ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿನ ವೀರಶೈವ ಲಿಂಗಾಯತ ಯುವ ವೇದಿಕೆ ಕಚೇರಿಯಲ್ಲಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,೧೨ನೇ ಶತಮಾನದ ಬಸವಾದಿ ಶರಣರ ಸಮಕಾಲಿನ ಶರಣರಲ್ಲಿ ಚನ್ನಬಸವಣ್ಣನವರು ಪ್ರಮುಖರಾಗಿದ್ದಾರೆ,ಇಂದು ನಾವೆಲ್ಲರು ಓದುವ ಹಾಗು ಲಿಂಗಾಯತ ಸಂಸ್ಕಾರದ ಮೂಲ ತಳಹದಿಯಾಗಿರುವ ವಚನಗಳನ್ನು ಪರಿಷ್ಕರಿಸುವ ಹಾಗು ಇತರೆ ಶರಣರು ಬರೆದ ವಚನಗಳನ್ನು ಶೋಧಿಸುವ ಕಾಯಕವನ್ನು ಚನ್ನಬಸವಣ್ಣನವರು ಮಾಡುತ್ತಿದ್ದರು,ತಮ್ಮ ಅತೀ ಕಿರಿಯ ವಯಸ್ಸಿನಲ್ಲಿಯೇ ವಚನಗಳ ರಚಿಸುವ ಹಾಗು ವಚನಗಳ ಶೋಧಿಸುವ ಮೂಲಕ ಚಿನ್ಮಯ ಜ್ಞಾನಿ ಎನಿಸಿಕೊಂಡ ಶರಣರ ಜಯಂತಿಯನ್ನು ಇಂದು ನಾವೆಲ್ಲರು ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ,ಚಿನ್ಮಯ ಜ್ಞಾನಿಯಾಗಿರುವ ಚನ್ನಬಸವಣ್ಣನವರ ವಚನಗಳು ಶರಣರ ಆಧ್ಯಾತ್ಮಿಕ ಮತ್ತು ಅಪಾರವಾದ ಜ್ಞಾನವನ್ನು ತೋರಿಸುತ್ತದೆ ಎಂದರು.ಅಲ್ಲದೆ ವೀರಶೈವ ಲಿಂಗಾಯತ ಯುವ ವೇದಿಕೆ ಈ ಹಿಂದಿನಿಂದ ಮಾಡಿಕೊಂಡು ಬರುತ್ತಿದ್ದ ಬಸವ ಜ್ಯೋತಿ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವತ್ತ ಚಿಂತನೆ ನಡೆದಿದ್ದು ಮತ್ತೆ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಸಮುದಾಯದಲ್ಲಿ ಒಗ್ಗಟ್ಟು ಹಾಗು ಶರಣರ ಕುರಿತು ಅರಿವು ಹಾಗು ಚಿಂತನ ಮಂಥನಕ್ಕೆ ವೇದಿಕೆ ಕಲ್ಪಿಸಲಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಚನ್ನಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಸಂಚಾಲಕ ಚಂದ್ರಶೇಖರ ಡೊಣೂರ ತಾಲೂಕು ಅಧ್ಯಕ್ಷ ವಿರೇಶ ಪಂಚಾಂಗಮಠ ಮಂಜುನಾಥ ಗುಳಗಿ ರಾಜು ಕುಂಬಾರ ಸಿದ್ದನಗೌಡ ಹೆಬ್ಬಾಳ ಜಗದೀಶ ಪಾಟೀಲ ಸುಗೂರ ರವಿ ಕುಮಾರ ಹೆಮನೂರ ಸಾಗರ ಹಿರೇಮಠ ಪ್ರಕಾಶ ಅಂಗಡಿ ರಾಜು ಗುಡೂರ ಬಾಗಪ್ಪ ಸೇರಿದಂತೆ ಅನೇಕರಿದ್ದರು.