ಕಲಬುರಗಿ: ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಗಲ್ ಚಾಕು, ಪರ್ದಾ ಚಾಕು, ಕುಕ್ರಿ ಚಾಕು, ಪಂಚ್, ಬಟನ್ ಚಾಕು, ನೇಪಾಳ ಚಾಕು, ಸ್ಟೀಕ್ ಚಾಕು, ಆಟಿಕೆ ರಿವಾಲ್ವರ್ ಗಳು ಆಕ್ರಮ ಮಾರಾಟ ಮಾಡುತ್ತಿದ ವ್ಯಕ್ತಿಯನ್ನು ಬಂಧಿಸಿ ಮಾರಕಾಸ್ತ್ರಗಳು ಜಪ್ತಿ ಮಾಡಿಕೊಂಡಿದ್ದಾರೆ.
ನಗರದ ಜುಬೇರ್ ಕಾಲೋನಿ ನಿವಾಸಿಯಾದ ಮಹ್ಮದ ರಿಹಾನ್ ಖಾನ್ ಶಮಶುಜಮಾ ಖಾನ್ (40) ಬಂಧಿತ ಆರೋಪಿ. ಠಾಣೆಯ ಪಿಐ ಅಸ್ಲಂಬಾಷಾ, ಅಪರಾಧ ವಿಭಾಗದ ಪಿ.ಎಸ್.ಐ ವಾಹೀದ ಕೋತ್ವಾಲ್ ನೇತೃತ್ವದ ತಂಡದ ಎ.ಎಸ್.ಐ ನಿಜಲಿಂಗಪ್ಪ, ರಫೀಯೂದ್ದೀನ್, ಈರಣ್ಣ, ರಾಜಕುಮಾರ, ಶಿವಾನಂದ ನೇತೃತ್ವದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಬಂಧಿತ ಆರೋಪಿ ಮಾರಕಾಸ್ತ್ರಗಳು ಬಾಂಬೆ ಸಿರಾಜ್ ಎಂದಬುವರ ಹತ್ತಿರ ಖರೀದಿಸಿರುವುದಾಗಿ ಬಾಯಿ ಬಿಟ್ಟಿದ್ದು, ಬಂಧಿತ ಆರೋಪಿ ಹಾಗೂ ಬಾಂಬೆ ಸಿರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.