ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಧಂಗಾಪುರ ಅವರಿಗೆ ಸನ್ಮಾನ

0
44

ಆಳಂದ: ಕಲಬುರ್ಗಿ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನ ಕಮಿಟಿ ಕಾರ್ಯದರ್ಶಿ ಈರಣ್ಣ ಬಿರಾದಾರ ಸಿದ್ರಾಮಪ್ಪ ಪಾಟೀಲ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಕೃಷಿ ಕ್ಷೇತ್ರಕ್ಕೆ ಸಂದ ಗೌರವವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶರಣಬಸವೇಶ್ವರ ದೇವಸ್ಥಾನ ನವ ತರುಣ ಕಮಿಟಿ ಅಧ್ಯಕ್ಷರಾದ ಬಸವರಾಜ ಯಳಸಂಗಿ ಮಾತನಾಡಿ, ಸುಮಾರು 35 ವರ್ಷಗಳ ಕಾಲ ರೈತ ಪರ ಹೋರಾಟ, ರೈತರ ಅಭಿವೃದ್ಧಿಗೆ ಪಾಟೀಲ್ ಶ್ರಮಿಸಿದ್ದಾರೆ. ರೈತರ ಸಮಸ್ಯೆ ನಿವಾರಣೆಗೆ ಅನೇಕ ಹೋರಾಟಗಳನ್ನು ನಡೆಸಿದ್ದಾರೆ.

Contact Your\'s Advertisement; 9902492681

ಅದು ಅಲ್ಲದೆ ರಾಜ್ಯೋತ್ಸವ ಪ್ರಶಸ್ತಿಯಿಂದ ಬಂದ ದುಡ್ಡನ್ನು ತಾವು ಬಳಸದೆ ರೈತರ ಒಳತಿಗಾಗಿ ಬಳಸುವಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 50,000 ರೂ. ಹಾಗೂ ಧಂಗಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶರಣಬಸವೇಶ್ವರ ದೇವಸ್ಥಾನಕ್ಕೆ 50,000 ರೂ. ಹಾಗೂ ತಮ್ಮ ವೈಯಕ್ತಿಕ 50,000 ರೂ. ಗಳನ್ನು ದಾಸೋಹಕ್ಕಾಗಿ ಮಠ-ಮಾನ್ಯಗಳಿಗೆ ನೀಡಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸಿದ್ದಾರಾಮ ನಾಗಶೆಟ್ಟಿ, ವೀರಣ್ಣ ಯಳಸಂಗಿ, ಶಿವಪ್ಪ ನಾಗಶೆಟ್ಟಿ, ವಿಶ್ವನಾಥ ಮಾ.ಪಾಟೀಲ್, ಶಿವಲಿಂಗಯ್ಯ ಸ್ವಾಮಿ, ಈರಣ್ಣ ನಂದಿ, ಗುರು ಹೊಸಮನಿ, ಅನಿಲ್ ನಾಗುರ, ಕ್ಷೇಮಲಿಂಗ ಕಂಭಾರ, ಪ್ರವೀಣ್ ಮಿಟೆಕಾರ, ಶ್ರೀಶೈಲ ನಿಗಶೆಟ್ಟಿ, ಮಲ್ಲಿನಾಥ ನಾಟಿಕಾರ, ಈರಣ್ಣ ಶರಣ,ಮಹಾದೇವ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here