ಸುರಪುರ: ತಾಲೂಕಿನ ಅರಳಳ್ಳಿ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಮಾಜಿ ಶಾಸಕರಾದ ರಾಜಾ ವೆಂಕಟಪ್ಪನಾಯಕ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಎಲ್ಲರಿಗು ಪಕ್ಷದ ಶಾಲು ಹಾಕಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡಿ, ಈ ಕರೊನಾ ಮಹಾಮಾರಿಯಿಂದಾಗಿ ಬಹಳಷ್ಟು ಜನರು ಸಂಕಷ್ಟದಲ್ಲಿದ್ದಾರೆ ಜನರು ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇತಂಹ ಸಮಯದಲ್ಲಿ ಆಡಳಿತದಲ್ಲಿರುವವರು ಜನರ ಕಷ್ಟಕ್ಕೆ ಆಗಬೇಕಾಗಿತ್ತು ಆದರೆ ತಮ್ಮ ವೈಯಕ್ತಿಕ ಕೆಲಸಕ್ಕೆ ಬಡಿದಾಡುತ್ತಿದ್ದಾರೆ ಇದು ಖಂಡನೀಯವಾಗಿದೆ.
ಈ ಸಮಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಿರಿ ಇಂದಿನಿಂದ ನೀವೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿ ಕೆಲಸಮಾಡಿ ನಿಮ್ಮೊಂದಿಗೆ ನಾನು ಮತ್ತು ಕಾಂಗ್ರೆಸ್ ಪಕ್ಷ ಸದಾ ಇರುತ್ತೇವೆ ಎಂದು ಸೇರ್ಪಡೆಗೊಂಡವರನ್ನುದ್ದೇಶಿಸಿ ಮಾತನಾಡಿದರು.
ದೇವಪ್ಪ ಬಡಿಗೇರ, ಮಾಹದೇವ ಅನವರ, ಲಚಮಯ್ಯ ಬೆಸಲಾಳ, ಆದಪ್ಪ ಬಡಿಗೇರ, ಅಮರೇಶ ಬಡಿಗೇರ, ಮಾನಪ್ಪ ಬಡಿಗೇರ, ಯಮುನಪ್ಪ ಬಲಶಟ್ಟಿಹಾಳ, ಅಮರೇಶ ಬಲಶಟ್ಟಿಹಾಳ, ಸಿದ್ದಪ್ಪ ಬಲಶಟ್ಟಿಹಾಳ, ಬಸವರಾಜ ಬಲಶಟ್ಟಿಹಾಳ, ಬಸವರಾಜ ಕೂಡ್ಲಗಿ, ಮಾನಪ್ಪ , ರಂಗಪ್ಪ ಪೈದೊಡ್ಡಿ, ಮಾನಪ್ಪ ಪೈದೊಡ್ಡಿ, ಮಲ್ಲಪ್ಪ ಪೈದೊಡ್ಡಿ, ದುರಗಪ್ಪ ಬಲಶಟ್ಟಿಹಾಳ ಮತ್ತಿತರರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠ್ಠಲ ವಿ ಯಾದವ, ಗೋಪಾಲದಾಸ ಲಡ್ಡಾ, ನಿಂಗಣ್ಣ ಬಾದ್ಯಾಪುರ, ರಾಜಾ ಸಂತೋಷ ನಾಯಕ, ರಾಜಾ ಕೃಷ್ಣದೇವರಾಯ ನಾಯಕ, ರಾಜಾ ರಾಮಪ್ಪನಾಯಕ ಜೆಜಿ, ರಾಜಾ ಅಪ್ಪುನಾಯಕ, ರಾಮುನಾಯಕ ಅರಳಳ್ಳಿ, ಅಮರೇಶ ಸಾಹು ಉಪಸ್ಥಿತರಿದ್ದರು.