ಕೊರೋನಾ ಸಂಕಷ್ಟದಲ್ಲಿಯೂ ಶ್ರೀ ಚರಣ್ ಸೌಹಾರ್ದ ಬ್ಯಾಂಕಿಗೆ 159.30 ಲಕ್ಷ ರೂಪಾಯಿ ಲಾಭ

0
53

ಬೆಂಗಳೂರು: ಕೊರೋನಾದಿಂದ ವಿಶ್ವದಾದ್ಯಂತ ಆರ್ಥಿಕ ಸಂಕಷ್ಟ ಇದ್ದಾಗ್ಯೂ ಶ್ರೀ ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ 2019-20 ನೇ ಹಣಕಾಸು ಸಾಲಿನಲ್ಲಿ 159.30 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ.

ಬ್ಯಾಂಕಿನ ಈ ಸಾಧನೆ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿರುವ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ದ್ವಾರಕನಾಥ್ ಅವರು, “2019-20 ನೇ ಹಣಕಾಸು ಸಾಲಿನಲ್ಲಿ ಬ್ಯಾಂಕು ತನ್ನ 10 ಶಾಖೆಗಳಲ್ಲಿ ಷೇರು ಬಂಡವಾಳ, ಠೇವಣಾತಿಯ ಸಂಗ್ರಹ, ಸದಸ್ಯರಿಗೆ ಸಮಗ್ರ ರೀತಿಯಲ್ಲಿ ಸಾಲಗಳ ವಿತರಣೆ ಮತ್ತು ಹೂಡಿಕೆಗಳ ನಿರ್ವಹಣೆ ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ’’ ಎಂದು ತಿಳಿಸಿದರು.

Contact Your\'s Advertisement; 9902492681

2020 ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 2019-20 ನೇ ಸಾಲಿನಲ್ಲಿ ಷೇರು ಬಂಡವಾಳದೊಂದಿಗೆ 4459.65 ಲಕ್ಷ ರೂಪಾಯಿಗಳಷ್ಟು ಸ್ವಂತ ನಿಧಿಯನ್ನು ಕ್ರೋಢೀಕರಿಸಿದೆ ಮತ್ತು 72,417.26 ಲಕ್ಷ ರೂಪಾಯಿಯಷ್ಟು ದುಡಿಯುವ ಬಂಡವಾಳದೊಂದಿಗೆ ಪ್ರಗತಿಪಥದೆಡೆಗೆ ಸಾಗಿದೆ ಎಂದು ಅವರು ಹೇಳಿದರು.

ವಿಶ್ವದಾದ್ಯಂತ ಕೊರೋನಾ ವೈರಸ್ ನ ಪರಿಣಾಮದಿಂದ ತೀವ್ರ ಸಂಕಷ್ಟ ಎದುರಾಗಿದೆ. ಆರ್ಥಿಕ ಕ್ಷೇತ್ರದ ಮೇಲೆ ಇದರ ಪರಿಣಾಮ ಸಾಕಷ್ಟು ಆಗಿದೆ. ಆದರೆ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ನಮ್ಮ ಬ್ಯಾಂಕ್ 1,59,30,000 ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿರುವುದು ನಮಗೆಲ್ಲರಿಗೂ ಸಂತಸವನ್ನುಂಟು ಮಾಡಿದೆ ಎಂದರು.

ಬ್ಯಾಂಕಿನ ಈ ಅಭೂತಪೂರ್ವವಾದ ಸಾಧನೆಗೆ ನಮ್ಮ ನೆಚ್ಚಿನ ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು ಮತ್ತು ಹಿತೈಷಿಗಳು ಕಾರಣರಾಗಿದ್ದಾರೆ. ಅವರಿಗೆ ನಮ್ಮ ಬ್ಯಾಂಕಿನ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here