ದುರ್ಬಲ ವರ್ಗಗಳ ದಿನಾಚರಣೆ ಜೊತೆಗೆ ಕಾನೂನು ಅರಿವು ಕಾರ್ಯಕ್ರಮ

0
86
ಮಾಲೂರು: ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತನಾಯಕನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ತಾಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಲೂರು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹ 2020 ರ ಅಂಗವಾಗಿ “ದುರ್ಬಲ ವರ್ಗಗಳ ದಿನಾಚರಣೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಸಮಾಜದಲ್ಲಿರುವ ದುರ್ಬಲ ವರ್ಗದವರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ನೀಡುವುದೇ ಕಾನೂನು ಸೇವಾ ದಿನದ ಆಚರಣೆಯ ಉದ್ದೇಶವಾಗಿದೆ. ಕಾನೂನು ವ್ಯವಸ್ಥೆಯ ಕಾರ್ಯಾಚರಣೆಗಳನ್ನು ಸುರಕ್ಷಿತವಾಗಿರಿಸಲು ಲೋಕ ಅದಾಲತ್‌ಗಳನ್ನು ಆಯೋಜಿಸಲಾಗುತ್ತದೆ ಹಾಗೂ ಸಮಾನತೆಯ ಆಧಾರದ ಮೇಲೆ ಸದಾಚಾರವನ್ನು ಪ್ರೋತ್ಸಾಹಿಸಲಾಗುತ್ತದೆ. ದೇಶದ ಪ್ರತಿಯೊಂದು ದುರ್ಬಲ ನಾಗರಿಕರಿಗೆ ಉಚಿತ ಕಾನೂನು ಸಹಾಯ ಹಾಗೂ ಅವರಿಗಿರುವ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಭಾರತದಾದ್ಯಂತ ಈ ದಿನವನ್ನು ಆಯೋಜಿಸಲಾಗುತ್ತದೆ ಎಂದರು.
ಈ ಸಮಾರಂಭದಲ್ಲಿ ಮಾಲೂರು ತಹಶೀಲ್ದಾರ್ ಮಂಜುನಾಥ್, ಶ್ರೀಮತಿ ಅಂಬಿಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಲೂರು, ರೆವಿನ್ಯೂ ಸೆಕ್ರೆಟರಿ ಶಿವಕುಮಾರ್, ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಎಂ. ನಾಗರಾಜ, ಎನ್. ಭಾನುಮತಿ ಮುಖ್ಯಶಿಕ್ಷಕರು, ಸಹಶಿಕ್ಷಕರಾದ ಕೆ.ಎಸ್. ರಾಜಶೇಖರಯ್ಯ, ರಾಜಣ್ಣ, ಊರಿನ ಗ್ರಾಮಸ್ಥರಾದ ದೊಡ್ಡ ಹನುಮಂತಪ್ಪ, ಚಿಕ್ಕ ಹನುಮಂತಪ್ಪ, ವೆಂಕಟೇಶ್, ಮಂಜುನಾಥ್, ಅಂಜಿನಪ್ಪ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here