ಬುದ್ಧನ ಭೌದ್ಧ ಧರ್ಮವು ಎಲ್ಲರಿಗೂ ಸ್ಪೂರ್ತಿದಾಯವಾದದ್ದು-ಧಮ್ಮದೀಪ ಭಂತೇಜಿ

0
80

ಶಹಾಬಾದ:ಆಸೆಯೇ ದುಃಖಕ್ಕೆ ಮೂಲವೆಂಬ ಮಂತ್ರದಿಂದ ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತೋರಿಸಿದ ಭಗವಾನ ಬುದ್ಧನ ಭೌದ್ಧ ಧರ್ಮವು ಎಲ್ಲರಿಗೂ ಸ್ಪೂರ್ತಿದಾಯಕವಾದದ್ದು ಎಂದು ಬೀದರನ ಧಮ್ಮದೀಪ ಭಂತೇಜಿ ಹೇಳಿದರು.

ಅವರು ನಗರದ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಲಾದ ಬುದ್ಧನ ನಡೆ ಕಾರ್ಯಕ್ರಮದಲ್ಲಿ ಮುಖ್ಯ ಸಾನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಜಗತ್ತಿನಲ್ಲಿ ಬಹುತೇಖ ಜನರು ತಮ್ಮೊಳಗೆ ದುಃಖ ಮತ್ತು ಸಂತಾಪವನ್ನು ತುಂಬಿಕೊಂಡಿರುವಾಗ ಅದರ ಪರಿಣಾಮ ಸ್ವಾಭಾವಿಕವಾಗಿಯೇ ಇಡೀ ಜಗತ್ತು ದುಃಖದಿಂದ ತುಂಬಿಹೋಗುತ್ತದೆ.ಪರಿಣಾಮವಾಗಿ ಹಿಂಸೆ ಮತ್ತು ವಿನಾಶ ಕಂಡುಬರುತ್ತದೆ.ಈ ವಾಸ್ತವಿಕತೆ ಅರ್ಥವಾಗದ ಹೊರತು ಬುದ್ಧ ಮತ್ತು ಆತನ ದಾರಿ ನಮಗೆ ಅರ್ಥವಾಗುವುದಿಲ್ಲ.ಎಲ್ಲಾ ಕಾಲಕ್ಕೂ ಸಲ್ಲುವ ಬುದ್ಧನ ಪ್ರೀತಿ ಮತ್ತು ಕರುಣೆ ಎಂಬ ಶಾಶ್ವತ ಸತ್ಯವನ್ನು ನಾವು ಅರಿತಾಗ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಸರಳ ಬದುಕಿನ ನಿಜ ಸಂತಸಗಳ ಹುಡುಕಲು ಬೇಕಿರುವುದು ಇರುವುದರಲ್ಲಿಯೇ ಆ ಕ್ಷಣಕ್ಕೆ ಜೀವಿಸುವುದೇ ಎಲ್ಲವೂ ಆಗುವುದು.ಅಲ್ಲದೇ ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಚಿಂತಿಸದೇ ವರ್ತಮಾನ ಕಾಲದಲ್ಲಿ ಒದಗಿರುವ ಸ್ಥಿತಿಯನ್ನು ತೃಪ್ತಿ ಮನೋಭಾವನೆಯಿಂದ ಸ್ವೀಕರಿಸಿದ ವ್ಯಕ್ತಿ ಪ್ರಪಂಚದಲ್ಲಿಯೇ ಹೆಚ್ಚು ಸುಖಮಯವಾಗುತ್ತಾನೆ ಎಂಬ ಸತ್ಯವನ್ನು ಅರಿಯಬೇಕಾಗಿದೆ ಎಂದು ಹೇಳಿದರು.

ಇದೇ ಸಮಯದಲ್ಲಿ ತ್ರಿಸರಣ ಪಂಚಶೀಲ ಪಠಣ ಭೋಧಿಸಲಾಯಿತು.ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಮಹಾದೇವ ತರನಳ್ಳಿ, ಶರಣು ಧನ್ನೇಕರ್, ತಿಪ್ಪಣ್ಣ ಧನ್ನೇಕರ್, ಸುನೀಲ ಮೆಂಗನ, ಗಣೇಶ ಜಾಯಿ,ಲಕ್ಷ್ಮಣ ಕೊಲ್ಲೂರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here