ಮರಾಠಾ ಅಭಿವೃದ್ಧಿ ಪ್ರಾಧಿಕಾರ ರದ್ದತಿಗೆ ಆಗ್ರಹಿಸಿ ಸ್ವಾಭಿಮಾನಿ ಬಣದ ಪ್ರತಿಭಟನೆ

0
36

ಕಲಬುರಗಿ: ರಾಜ್ಯ ಸರ್ಕಾರವು ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಕೂಡಲೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಉತ್ತರ ಕರ್ನಾಟಕವು ಪ್ರಸ್ತುತ ಸಂದರ್ಭದಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಕೊಚ್ಚಿ ಹೋಗಿದೆ. ಬೆಳೆಗಳು ನಾಶವಾಗಿವೆ. ಸಂತ್ರಸ್ತ ಪ್ರವಾಹ ಪೀಡಿತರಿಗೆ ಹಾಗೂ ರೈತರಿಗೆ ನೆರವು ನೀಡದೇ ಸರ್ಕಾರವು ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸುವ ಮೂಲಕ ಮರಾಠಿಗರನ್ನು ಓಲೈಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

Contact Your\'s Advertisement; 9902492681

ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಮರಾಠಿಗರು ಸಹ ಸ್ವಾಗತಿಸಿಲ್ಲ. ಪ್ರಾಧಿಕಾರ ರಚನೆಯಿಂದ ವಿಜಯೋತ್ಸವ ಆಚರಿಸಿದ್ದು ಎಲ್ಲಿಯೂ ಕಂಡುಬಂದಿಲ್ಲ. ಇದರಿಂದಾಗಿ ಪ್ರಾಧಿಕಾರ ರಚನೆ ಮರಾಠಿಗರಿಗೆ ಅಗತ್ಯವಿಲ್ಲ. ಅವರ ಬೇಡಿಕೆಗಳನ್ನು ಇಡೇರಿಸದೇ ಪ್ರಾಧಿಕಾರ ರಚಿಸಿದ್ದು ಸರಿಯಲ್ಲ ಎಂದು ಅವರು ವಿರೋಧಿಸಿದರು.

ಕೂಡಲೇ ಮರಾಠಾ ಪ್ರಾಧಿಕಾರವನ್ನು ರದ್ದುಪಡಿಸಿ, ಬಿಡುಗಡೆ ಮಾಡಿರುವ ೫೦ ಕೋಟಿ ರೂ.ಗಳ ಅನುದಾನವನ್ನು ಅತಿವೃಷ್ಟಿ ಪೀಡಿತ ಸಂತ್ರಸ್ತರಿಗೆ ಕೊಡುವ ಮೂಲಕ ರಾಜ್ಯದ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು. ಕರ್ನಾಟಕದಲ್ಲಿ ನೆಲೆಸಿರುವ ಅನ್ಯ ಭಾಷಿಕರಿಗೆ ಒಂದೊಂದು ಪ್ರತ್ಯೇಕ ನಿಗಮಗಳನ್ನು ರಚಿಸಿದರೆ ಮುಂದೊಂದು ದಿನ ಕನ್ನಡಿಗರು ಭಯ ಭೀತಿಗೊಳ್ಳುವಂತಾಗುತ್ತದೆ. ಆದ್ದರಿಂದ ಕೂಡಲೇ ಪ್ರಾಧಿಕಾರವನ್ನು ರದ್ದುಪಡಿಸಿ, ಅವರ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಚನ್ನವೀರ ಗೌರೆ, ಜಿಲ್ಲಾ ಗೌರವಾಧ್ಯಕ್ಷ ಸುರೇಶ ಗೌರೆ ಹಾಗೂ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here