ಸುರಪುರ: ನಗರದ ಜಲಾಲ ಮೊಹಲ್ಲಾದ ನಿವಾಸಿಗಳಿಗೆ ನೀರಲಿಲ್ಲದೆ ಪರದಾಡುವಂತಾಗಿದೆ ಮೋಹಲ್ಲಾದಲ್ಲಿ ಟ್ಯಾಂಕರ ಮೂಲಕ ನೀರು ಸರಬರಾಜುಮಾಡಲು ಸರಿಯಾದ ಮಾರ್ಗವವಿಲ್ಲದ ಕಾರಣ ಕೊಳವೆ ಬಾವಿ ಕೊರೆಯಿಸಿ ನೀರು ಪೊರೈಸುವಂತೆ ಮೊಹಲ್ಲಾದ ನಿವಾಸಿಗಳು ಒತ್ತಾಯಿಸಿದ್ದಾರೆ.
ನಗರದ ಜಲಾಲ ಮೊಹಲ್ಲಾದ ನಿವಾಸಿಗಳಿಂದ ನಗರಸಭೆ ಕಚೇರಿ ಎದುರುಗಡೆ ಸೋಮವಾರ ಕುಡಿಯುವ ನೀರು ಒದಗಿಸುವಂತೆ ಪ್ರತಿಭಟನೆ ನಡೆಸಿ ವಿವಿಧ ಮುಖಂಡರು ಮಾತನಾಡಿ ನಮ್ಮ ಓಣಿಗೆ ಸರಿಯಾದ ರಸ್ತೆ ಇಲ್ಲದ ಕಾರಣದಿಂದ ಟ್ಯಾಂಕರಗಳು ಬರುವುದಿಲ್ಲ ಮತ್ತು ಬಾವಿಗಳಿಲ್ಲದ, ಇನ್ನು ನದಿಯ ನೀರಂತು ತಿಂಗಳಿಗೊಮ್ಮೆ ನೀರು ಪೊರೈಸುತ್ತಾರೆ ಅದುಕೂಡಾ ಒಂದು ಗಂಟೆ ಮಾತ್ರ ನೀರು ಒದಗಿಸುತ್ತಾರೆ ನೀರಿಗೆ ತುಂಬಾ ತೊಂದರೆ ಇದೆ ಮೊಹಲ್ಲಾವನ್ನು ಸಂಪರ್ಕಿಸುವ ರಸ್ತೆಯಲ್ಲಿ ಒಂದು ಕೊಳವೆ ಬಾವಿ ಇದೆ ಅಲ್ಲಿಂದ ಪೈಪ ಲೈನ್ ಮೂಲಕ ನೀರು ಕಲ್ಪಿಸುವಂತೆ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಅವರಿಗೆ ನಮ್ಮ ಗೋಳು ಕೇಳಿಸುತ್ತಿಲ್ಲಾ ಒಂದು ವಾರದಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸದೆ ಇದ್ದಲ್ಲಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪೌರಾಯುಕ್ತರಿಗೆ ಬರೆದ ಮನವಿ ಪತ್ರವನ್ನು ಕಚೇರಿಯ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಮತ್ತು ಲಕ್ಷ್ಮಣ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜಾ ರಾಮಪ್ಪ ನಾಯಕ ಜೇಜಿ, ಅಹ್ಮದ್ ಪಠಾಣ, ಮಸೂದ್, ಶಕೀಲಸಾಬ ಸೌದಾಗರ, ಅಬ್ದುಲ್ ಖಾದರ, ಸೈಯದ್ ಮುಸ್ತಾಕ, ಶಿವಪ್ಪ ಕಟ್ಟಿಮನಿ, ಆದಿಲ್ ಜಾಪರ, ಸೋಫಿಸಾಬ, ದಾವುದ್ ಪಠಾಣ, ಮಹ್ಮದ್ ಜಿಲಾನಿ, ಶೇಕ ಅಬ್ದುಲ್ ಮೈಬೂಬ, ಬಸಂತ, ಸುರೇಶ ಚಿನ್ನಾಕರ, ವೆಂಕಟೇಶ ಚಿನ್ನಾಕರ, ಅನ್ನವರ ಬಡಿಗೇರ, ಆಪರೋಜ ಸೌದಾಗರ, ಮಹ್ಮದ ರಫಿಕ, ಮೋನೊದ್ದಿನ್‌ಸಾಬ ಸೇರಿದಂತೆ ಇನ್ನಿತರರಿದ್ದರು.