- ಸಾಜಿದ್ ಅಲಿ
ಶಹಾಪುರ: ನಗರದಿಂದ ಕೇವಲ 20 ಕಿ.ಮೀ. ದೂರ ಇರುವ ಈ ಊರಲ್ಲಿ ಸುಮಾರು 500ಕ್ಕು ಹೆಚ್ಚು ಜನವಾಸವಾಗಿರುವ ಈ ಹಳ್ಳಿಯಲ್ಲಿ ಸರಕಾರಿ ನಳ ಹೊರತುಪಡಿಸಿದರೆ ಕುಡಿಯುವ ಮತ್ತು ಬಳಸಲು ಹಳ್ಳಿಗೆ ಇರುವುದು ಒಂದೇ ಬಾವಿ, ಆ ಬಾವಿಯಲ್ಲಿ ನೀರು ಖಾಲಿಯಾದರೆ ಮತ್ತೆ ಬಾವಿಯಲ್ಲಿ ನೀರು ಬಂದು ತುಂಬುವರೆಗೆ ಹಳ್ಳಿಯ ಜನರು ಕಾಯಬೇಕು. ಹಳ್ಳಿಗೆ ನೀರಿನ ಸೌಕರ್ಯ ವಿಲ್ಲದೇ ಗ್ರಾಮಸ್ಥರು ಆತಂಕದಲ್ಲಿ ಬದುಕು ನೂಕುತ್ತಿದ್ದಾರೆ.
ಹೌದು ಇದು ಒಂದು ಸಿನಿಮಾ ಕಥೆ ಅಲ್ಲ ಇದು ವಾಸ್ತವ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದರಕಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರು ಕೊಡಮನಹಳ್ಳಿ, ನಗರದಿಂದ ಕೇವಲ 20 ಕಿ.ಮೀ. ದೂರ ಇರುವ ಈ ಊರಲ್ಲಿ ಪಂಚಾಯತ್ ಕಡೆಯಿಂದ ನೀರಿನ ನಳಗಳು ಬರುತ್ತವೆ ಆದರೆ ಪೈಪ್ ಲೈನ್ ಒಡೆದು ಯಾವುದೇ ಕಾರಣಕ್ಕೆ ನಳ ಬಿಟ್ಟಿಲ್ಲ ಅಂದ್ರೆ, ಈ ಹಳ್ಳಿಯ ನಿವಾಸಿಗಳಿಗೆ ಇರುವುದು ಒಂದೇ ಒಂದು ಬಾವಿ. ಆ ಬಾವಿ 5/5 ಚೌಕಾಕಾರ ಬಾವಿ, ಈ ಬಾವಿಯಿಂದ ಹಳ್ಳಿಯಲ್ಲಿ ನಳ ಬಿಟ್ಟಿಲ್ಲ ಅಂದ್ರೆ ಒಂದೇ ಬಾರಿಗೆ ನೀರು ಖಾಲಿ. ಮತ್ತೆ ನೀರು ಬೇಕು ಎಂದರೆ ಬಾವಿಗೆ ನೀರು ಬಂದು ತುಂಬುವರೆಗೆ ಹಳ್ಳಿಯ ಜನರು ಕಾಯಬೇಕು. ಇಲ್ಲಾಂದರೆ ನೀರಿಲ್ಲದೆ ಪರದಾಡಬೇಕು.
ಹಳ್ಳಿಯ ಸಮಸ್ಯೆ ಕುರಿತು ಗ್ರಾ.ಪಂ ಅಧಿಕಾರಿಗಳಿಗೆ ವಿಷಯ ಗೊತ್ತಿದ್ದರೂ ನೀರಿನ ಸೌಕರ್ಯಕಾಗಿ ಕ್ರಮಕೈಗೊಳುತ್ತಿಲ್ಲ, ಅಲ್ಲದೇ ಸಮಸ್ಯೆ ಕುರಿತು ದೂರು ನೀಡಿದರೂ ಸ್ವಲ್ಪ ಕಾಯಿರಿ ಎಂದು ದಿನಗಳು ಕಳೆಯುತ್ತಿವೆ ಆದರೆ ಹಳ್ಳಿಗೆ ಮಾತ್ರ ನೀರು ಬರುತ್ತಿಲ್ಲ. ನಳದ ನೀರು ನಿಂತರೆ ( ಬಂದ್ ಆದರೆ), ಹಳ್ಳಿಯ ಜನರಲ್ಲಿ ಆತಂಕ ಮೂಡುತ್ತದೆ ಎಂದು ಹಳ್ಳಿಯ ವಿದ್ಯಾರ್ಥಿ ಶರಬಣ್ಣ ಅವರು ಈ ಮೀಡಿಯಾ ಲೈನ್ ಜೊತೆ ಮಾತನಾಡಿ ಮಾಹಿತಿ ಹಂಚಿಕೊಂಡರು.