ನೆರೆ ಪರಿಹಾರ ನೀಡುವಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ, ರಾಜ್ಯಕ್ಕೆ ಭಾರಿ ಅನ್ಯಾಯ: ಡಾ. ಅಜಯ ಸಿಂಗ್

0
93

ಕಲಬುರಗಿ: ಮಳೆ, ನೆರೆಯಿಂದ ರಾಜ್ಯದಲ್ಲಾದ ಅಪಾರ ಹಾನಿಗೆ ಪ್ರತಿಯಾಗಿ ಕೇಂದ್ರ ಸರಕಾರ 577ಕೋಟಿ ರು ನೀಡುವ ಮೂಲಕ ಕರ್ನಾಟಕದ ಮೂಗಿಗೆ ತುಪ್ಪ ಸವರಿದೆ ಎಂದು  ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ ಸಿಂಗ್ ದೂರಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರ ಸರಕಾರ ಈ ವಿಚಾರದಲ್ಲಿ ಪಶಿಮ ಬಂಗಾಳಕ್ಕೆ ಕೊಡುಗೈ ಬಳಸಿ 2’700 ಕೋಟಿ ರು ನೀಡುವ ಮೂಲಕ ಅಪಾರ ಅನುದಾನ ನೀಡಿದೆ, ರಾಜ್ಯಕ್ಕೆ ಜಿಪುಣನಂತೆ ವರ್ತಿಸಿದೆ, ಇದು ಕೇಂದ್ರದ ಮಲತಾಯಿ ಧೋರಣೆಯಾಗಿದೆ.

Contact Your\'s Advertisement; 9902492681

ರಾಜ್ಯದಲ್ಲಿ ಅಗಸ್ಟ್ನಿಂದ ಅಕ್ಟೋಬರ್ ವರೆಗೆ 3ಹಂತದಲ್ಲಿ ಪ್ರವಾಹ, ಮಳೆ ಬಂದು ಸಾವಿರಾರು ಕೋಟಿ ರೂಪಾಯಿ ಹಾನಿ ಆಗಿತ್ತು, 2384 ಕೋಟಿ ಅನುದಾನ ಕೋರಿ ಸರಕಾರ ಪ್ರಸ್ತಾವನೆ ಸಲ್ಲಿಸಿತ್ತು, ಆದರೆ ಕೇಂದ್ರ 577 ಕೋಟಿ ರು ನೀಡಿ ಕೈತೊಳೆದುಕೊಂಡಿದೆ, ಆದರೆ ಪ. ಬಂಗಾಳಕ್ಕೆ  ಚುನಾವಣೆ ಲಾಭ ಲೆಕ್ಕ ಹಾಕಿ ಭಾರಿ ನೆರೆವು ನೀಡಿದೆ ಎಂಬುದು ಸ್ಪಷ್ಟ. ಕಳೆದ ಬಾರಿಯೂ ಹೀಗೆಯೇ ಕೇಂದ್ರ ಸರ್ಕಾರ ರಾಜ್ಯದ 3, 200 ಕೋಟಿ ರು ಮನವಿಗೆ ಪ್ರತಿಯಾಗಿ 1, 800 ಕೋಟಿ ನೀಡಿತ್ತು, ಕೇಂದ್ರದ ಈ ನಡೆ ಸಂಪೂರ್ಣ ಚುನಾವಣೆ ಕೇಂದ್ರಿತ ಹಾಗೂ ರಾಜಕೀಯ ಲಾಭದ ನಡೆ ಆಗಿದೆ ಎಂದು ಡಾ. ಅಜಯ ಸಿಂಗ್ ದೂರಿದ್ದಾರೆ.

ನೆರೆ, ಮಳೆ ಹೊಡೆತದಿಂದ ರೈತರು, ಜನತೆ ಇನ್ನೂ ಮೇಲೆ ಎದ್ದಿಲ್ಲ, ಕಲಬುರಗಿ ಜಿಲ್ಲೆಯ ಆಫ್ಝಲಪುರ್ , ಜೇವರ್ಗಿ, ಆಳಂದ್ ಸೇರಿದಂತೆ ಎಲ್ಲಡೆ 150 ಕೋಟಿ ರು ಗೂ ಅಧಿಕ ಹಾನಿ ಆಗಿದೆ,  ಬಿಡಿಗಾಸು ನೀಡಿ ಕುಳಿತರೆ ಸಾಲದು, ಜನರ ಸಂಕಷ್ಟ ಆರಿತು ಸರಕಾರ ಹೆಚ್ಚಿನ ನೆರವು ನೀಡಬೇಕಿದೆ, ಕೇಂದ್ರಕ್ಕೆ ಹಾನಿಯ ಬಗ್ಗೆ ಇನ್ನಷ್ಟು ಮಾನವರಿಕೆ ಮಾಡಿ ಕೊಟ್ಟು ನೊಂದವರಿಗೆ ಬೇಗ ಹೆಚ್ಚು ಪರಿಹಾರ ನೀಡಲು ಕ್ರಮಕ್ಕೆ ರಾಜ್ಯ ಬಿಜೆಪಿ ಆಡಳಿತ ಮುಂದಾಗಲಿ ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here