ಸುರಪುರ: ಕಾಂಗ್ರೆಸ್ ಪಕ್ಷದ ಕೆಲಸ ಎಲ್ಲಾ ಸಮುದಾಯಗಳನ್ನು ಮತ್ತು ರಾಜ್ಯವನ್ನು ಒಂದುಗೂಡಿಸುವ ಕೆಲಸ,ಆದರೆ ಬಿಜೆಪಿಯದು ರಾಜ್ಯ ಮತ್ತು ಸಮುದಾಯಗಳನ್ನು ಹೊಡೆಯುವ ಕೆಲಸವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ತಿಳಿಸಿದರು.
ನಗರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಮರಾಠ ಅಭಿವೃಧ್ಧಿ ನಿಗಮಕ್ಕೆ ೫೦ ಕೋಟಿ ನೀಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿ,ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಗಳ ಅಭಿವೃಧ್ಧಿಯನ್ನು ನೋಡುತ್ತದೆ ಆದರೆ ಬಿಜೆಪಿ ಕೆಲಸ ಸಮುದಾಯಗಳನ್ನು ಹೊಡೆಯುವುದಾಗಿದೆ ಎಂದರು.
ಅಲ್ಲದೆ ಮಸ್ಕಿ ಮತ್ತು ಬಸವಕಲ್ಯಾಣ ಚುನಾವಣೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ,ಬೆಂಗಳೂರು ಚುನಾವಣೆಯೆ ಬೇರೆ ಇಲ್ಲಿಯ ಚುನಾವಣೆಯೆ ಬೇರೆ.ರಾಜಾರಾಜೇಶ್ವರಿ ನಗರದಲ್ಲಿ ಬಿಜೆಪಿ ಪಕ್ಷದ ಚುನಾವಣೆ ಮಾಡಿದ ರೀತಿ ಬೇರೆ,ಅದು ನಮಗೂ ಮಾಡಲು ಬರುತ್ತದೆ ಆದರೆ ನಾವು ಶಿರಾ ಮತ್ತು ರಾಜಾ ರಾಜೇಶ್ವರಿ ನಗರದಲ್ಲಿ ಯಾಮಾರಿದ್ದೇವೆ ಆದರೆ ಮಸ್ಕಿ ಬಸವಕಲ್ಯಾಣದಲ್ಲಿ ಆಗಲ್ಲ ಎರಡೂ ಕ್ಷೇತ್ರಗಳನ್ನು ಗೆದ್ದು ತೋರಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಇನ್ನು ಪಕ್ಷದಲ್ಲಿನ ನಾಯಕರ ಮದ್ಯದ ಹೊಂದಾಣಿಕೆ ಕುರಿತು ಕೇಳಲಾದ ಪ್ರಶ್ನೆಗೆ ನಮ್ಮಲ್ಲಿ ಯಾವ ನಾಯಕರ ಮದ್ಯ ಏನು ಗೊಂದಲವಿಲ್ಲ,ಆದರೆ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದು ಬೇರೆ ರಾಜ್ಯದ ಸುದ್ದಿ ಇಲ್ಲಿಯದಲ್ಲ ಅದರ ಬಗ್ಗೆ ನಮ್ಮ ಹಿರಿಯ ನಾಯಕರಾದ ಖರ್ಗೆ ಅವರಿಂದ ಉತ್ತರ ಪಡೆಯುವಂತೆ ಹೇಳಿ ಜಾರಿಕೊಂಡರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಜನುಮ ದಿನದ ಶುಭಾಶಯವನ್ನು ಕೋರಿದರು.ಇದಕ್ಕು ಮುನ್ನ ಡಿಕೆ ಶಿವಕುಮಾರ ಸುರಪುರ ನಗರಕ್ಕೆ ಆಗಮಿಸುತ್ತಿದ್ದಂತೆ ಯೂತ್ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿ ಕರೆ ತಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾಜಿ ಸಂಸದ ಬಿ.ವಿ.ನಾಯಕ ಹಾಗು ಮುಖಂಡರಾದ ಸೂಲಪ್ಪ ಕಮತಗಿ ರಾಜಾ ರೂಪಕುಮಾರ ನಾಯಕ ರಾಜಾ ವೇಣುಗೋಪಾಲ ನಾಯಕ ರಾಜಾ ಸಂತೋಷ ನಾಯಕ ರಾಜಾ ಕುಮಾರ ನಾಯಕ ಕೆಪಿಸಿಸಿ ಪದಾಧಿಕಾರಿಗಳಾದ ಅಬ್ದುಲ್ ಅಲೀಂ ಗೋಗಿ ರಮೇಶ ದೊರೆ ಆಲ್ದಾಳ ಹಾಗು ಸೂಗುರೇಶ ವಾರದ ಅಬ್ದುಲ ಗಫೂರ ನಗನೂರಿ ರಾಜಾ ವಿಜಯಕುಮಾರ ನಾಯಕ ರಾಜಾ ಸುಶಾಂತ ನಾಯಕ ದಾವೂದ್ ಪಠಾಣ್ ಸೇರಿದಂತೆ ಅನೇಕರಿದ್ದರು.