ಅಲ್ಲಂಪ್ರಭು ಪಾಟೀಲ, ಪ್ರೊ.ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖಿ, ಅನೀಲ ಡೊಂಗರಗಾಂವ, ಗೌತಮ ವಂಟಿ, ಅರುಣ ಭರಣಿ, ಸಾಗರ ಕಲಗುರ್ತಿ, ಪವನ ಪರೀಟ್, ಕೈಲಾಸ, ಅನೀಲ ಸಲಗರ, ವಿನೋದ ಬಿಲಗುಂದಿ, ರಜನಿಕಾಂತ್, ಸಚಿನ್ ಬಿಲಗುಂದಿ, ಶರಣು, ಮಂಜುನಾಥ ಅಲಂಕಾರ, ಪವನ ಸಾಗರ, ವಿನೋದ ತೆಲಂಗಿ ಸೇರಿದಂತೆ ಬಡಾವಣೆಯ ನಾಗರಿಕರು, ಮತ್ತಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here