ಸುರಪುರ ತಾಲೂಕು ಪಂಚಾಯತಿ ಸಾಮಾನ್ಯ ಸಭೆ: ಅಭಿವೃಧ್ಧಿ ಕಾರ್ಯಗಳಿಗೆ ಅನುಮೋದನೆ

0
72

ಸುರಪುರ: ತಾಲೂಕಿನಲ್ಲಿ ಕಳೆದ ಏಪ್ರಿಲ್ ತಿಂಗಳನಿಂದ ಇಲ್ಲಿಯವರೆಗೆ ೧೬೫೯ ಜನರಿಗೆ ಕರೊನಾ ವೈರಸ್ ತಗುಲಿದೆ ಇದರಲ್ಲಿ ೧೦ ಜನರು ಮೃತರಾಗಿದ್ದು ಇನ್ನು ೧೧೫೩ ಜನರು ಗುಣಮುಖರಾಗಿದ್ದು ಉಳಿದಂತೆ ೫೦೬ ಜನ ಹೊಂ ಕ್ವಾರಂಟೈನಲ್ಲಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಆರ್.ವಿ.ನಾಯಕ ಹೇಳಿದರು.

ನಗರದ ತಾಲುಕು ಪಂಚಾಯತ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಕರೊನಾ ವ್ಯರಸ್ ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ ಆದರೂ ಸಹ ಈ ವೈರಸ್ ಕುರಿತು ಜಾಗೃತಿ ವಹಿಸುವುದು ಅತ್ಯವಶಕವಾಗಿದೆ ಇನ್ನು ವೈರಸ್‌ಗೆ ನಿಖರವಾದ ಔಷಧಿ ಬಂದಿಲ್ಲಾ ಇನ್ನು ಔಷಧಿಬರುವುದು ಎರಡುಮೂರು ತಿಂಗಳುಗಳು ಬೇಕು ಔಷಧಿ ಬರುವವರಿಗೆ ಜನರು ಕಡ್ಡಾಯವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ ಧರಸಿ ಸೊಂಕು ತಗುಲದಂತೆ ಜಾಗೃತಿವಸಬೇಕು ಕರೊನಾ ತಪಾಸಣೆಗಾಗಿ ಮೊಬೈಲ್ ಟೆಸ್ಟಿಂಗ್ ಟೀಮಗಳನ್ನು ರಚಿಸಿ ಕರೊನಾ ತಪಾಸಣೆಯು ನಿರಂತರವಾಗಿ ನಡೆದಿದೆ ಹಾಗೂ ಸುರಪುರ ಮತಕ್ಷೇತ್ರಕ್ಕೆ ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜುರಾತಿಗಾಗಿ ಪ್ರಸ್ತಾವಣೆ ಸಲ್ಲಿಸಲಾಗಿದೆ ಮತ್ತು ಗರ್ಭೀಣಿ ಸ್ತ್ರೀಯರಿಗಾಗಿ ಇನ್ನೇರಡು ಮೂರುದಿನಗಳಲ್ಲಿ ತಾಲೂಕು ಆಸ್ಪತ್ರೆಯಲ್ಲು ಸ್ಕ್ಯಾನಿಂಗ್ ಸೆಂಟರ್ ನ್ನು ತೆಗೆಯಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಈಈ ಹಣಮಂತಪ್ಪ ಅಂಬ್ಲಿ ಮಾತನಾಡಿ ತಾಲೂಕಿನಲ್ಲಿ ಒಟ್ಟು ೭೦ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅದರಲ್ಲಿ ೪೮ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಇನ್ನು ೨೨ ಘಟಕಗಳು ಸ್ಥಗಿತವಾಗಿವೆ ಇದರಲ್ಲಿ ಈಗಾಗಲೆ ಸ್ಥಗಿತವಾಗಿರುವ ಕುರಿತು ತ್ವರಿತವಾಗಿ ಕ್ರಮವಹಿಸುವಂತೆ ಈಗಾಗಲೆ ಸಂಬಂಧಿಸಿದ ಗುತ್ತಿಗೆ ಪಡೆದ ಏಜೆನ್ಸಿಗಳಿಗೆ ತಿಳಿಸಲಾಗಿದೆ ಎಂದರು
ನಂತರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ವರದಿ ಮಂಡಿಸಿ ತಾಲೂಕಿನಲ್ಲಿ ಈಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಮತ್ತು ಕ್ಷೇತ್ರದ ೫ ರೈತ ಸಂಪರ್ಕ ಕೇಂದ್ರದಲ್ಲಿಕ್ಕೆ ಸಂಬಂದಿಸಿದಂತೆ ೧೭ ಕ್ವಿಂಟಾಲ್ ಹೆಸರು, ೭೦೨ ಕ್ವಿಂಟಾಲ ತೋಗರಿ ೧೧ ಕ್ವಿಂಟಾಲ ಸಜ್ಜೆ ೩ ಕ್ವಿಂಟಾಲ ಸೂರ್ಯಕಾಂತಿ, ೧ ಕ್ವಿಂಟಾಲ ಮೆಕ್ಕೆ ಜೋಳದ ಬೀಜಗಳನ್ನು ರೈತರಿಗೆ ಸಹಾಯಧನದ ವಿತರಿಸಲಾಗಿದೆ ಎಂದರು ಸದಸ್ಯರೊಬ್ಬರು ಶೇಂಗಾ ಬೀಜ ವಿತರಿಸುವಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಒದಗಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ.

ಸುರಪುರ ಮತ್ತು ಕೆಂಭಾವಿ ಸಂಪರ್ಕ ಕೇಂದ್ರಕ್ಕೆ ಹೆಚ್ಚುವರಿಯಾಗಿ ಬೀಜಗಳನ್ನು ವಿತರಿಸಲಾಗಿದೆ ಕಕ್ಕೇರಿ ಸಂಪರ್ಕಕೇಂದ್ರ ಸೇರಿದಂತೆ ಇನ್ನಿತರೆ ಕೇಂದ್ರಗಳಿಗೆ ಬೇಡಿಕೆಗೂ ಕಡಿಮೆ ಬೀಜಗಳನ್ನು ವದಗಿಸಲಾಗಿದೆ ಇದರಿಂದಾಗಿ ರೈತರು ಪ್ರತಿದಿನ ಸಂಪರ್ಕ ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನವಾಗುತ್ತಿಲ್ಲ ಎಂದರು. ಸದಸ್ಯರ ಮಾತಿಗೆ ಸ್ಪಷ್ಟನೆ ನೀಡುವಲ್ಲಿ ಅಧಿಕಾರಿ ತಡವಡಿಸಿದ ಘಟನೆ ಜರುಗಿತು.

ಇನ್ನು ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಇಲಾಖಾ ವಾರು ವರದಿ ಮಂಡಿಸಿದರು.ಅಲ್ಲದೆ ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ವ್ಯಾಪ್ತಯಿಂದ ಮುಂದೆ ನಡೆಸಬಹುದಾದ ಅಭಿವೃಧ್ಧಿ ಕಾರ್ಯಗಳಿಗೆ ಸರ್ವಾನುಮತ ದಿಂದ ಅನುಮೋದನೆ ಪಡೆಯಲಾಯಿತು.

ಸಭೆಯಲ್ಲಿ ತಾಲೂಕು ಪಂಚಾಯತ ಅಧ್ಯಕ್ಷೆ ಶಾರದಾ ಭಿಮಣ್ಣ ಬೇವಿನಾಳ, ಉಪಾಧ್ಯಕ್ಷ ಮಂಜುಳಾ ಸಾಹೇಬಗೌಡ, ಸದಸ್ಯರಾದ ಕವಿತಾ ಮಲ್ಲಣ್ಣ ಹೆಗ್ಗೇರಿ, ಬೈಲಪ್ಪಗೌಡ, ನಂದಣ್ಣಗೌಡ ಪ್ರಭುಗೌಡ ಬೇನಕಳ್ಳಿ, ದೊಡ್ಡಕೊತ್ಲಪ್ಪ ಹಾವೀನ, ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here