ಕನ್ನಡ ಸಂಸ್ಕೃತಿ ವೈವುದ್ಯಮಯ ಸಂಸ್ಕತಿ: ೬೪೫ನೇ ದತ್ತಿ ಕಾರ್ಯಕ್ರಮ

0
46

ಕಲಬುರಗಿ: ಶೂನ್ಯ ಸಂಪಾದನೆಗಳು ಕನ್ನಡದ ಸೋಪಜ್ಞಪ್ರಜ್ಞೆಯಿಂದಉಂಟು ಮಾಡುವಂತಹಅಪರೂಪದ ಸಾಹಿತ್ಯ ಕೃತಿಗಳು. ಕನ್ನಡದಲ್ಲಿಇಂತಹ ಕೃತಿಗಳು ರಚನೆಯಾಗಿದ್ದುದಕ್ಷಿಣ ಭಾರತದ ಸಾಹಿತ್ಯಚರಿತ್ರೆಯಲ್ಲಿಯೇ ಈ ಬಗೆಯಒಂದು ಸೃಷ್ಟಿಶೀಲ ಪ್ರಕ್ರಿಯೆಯಸೃಜನ ಶೀಲ ಪ್ರಯೋಗ ನಮಗೆ ಎಲ್ಲ್ಲಿಯೂಕಂಡು ಬರುವುದಿಲ್ಲ ಎಂದು ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಮಂಗಳ ಜ್ಯೋತಿ ಶರಣಗಾಣದಕಣ್ಣಪ್ಪಯ್ಯ ಸಮಾಜದವತಿಯಿಂದ ಹಮ್ಮಿಕೊಂಡಅರಿವಿನ ಮನೆ ೬೪೫ ನೆಯದತ್ತಿಕಾರ್ಯಕ್ರಮದಲ್ಲಿ ’ಕನ್ನಡ ಸಂಸ್ಕೃತಿ’ ಎಂಬ ವಿಷಯದ ಮೇಲೆ ಪ್ರಾಧ್ಯಾಪಕರಾದ ಡಾ. ಮೃತ್ಯುಂಜಯರುಮಾಲೆಯವರು ಶಿವಗಣಪ್ರ ಸಾದಿ ಮಹಾದೇವಯ್ಯ ಪೂರ್ವದಲ್ಲಿದಂತಹ ಹನ್ನೆರಡನೆಯ ಶತಮಾನದಎಲ್ಲ ಶರಣರ ವಚನಗಳನ್ನು ಗಂಭೀರವಾಗಿಅಧ್ಯಯನ ಮಾಡಿ ವಿಷಯವಾರು ಅವುಗಳನ್ನು ಜೋಡಿಸಿ, ಅವುಗಳಿಗೆ ಒಂದುಕಥಾಸ್ವರೂಪವನ್ನುಕೊಟ್ಟು, ನಂತರದಎಲ್ಲ ಶರಣ ಸಂಸ್ಕೃತಿಯ ಆಸಕ್ತರಿಗೆ ಹನ್ನೆರಡನೆಯ ಶತಮಾನದಲ್ಲಿ ನಡೆದಂತಹ ಶರಣರಜೀವನಚಿತ್ರಯಾವರೀತಿಯಾಗಿಇರಬಹುದುಎಂದು ತೋರಿಸಿದಂತಹ ಅಪರೂಪದ ಕೆಲಸವನ್ನು ಶೂನ್ಯ ಸಂಪಾದನೆಯರಚನೆಯ ಮೂಲಕ ಮಾಡಿದ್ದುಒಂದುಅಪರೂಪದಕಾರ್ಯ. ಸದ್ಯದ ಸ್ಥಿತಿಯಲ್ಲಿ ಹತ್ತುಜನ ವಿದ್ವಾಂಸರು ಕುಳಿತು ಮಾಡುವ ಕೆಲಸವನ್ನು ಶಿವಗಣ ಪ್ರಸಾದಿ ಮಹಾದೇವಯ್ಯ ಹನ್ನೆರಡನೆಯ ಶತಮಾನದಎಲ್ಲ ಶರಣರ ವಚನಗಳನ್ನು ಸುಸಂಬದ್ಧವಾಗಿ ಜೋಡಿಸಿ ಶರಣ ಸಂಸ್ಕೃತಿಯ ಪಠ್ಯಎನ್ನುವರೀತಿಯಲ್ಲಿತನ್ನ ಶೂನ್ಯ ಸಂಪಾದನೆಯನ್ನು ರಚಿಸಿದ್ದು ಒಂದುಅಪರೂಪದ ಸಂಗತಿಯಾಗಿದೆ.

ಕನ್ನಡ ಸಂಸ್ಕೃತಿಯಕುರಿತು ವಿಚಾರ ಮಾಡುವಾಗ ಶೂನ್ಯ ಸಂಪಾದನೆಒಂದು ಮಹತ್ವದಕೃತಿಯಾಗಿಕಂಡುಬರುತ್ತದೆ.ಹನ್ನೆರಡನೆಯ ಶತಮಾನದ ಶರಣರಒಟ್ಟು ಬದುಕಿನ ಸಾಂಸ್ಕೃತಿಕ ಹಿನ್ನೆಲೆಯನ್ನು ಪರಿಚಯಿಸಲು ಶೂನ್ಯಸಂಪಾದನೆಕನ್ನಡ ಸಾಹಿತ್ಯ ಲೋಕದಅಪರೂಪದಕೃತಿಯಾಗಿದೆ.

Contact Your\'s Advertisement; 9902492681

ಕನ್ನಡ ಸಂಸ್ಕೃತಿಯನ್ನು ಉಸಿರಾಡುವ ಜನ ೧೯೫೬ರಲ್ಲಿ ಏಕೀಕರಣದ ಮೂಲಕ ಒಂದಾಗಿದ್ದುಒಂದು ಐತಿಹಾಸಿಕ ಸಂಗತಿ.ಕನ್ನಡಿಗರ ಆಶೋತ್ತರಗಳು ಈ ಸಂದರ್ಭದಲ್ಲಿಒಂದು ನಕ್ಷೆಗೆ ಒಳಪಟ್ಟಿದ್ದು ಉಲ್ಲೇಖನೀಯ ಸಂಗತಿ.ಕವಿರಾಜ ಮಾರ್ಗಕ್ಕಿಂತ ಪೂರ್ವದಲ್ಲಿಗಂಗರು ಈ ಭಾಗವನ್ನು ಅಳುತ್ತಿದ್ದ ಸಂದರ್ಭದಲ್ಲಿಕರ್ನಾಟಕದ ಕುದುರೆಗಳು ಉತ್ತರದಗಂಗಾನದಿಯಲ್ಲಿ ನೀರುಕುಡಿಯುತ್ತಿದ್ದವುಎಂದು ಸಂಜಾನನಶಾಸನಉಲ್ಲೇಖ ಮಾಡುತ್ತದೆ.ಗಂಗರ ಕಾಲದಿಂದ ನಕ್ಷೆ ಬದಲಾಗುತ್ತಾ ಹೋಯಿತು.ಇದುಕನ್ನಡಿಗರ ಇಚ್ಛಾ ಶಕ್ತಿಯಕೊರತೆಯಿಂದಾದಘಟನೆಎನ್ನಬಹುದು.

ಒಂದುಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಹಂಪೆಯನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡಿದಂತಹ ನಾಲ್ಕು ರಾಜ ವಂಶಗಳೆಂದರೆ ಸಂಗಮ, ಸಾಳ್ವ, ತುಳುವ ಮತ್ತುಅರವೀಡು ರಾಜಮನೆತನಗಳು ಕರ್ನಾಟಕರಾಜ್ಯವೆಂದುಇಡೀದಕ್ಷಿಣ ಭಾರತವನ್ನು ವ್ಯಾಪಿಸಿತ್ತು ಇದು ನಾವು ಅಭಿಮಾನ ಪಡುವಂತಹ ಸಂಗತಿಎನ್ನಬಹುದು.ಕನ್ನಡ ಸತ್ವಅಡಗಿದ್ದು ೯ನೆಯ ಶತಮಾನದಕವಿರಾಜಮಾರ್ಗ ಮತ್ತು ಹತ್ತನೆಯ ಶತಮಾನದ ಆದಿಕವಿ ಪಂಪನ ಸಾಹಿತ್ಯದಿಂದಎಂದುಕಡೆಂಗೊಡ್ಲು ಶಂಕರಭಟ್ಟರುಅಭಿಪ್ರಾಯ ಪಡುತ್ತಾರೆ.ಆ ಕನ್ನಡದ ಸತ್ವವನ್ನು ಹನ್ನೆರಡನೆಯ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸುವುದರ ಮೂಲಕ ಇಮ್ಮಡಿಗೊಳಿಸಿದರು ಎಂದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದಡಾ.ಜಯಶ್ರೀದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ ಹಾಗೂ ದತ್ತಿ ದಾಸೋಹಿಗಳಾದ ಶ್ರೀ ಶರಣಕುಮಾರ ಬಿಲ್ಲಾಡ ಉಪಸ್ಥಿತ್ತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here