ಶಹಾಬಾದ:ಕೊರೊನಾ ವೈರಸ್ ಬಗ್ಗೆ ಜಾಗೃತಗೊಂಡು ಸಾರ್ವಜನಿಕರು ಮಾಸ್ಕ ಹಾಗೂ ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಿಕೊಂಡು, ಸಮಯಕ್ಕೆ ಸರಿಯಾಗಿ ಕೈತೊಳೆಯುತ್ತ ಇದ್ದರೇ ಮುಂದೆ ಬರುವ ಗಡಾಂತರದಿಂದ ಪಾರಾಗಬಹುದೆಂದು ನಗರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ.ಕೆ ಹೇಳಿದರು.
ಅವರು ಮಂಗಳವಾರ ಕೋವಿಡ್-19 ನಿಮಿತ್ತ ನಗರದ ಗೃಹ ರಕ್ಷಕ ದಳದ ವತಿಯಿಂದ ಆಯೋಜಿಸಲಾದ ಕೊರೊನಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ಈಗಾಗಲೇ ಸಾವಿರಾರು ಜನರ ಜೀವ ತೆಗೆದಿದೆ.ಅದರ ತೀವ್ರತೆ ಹಾಗೂ ರೋಗದ ಬಗ್ಗೆ ಎಲ್ಲಾ ಅರಿತಿದ್ದಾರೆ. ಎಲ್ಲಾ ಜನರಿಗೂ ಕೋವಿಡ್-19 ಬಗ್ಗೆ ತಿಳುವಳಿಕೆಯಿದ್ದರೂ ಸಾಮಾಜಿಕ ಅಂತರ, ಮಾಸ್ಕರ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದು ನೋಡಿದರೇ, ಮುಂದೆ ಗಡಾಂತರ ಬರಬಹುದು.ಆದ್ದರಿಂದ ಕೋವಿಡ್-19 ಎರಡನೇ ಬರದ ಹಾಗೇ ಮಾಡಲು ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ ಧರಿಸಿ, ಸ್ಯಾನಿಟೈಜರ್ ಬಳಸಿ ಎಂದು ಹೇಳಿದರು.
ನಗರದ ಗೃಹ ರಕ್ಷಕ ದಳದ ಪ್ರಭಾರಿ ಘಟಕಾಧಿಕಾರಿ ಸಿದ್ದು.ಎಸ್.ಕುಂಬಾರ ಮಾತನಾಡಿ,ನಾವು ಆರೋಗ್ಯ ಕಾಪಾಡುವುದರ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಆದ್ದರಿಂದ ನಾವು ಮಾಸ್ಕ್ ಧರಿಸಬೇಕು.ಅಲ್ಲದೇ ಮತ್ತೊಬ್ಬರಿಗೂ ಮಾಸ್ಕ ಧರಿಸುವಂತೆ ತಿಳಿಸಬೇಕು.ಇಲ್ಲದೇ ಹೋದರೆ ಕೊರೊನಾ ಆಹ್ವಾನಕ್ಕೆ ದಾರಿಯಾಗುತ್ತದೆ.ಆರೋಗ್ಯ ಭಾಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಆರೋಗ್ಯದಿಂದ ಇದ್ದಾಗ ಮಾತ್ರ ಮತ್ತೊಂದು ಮಾಡಲು ಸಾಧ್ಯ ಎಂಬ ಅರಿವು ಜನರು ಮನದಟ್ಟು ಮಾಡಿಕೊಳ್ಳಬೇಕೆಂದು ಹೇಳಿದರು. ಇದೇ ಸಮಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು.
ಎಎಸ್ಐಗಳಾದ ಮೆಹತಾಬ ಪಟೇಲ್, ಧನಸಿಂಗ ರಾಠೋಡ, ಹುಸೇನ ಪಾಷಾ,ಸಿದ್ದು, ಶಿವಯೋಗಿ ದೊರೆಪಗೌಡ,ವಿಕಾಸ ರಾಠೋಡ, ರಮೇಶ ಔರಾದಿ, ಶಿವಯೋಗಿ ಅಮರೇಶ, ಆನಂದ, ಮಾಶಪ್ಪ, ಅನುಸೂಯಾ ರಸ್ತಾಪೂರ,ಮಂಜುಳಾ ರೆಡ್ಡಿ, ಸಲ್ಮಾ, ದತ್ತು ಕುಸಾಳೆ ಇತರರು ಇದ್ದರು.