ವಿಶ್ವ ಶೌಚಾಲಯ 100 ದಿನಗಳ ಕಾರ್ಯಕ್ರಮ ಅಂಗವಾಗಿ ಬೀದಿ ನಾಟಕ

0
62

ಕಲಬುರಗಿ: ತಾಲೂಕಿನ ಬಬಲಾದ್ ಐಕೆ ಹಾಗೂ ಆಲಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಬಲಾದ್ ಐಕೆ, ಹಾಗೂ ಕೆರೂರು ಗ್ರಾಮಗಳಲ್ಲಿ ” ಜಲ ಜೀವನ್ ಮಿಷನ್ ಅಡಿಯಲ್ಲಿ ವಿಶ್ವ ಶೌಚಾಲಯ ಹಾಗೂ 100 ದಿನಗಳ ಕಾರ್ಯಕ್ರಮ ಅಂಗವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಹಾಗೂ ರೂಡಾ ಸಂಸ್ಥೆ ಧಾರವಾಡ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ರಾಜು ಕಂಬಾಳಿಮಠ, ರವರು ಭಾಗವಹಿಸಿ ಶೌಚಾಲಯ ನಿರ್ಮಾಣ ಮತ್ತು ಬಳಕೆ ಶುದ್ದ, ಸುರಕ್ಷಿತ ಕುಡಿಯುವ ನೀರಿನ ಬಳಕೆ ಮಾಡುವಂತೆ ಹೇಳಿದರು.

Contact Your\'s Advertisement; 9902492681

ವಿಶೇಷವಾಗಿ ಜನ ಜಾಗೃತಿ ಮೂಡಿಸಲು 100 ದಿನಗಳ ಒಳಗಾಗಿ ಶಾಲೆ,ಅಂಗನವಾಡಿ ,ಆಶ್ರಮ ಶಾಲೆಗಳಿಗೆ, ಮನೆ- ಮನೆಗೆ ಕುಡಿಯುವ ಕೊಳವೆ ನೀರು ನಳ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.

ಶ್ರೀ ಸಾಯಿ ಜನ ಜಾಗೃತಿ ಕಲಾ ತಂಡದಿಂದ ಜನರಿಗೆ ಮನಮುಟ್ಟುವ ರೀತಿಯಲ್ಲಿ ಬೀದಿನಾಟಕ ನಾಟಕ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಬಲಾದ ಐಕೆ ಗ್ರಾ.ಪಂ. ಪಿಡಿಓ ಸುಜಾತ ಅವರಾದಿ ,ಆಲಗೂಡ ಗ್ರಾ.ಪಂ.ಕಾರ್ಯದರ್ಶಿ ಇಮಾಮ್ ಪಟೇಲ್ ಅನುಷ್ಠಾನ ಸಂಸ್ಥೆಯ ತಂಡದ ನಾಯಕರಾದ ಸಂತೋಷ್ ಮುಲಗೆ, ಸಿಬ್ಬಂದಿ ಶ್ರವಣಕುಮಾರ ಅಕ್ಕಿಮನಿ ,ಕಲಾವಿದರಾದ ಗಂಗುಬಾಯಿ ಕೌವಲಗಿ, ಶಶಿಕಾಂತ ನಿರಗುಡಿ, ಚಂದ್ರಕಾಂತ , ಇಂದು ಬಾಯಿ ಸುತಾರ್, ಮಲ್ಲಿನಾಥ ,ಶ್ರೀಮಂತ ಹರಸೂರು ಅಂಗನವಾಡಿ ಹಾಗೂ ಶಾಲಾ ಶಿಕ್ಷಕರು, ಹಾಗೂ ಊರಿನ ಗ್ರಾಮಸ್ಥರು,ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here