ಕಲಬುರಗಿ: ಸರ್ಕಾರದ ಆದೇಶದಂತೆ ಕಲಬುರಗಿ ನಗರದ ಸಾರ್ವಜನಿಕರು ಹೊಸದಾಗಿ ನೀರು ಸರಬರಾಜು (ನಳ) ಹಾಗೂ ಒಳ ಚರಂಡಿ ಸೇವೆಗಳಿಗಾಗಿ ಮಂಡಳಿಯಿಂದ ‘ಜಲನಿಧಿ’ ಆನ್‍ಲೈನ್ ತಂತ್ರಾಂಶವನ್ನು ಜಾರಿಗೆ ತರಲಾಗಿದೆ.
ನಗರದ ಸಾರ್ವಜನಿಕರು ಹೊಸದಾಗಿ ನೀರು ಸರಬರಾಜು (ನಳ) ಹಾಗೂ ಒಳ ಚರಂಡಿ ಸೇವೆಗಳಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನೀರು ಸರಬರಾಜು ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಸಾರ್ವಜನಿಕರು ಹೊಸದಾಗಿ ನಳ/ಒಳ ಚರಂಡಿ ಸಂಪರ್ಕಕ್ಕಾಗಿhttp://www.mrc.gov.in/jalanidhi/index.do ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸೂಕ್ತ ದಾಖಲಾತಿಗಳೊಂದಿಗೆ ಜಲನಿಧಿ ಆನ್‍ಲೈನ್ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕಾಗುತ್ತದೆ. ಅಪ್‍ಲೋಡ್ ಮಾಡಿರುವ ಹೊಸ ನಳ/ಒಳ ಚರಂಡಿ ಸಂಪರ್ಕದ ಅರ್ಜಿಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಇದಕ್ಕೆ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಿ, ಈ ಸೇವೆಯ ಸದುಪಯೊಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.