ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹೆಚ್ಚುವರಿ ಕಟ್ಟಡ ಉದ್ಘಾಟನೆ

0
74

ಜೇವರ್ಗಿ: ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹೆಚ್ಚುವರಿ ಕಟ್ಟಡ ವಿಧಾನಸಭೆ ಪ್ರತಿಪಕ್ಷದ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕರಾದ ಡಾ. ಅಜಯ್ ಸಿಂಗ್ ಉದ್ಘಾಾಟಿಸಿದರು.

ಈ ವೇಳೆಯಲ್ಲಿ ಮಾತನಾಡಿದ ಶಾಸಕ ಅಜಯ ಸಿಂಗ್ ನಮ್ಮ ತಾಲ್ಲೂಕಿನಲ್ಲಿ ದೊಡ್ಡಮಟ್ಟದ ಕಾಲೇಜು ಉದ್ಘಾಟನೆ ಮಾಡುತ್ತಿರುವುದು  ಸಂತಸ ಉಂಟುಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿಗಳಾದ ದಿ.ಧರ್ಮಸಿಂಗ್ ಅವರನ್ನು ನವರ ಕಾಲದಲ್ಲಿ ಉದ್ಘಾಟನೆಯಾದ ಪ್ರಥಮ ದರ್ಜೆ ಕಾಲೇಜ್ ,ಹೆಚ್ಚುವರಿ ಕೊಠಡಿಯಾಗಿ ನಾನು ಇವತ್ತು ಉದ್ಘಾಟನೆ ಮಾಡುತ್ತೇನೆ ಎಂದರೆ ಅದು ನನ್ನ ಜೀವನದಲ್ಲಿಯೇ ಶಾಶ್ವತವಾಗಿ ನೆನಪಿಡು ಸಂಗತಿ ಎಂದು ಮಾಜಿ ಸಿಎಂ ದಿವಂಗತ ಧರ್ಮ್ ಸಿಂಗ್ ಅವರಿಗೆ ಸ್ಮರಿಸಿದರು.

ಕಾಲೇಜು ಆವರಣದಲ್ಲಿನ ವಿವಿಧ ನೂತನ ರೂ.6.05 ಕೋಟಿ ಅಂದಾಜು ವೆಚ್ಚದ ಕಟ್ಟಡಗಳ ಉದ್ಘಾಟನಾ ಮಾಡಲಾಗಿದೆ ಇದರ ಸದುಪಯೋಗವನ್ನು ಜೇವರ್ಗಿ ತಾಲೂಕಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೇವಲ ಕಲಾ ವಿಭಾಗದಲ್ಲಿ ಮಾತ್ರ ವಿದ್ಯಾರ್ಥಿಗಳು ಓದುತ್ತಿದ್ದರು ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ವಿಜ್ಞಾನ ಹಾಗೂ ಶಿಕ್ಷಣ ವಿಭಾಗದಲ್ಲಿ ಸುಮಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಕೊಠಡಿಗಳ ಸಂಖ್ಯೆ ಕೊರತೆಯಿದ್ದ ಕಾರಣ ಹೌಸಿಂಗ್ ಬೋರ್ಡ್ ನಿಗಮ ವತಿಯಿಂದ ಈ ಹೆಚ್ಚುವರಿ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯರಾದ ಡಾ.ಬಸವರಾಜ್ ಕೊಂಬಿನ್ ಮಾತನಾಡಿ, ನಮ್ಮ ಕಾಲೇಜಿಗೆ ಕೆಲವು ಸಿಬ್ಬಂದಿಗಳ ಕೊರತೆ ಇದೆ ಸಿಬ್ಬಂದಿಗಳ ನೇಮಿಸಬೇಕು ಕಾಲೇಜಿಗೆ ವಿಶೇಷವಾಗಿ ಟಿಸಿ ಅಳವಡಿಸಬೇಕು ಎಂದು ಮನವಿ ಮಾಡಿಕೊಂಡರು. ನಮ್ಮ ಕಾಲೇಜು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮವಾದ ಕಟ್ಟಡ ಹೊಂದಿದೆ ಎಂದು ಹೆಸರುಪಡೆದಿದೆ ಅದು ಶಾಸಕರ ಸಹಕಾರದಿಂದ ಎಂದು ಹೇಳಿದರು.

ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಕರಿಘೋಳೇಶ್ವರ, ವಿಷ್ಣುವರ್ಧನ್, ವಿನೋದ್, ಗುರುಪ್ರಸಾದ್ ಹೂಗಾರ್, ಕಾಲೇಜ್ ಸಿಬ್ಬಂದಿಗಳು ಸೇರಿದಂತೆ ನೂತನ ಕಟ್ಟಡ ಕಾಮಗಾರಿ ಗುತ್ತಿಗೆದಾರರಾದ ನಾರಾಯಣ ಸಿಂಗಡಿ ಪ್ರಥಮ ದರ್ಜೆ ಗುತ್ತೇದಾರರು, ಸಿ. ಡಿ ಅಂಬಾರು, ಎ. ಇ. ಇ. ಭಾಷಾ, ಜೂನಿಯರ್ ಇಂಜಿನಿಯರ್ ಗಿರೀಶ್, ಶರಣು ಚೋಲು ಕಿರಿಯ ಅಭಿಯಂತರರು, ಲ್ಯಾಂಡ್ ಅರ್ಮಿ ಇಲಾಖೆಯ ಎ.ಇ.ಇ ಬಸವರಾಜ್ ಎಂ, ಸತೀಶ್ ಬಿಟಿ ಜೂನಿಯರ್ ಇಂಜಿನಿಯರ್ ಲ್ಯಾಂಡರ್ ಆರ್ಮಿ ಇಲಾಖೆ, ಮುಖಂಡರಾದ ರಾಜಶೇಖರ್ ಸಿರಿ ಚಂದ್ರಶೇಖರ್ ಹರನಾಳ, ರವಿ ಕೊಳಕೂರ್, ಮರಪ್ಪ ಸರಡಗಿ, ಪಕ್ಷದ ಮುಖಂಡರು ಕಾಲೇಜು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here