ತುಳಿಕ್ಕೊಳಗಾದವರಿಗೆ ಸೌಲಭ್ಯ ದೊರತಾಗ ಮಾತ್ರ ಸಮಾಜ ಕಲ್ಯಾಣವಾಗಲಿದೆ: ಶಾಸಕ ಪ್ರಿಯಾಂಕ್ ಖರ್ಗೆ

0
38

ಕಲಬುರಗಿ: ಸಮಾಜದ ತುಳಿಕ್ಕೊಳಗಾದ ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಸೌಲಭ್ಯ ದೊರೆತಾಗ ಮಾತ್ರ ಸಮಾಜಕಲ್ಯಾಣವಾಗಲಿದೆ ಎಂದು ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಶ್ರೀ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಫರಹತಾಬಾದ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರೂ 50 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನ ನಿರ್ಮಾಣದ ಶಂಕುಸ್ಥಾಪನೆ, ರೂ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಸಿಸಿ ರಸ್ತೆ ಶಂಕುಸ್ಥಾಪನೆ ಹಾಗೂ ರೂ 36 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರೈತ ಸಂಪರ್ಕ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸಮಾಜದಲ್ಲಿ ಹಿಂದುಳಿದವರು, ತುಳಿಕ್ಕೆ ಒಳಗಾದವರು ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೇರಿದಾಗ ಗ್ರಾಮೀಣ ಭಾರತ ಅಭಿವೃದ್ದಿ ಹೊಂದಲು ಸಾಧ್ಯ. ಇದೇ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ಯುವಕರು ಗ್ರಾಮದಲ್ಲಿ ನಿರ್ಮಿಸಲಾಗುವ ಈ ಭವನದಲ್ಲಿ ಆರೋಗ್ಯಕರ ಚರ್ಚಗಳು ನಡೆಯಬೇಕು. ಸಮಾಜದ ಅಭಿವೃದ್ದಿಗೆ ಸಹಕಾರಿಯಾಗುವಂತ ಕೆಲಸಗಳು ನಡೆಯಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಡವರ, ಶೋಷಿತರ ಹಾಗೂ ದಲಿತರ ಪರ ಕೆಲಸಗಳು ಹೇರಳವಾಗಿ ನಡೆದವು ಎಂದ ಶಾಸಕರು ತಾವು ಸಮಾಜಕಲ್ಯಾಣ ಸಚಿವರಾಗಿದ್ದಾಗ ಮಂಜೂರು ಮಾಡಿದ ಕಾಮಗಾರಿಗಳು ಈಗ ಚಾಲನೆಗೆ ಬರುತ್ತಿವೆ. ನಮ್ಮ ಸರಕಾರ ಎಸ್ ಸಿ ಎಸ್ ಟಿ ವರ್ಗದ ಅಭಿವೃದ್ದಿಗಾಗಿ ರೂ 28,000 ಕೋಟಿ ಅನುದಾನ ಮೀಸಲಿಡಲಾಗಿತ್ತು ಎಂದು ನೆನಪಿಸಿದರು.

ಗ್ರಾಮದಲ್ಲಿ ನಿರ್ಮಾಣಗೊಂಡಿರುವ ರೈತ ಸಂಪರ್ಕ ಕೇಂದ್ರ ಈ ಭಾಗದ ರೈತರಿಗೆ ಅನುಕೂಲವಾಗಲಿ. ಅಧಿಕಾರಿಗಳು ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಅವರಿಗೆ ದೊರಕಿಸಿಕೊಡುವ ಮೂಲಕ ರೈತಾಪಿ ವರ್ಗದ ಏಳಿಗೆಗೆ ಒತ್ತು ನೀಡಬೇಕು ಎಂದು‌ ಹೇಳಿದರು.

ಯುಪಿಎ ಸರಕಾರ ಆಡಳಿತದಲ್ಲಿ ರೈತರ  70,000 ಕೋಟಿ ಸಾಲ ಮನ್ನಾ ಮಾಡಲಾಯಿತು. ಸಿದ್ದ ರಾಮಯ್ಯ ಅವರು ಸಿಎಂ ಆಗಿದ್ದಾಗ ಕೂಡಾ ರೈತರ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಿದರು. ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ರೈತರ ಆದಾಯ ದ್ವಿಗುಣ ಮಾಡಿದ್ದಾರೆ. ಬಿಜೆಪಿ ಸರಕಾರವೂ ಕೂಡಾ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಭೂಸುಧಾರಣೆ ಕಾಯಿದೆಗೆ ಹಾಗೂ ಎಪಿಎಂ ಸಿ ಕಾಯಿದೆ ತಿದ್ದುಪಡಿ ತರುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದರು.

ರೈತರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಬಿಜೆಪಿ ಸರಕಾರ ಏನು ಮಾಡಿದೆ.? ಕೃಷಿ ಸಚಿವರು ರೈತರ ಹೊಲಗಳಿಗೆ ಭೇಟಿ‌ನೀಡಿ ಯೂರಿಯಾ‌ ಗೊಬ್ಬರ ಹಾಕಿದರೆ ಸಾಕಾ? ಅಫಝಲ್ಪುರ ತಾಲೂಕಿಗೆ ಬರಲಿ ನೆರೆ ಹಾವಳಿಯಿಂದ 54,000 ಹೆಕ್ಟೇರ್ ಬೆಳೆ ಹಾನಿಯಾಗಿದೆ‍ ಸಚಿವರು ಇಲ್ಲಿ ಬಂದು ನೋಡಿ ಪರಿಹಾರ ನೀಡಲಿ ಎಂದು ಸವಾಲು ಹಾಕಿದರು.

ಕೇವಲ ಹಸಿರು ಶಾಲು ಹಾಕಿಕೊಂಡ ಮಾತ್ರಕ್ಕೆ ಅವರಿಗೆ ರೈತರ ಪರ ಕಾಳಜಿ ಇದೆ ಎಂದು ಅರ್ಥವಲ್ಲ. ಹಸಿರು ಶಾಲುಹಾಕಿಕೊಂಡು ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಈಗ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ರೈತರಿಗೆ ಮಾರಕವಾಗುವಂತ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.

ಶಾಸಕರಾದ ಎಂ ವೈ ಪಾಟೀಲ್ ಮಾತನಾಡಿ ಅಂಬೇಡ್ಕರ ಭವನ ನಿರ್ಮಾಣ‌ ಮಾಡಲಾಗಿದೆ. ಗ್ರಾಮದ ಯುವಕರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಮಹಾನಾಯಕ ಧಾರಾವಾಹಿ ಯಲ್ಲಿ ಬಾಬಾಸಾಹೇಬ್ ಅವರು ಹೋರಾಟ ಮಾಡಿ ಜನರಿಗೆ ನ್ಯಾಯ ಒದಗಿಸಿದಂತೆ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಇಂದಿನ ಯುವಕರು ಪ್ರಿಯಾಂಕ್ ಅವರನ್ನು ನೋಡಲು ಅವರ ಮಾತು ಕೇಳಲು ನೆರೆಯುತ್ತಾರೆ ಎಂದರು.

ವೇದಿಕೆಯ ಮೇಲೆ ಶಾಸಕರಾದ ಎಂ ವೈ ಪಾಟೀಲ್, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಿಪಂ ಉಪಾಧ್ಯಕ್ಷರಾದ ಶೋಭಾ, ಶಿವಾನಂದ್ ಪಾಟೀಲ್, ದಿಲೀಪ್ ಪಾಟೀಲ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here