ಬೆಂಗಳೂರು: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ 65ನೇ ಕನ್ನಡ ರಾಜ್ಯೋತ್ಸವ ಆಚರಣೆ ನಿಮಿತ್ತ ನಾಡಿನ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಗೈದವರಿಗೆ ನೀಡುವ ವಿವಿಧ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿ ” ಆತ್ಮಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-‘ ಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮೋಹನ್ ಕುಮಾರ್ ದಾನಪ್ಪನವರು ಭಾಜನರಾಗಿದ್ದಾರೆ.
ವಿವಿಧ ರಂಗಗಳಲ್ಲಿ ಗಣನೀಯವಾಗಿ ಸಮಾಜ ಹಾಗೂ ಬಡವರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಪ್ರವೀಣರಾಗಿರುವ ವಕೀಲ ಮೋಹನ್ ಕುಮಾರ್ ದಾನಪ್ಪಗೆ 2020 ರ ‘ಆತ್ಮಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಒಲಿದಿರುವುದು ಕಂಪ್ಲಿ ಭಾಗದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ತಿಂಗಳ 22 ರಂದು ಬೆಂಗಳೂರಿನ ಯಲಹಂಕ ಉಪನಗರದ ಹೋಟೆಲ್ ಪ್ರಖ್ಯಾತಿಯಲ್ಲಿ ವಕೀಲ ಮೋಹನ್‌ಕುಮಾರ್ ದಾನಪ್ಪರವರಿಗೆ ಪ್ರಶಸ್ತಿ ಪ್ರದಾನ ಮಾಡುವುದಾಗಿ ಚಲನಚಿತ್ರ ನಟ,ನಿರ್ದೇಶಕ, ಸಾಹಿತಿ, ಪತ್ರ ಕರ್ತ, ಹಾಗೂ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗುಣವಂತ ಮಂಜು ರವರು ಪತ್ರದ ಮೂಲಕ ತಿಳಿಸಿರುತ್ತಾರೆ.