ಕಲಬುರಗಿ: ಪ್ರವಾದಿ ಮೊಹಮ್ಮದ್(ಸ.ಅ) ಹುಟ್ಟು ಹಬ್ಬ(ಈದ್ ಮಿಲಾದುನ್ನಬಿ) ಆಚರಣೆ ನಿಮಿತ್ತ ಅಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಹಾಗೂ ಮರ್ಕಜಿ ಸಿರತ್ ಕಮೀಟಿಯ ಸಂಯೋಕ್ತ ಆಶ್ರಯದಲ್ಲಿ ಮೂರುದಿನಗಳ ಖಿರಾತ್, ಅಝಾನ್, ನಾಥ್, ಕ್ವೀಜ್, ಎಸ್.ಎ ಹಾಗೂ ಭಾಷಣ ಸ್ಪರ್ಧೆ ಒಳಗೊಂಡಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಆಯೋಜಿಸಲಾಯಿತು.
ಇದೆ 14,15 ಮತ್ತು 16 ರಂದು ನಯಾ ಮೊಹಲ್ಲಾದ ಹಜ್ ಹಮೀಟಿಯಲ್ಲಿ ಸ್ಪರ್ಧೆಗಳು ಆಯೋಜಿಸಗಿದ್ದು, ಒಟ್ಟು 350 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗವಿಸಿದರು.
ದಿವಂಗತ ಮಾಜಿ ಸಚಿವರಾದ ಖಮರುಲ್ ಇಸ್ಲಾಂ ಅವರ ನಿಧನದಿಂದ ಸತತ ನಾಲ್ಕು ವರ್ಷಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಸಂಪೂರ್ಣವಾಗಿ ಕುಠಿತವಾಗಿದ್ದು, ಡಾ.ಅಸಗರ್ ಚುಲಬುಲ್ ಅವರು ಪುನರ್ ಚಾಲನೆ ನೀಡಿರುವುದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.
ಆಲ್ ಇಂಡಿಯಾ ಮಿಲಿ ಕೌನ್ಸಲ್ ಉತ್ತರ ಕರ್ನಾಟಕದ 13 ಜಿಲ್ಲೆಯ ಕಾರ್ಯದರ್ಶಿಯಾದ, ಡಾ. ಮೊಹಮ್ಮದ್ ಅಸಗರ್ ಚುಲಬುಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತಿನಲ್ಲಿ ಅಶಾಂತಿ ಹಾಗೂ ಸಮಸ್ಯೆಗಳು ತಾಂಡವ ಆಡುತ್ತಿದ್ದು, ಸುಖ ಜೀವನಕ್ಕಾಗಿ ಜನರು ಹೈರಾಣಗಾಗುತ್ತಿದ್ದಾರೆ. ಜೀವನದಲ್ಲಿ ತೃಪ್ತಿ ಹಾಗೂ ಶಾಂತಿ ಬೇಕಾಗಿದರೆ ಖುರಾನ್ ಮತ್ತು ಹದಿಸ್ ಹಾಗೂ ಮೊಹಮ್ಮದ್ ಪೈಗಂಬರ್ ಅವರ ತತ್ವ ಸಿದ್ಧಾಂತ ಅಳವಡಿಸಿಕೊಳಬೇಕು ಎಂದು ಕರೆ ನೀಡಿದರು.
ಇಸ್ಲಾಂ ಧರ್ಮ ಶಾಂತಿ, ಶಿಸ್ತುಪಾಲನೆಯ ಧರ್ಮವಾಗಿದ್ದು, ಭಯೋತ್ಪದಾನೆ, ಉಗ್ರವಾದ, ಹಿಂಸೆಗೆ ಎಂದು ಅವಕಾಶ ನೀಡಿಲ್ಲ. ಪ್ರತಿಯೊಬ್ಬರಿಗೂ ಸಮಾನರು ಸಮಾನ ಕಾನೂನು ಜಾರಿ ಪ್ರೇರಣೆ ನೀಡಿದ್ದು ಪ್ರವಾದಿ ಮೊಹಮ್ಮದ್ ಪೈಗಂಬರ್ ಎಂದು ಎಂದು ಸ್ಮರಿಸಿದರು.
ಸ್ಪರ್ಧೆಯಲ್ಲಿ ಭಾವಹಿಸಿ ವಿಜತೆರಾದ 30 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳ ಕುರಿತು ಅಂತಿ ನಿರ್ಧಾರವನ್ನು ಡಿಸೆಂಬರ್ ತಿಂಗಳಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನಕ್ಕೆ ಆಯ್ಕೆಯಾದ ವಿಜೆತರ ಅಂತಿಮವಾಗಿ ಆಯ್ಕೆ ಮಾಡಲಾಗುವುದೆಂದು ಎಂದು ಅವರು ತಿಳಿಸಿದರು.
ಪ್ರಥಮ ಬಹುಮಾನ 7000, ದ್ವೀತಿಯ ಬಹುಮಾನ 5000, ತೃತೀಯ ಬಹುಮಾನ 3000 ಹಾಗೂ 2000 ಸಾವಿರ ಪುರಸ್ಕಾರಕ್ಕೆ ಹೊಂದಿದೆ ಎಂದು ತಿಳಿಸಿದರು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪುಸ್ತಕಗಳು ವಿತರಿಸಲಾಗುವುದೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಮೌಲಾನಾ ಅಫಜಲ್ ಬರಕಾತಿ, ಮೌಲಾನಾ ಜಾವಿದ್ ಆಲಂ ಕಾಸ್ಮಿ, ಮೌಲಾ ಉವೇಸ್ ಖಾದ್ರಿ, ಮೌಲಾನಾ ಸೈಯದ್ ಮೊಹಮ್ಮದ್, ಹುಸೈನಿ, ಮೌಲಾನಾ ಗೌಸೋದ್ದಿನ್ ಖಾಸ್ಮಿ, ಹಾಫಿಜ್ ರಾಫಿಕ್ ಪಾಶಾ, ಸೈಯದ್ ತಯ್ಯಬ್ ಅಲಿ , ಸಖಿ ಸರಮಸ್ತ್, ಯುಸುಫ್ ಖುರೇಷಿ ಪಾಶಾ ಖಾದ್ರಿ, ಮೌಲಾ ಶಫಿಕ್ ಅಹ್ಮದ್ ಖಾಜಿ, ಮೌಲಾನಾ ಸಾಧಿಕ್ ಬಿನ್ ಆದಂ, ಮೌಲಾನಾ ಅಪತಾಬ್ ನೂರಿ, ಮೌಲಾನಾ ಹಮಿದ್, ಅಜಿಜುಲ್ಲಾ ಮುಫ್ತಿ, ಕುಕ್ನುದ್ದೀನ್, ಮೌಲಾನಾ ಮೊಹಮ್ಮದ್ ಜಿಲಾನಿ, ಮುಸ್ತಾಖ್ ಅಹ್ಮದ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.