ರಾಷ್ಟ್ರವ್ಯಾಪಿ ಮುಷ್ಕರದ ಅಂಗವಾಗಿ ಸುರಪುರದಲ್ಲಿ ಕಾರ್ಮಿಕ ಸಂಘಟನೆಗಳ ಹೋರಾಟ

0
41

ಸುರಪುರ: ವಿವಿಧ ಕಾರ್ಮಿಕ ಸಂಘಟನೆಗಳು ಎಐಯುಟಿಯುಸಿ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಮುಷ್ಕರದ ಅಂಗವಾಗಿ ಸುರಪುರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮುಷ್ಕರ ಕುರಿತು ಅನೇಕ ಮುಖಂಡರು ಮಾತನಾಡಿ,ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಗಳು ಕಾರ್ಮಿಕರನ್ನು ಮತ್ತು ರೈತರನ್ನು ಸಂಪೂರ್ಣ ಕಡೆಗಣಿಸಿವೆ,ಅಲ್ಲದೆ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರ ದೇಶದ ಕಾರ್ಮಿಕರನ್ನು ಸಂಪೂರ್ಣವಾಗಿ ಮುಗಿಸಲು ನಿಂತಿವೆ ಎಂದು ಆಕ್ರೋಶ ವ್ಯಕ್ತೊಪಡಿಸಿದರು.

Contact Your\'s Advertisement; 9902492681

ಬೀದಿ ಬದಿ ವ್ಯಾಪಾರಿಗಳು ಮನೆಯ ಕೆಲಸಗಾರರು ಬಿಸಿಯೂಟ ಕಾರ್ಮಿಕರು ಕಟ್ಟಡ ನಿರ್ಮಾಣ ಕಾರ್ಮಿಕರು ಬೀಡಿ ಕಾರ್ಮಿಕರು ಹಮಾಲಿ ಕಾರ್ಮಿಕರು ರಿಕ್ಷಾ ಎಳೆಯುವವರು ದಿನಗೂಲಿ ನೌಕರರು ಹೀಗೆ ನೂರಾರು ವರ್ಗಗಳ ಕಾರ್ಮಿಕರು ಇಂದು ಒಂದು ದಿನದ ಉಟಕ್ಕೂ ಗತಿಯಿಲ್ಲದ ಸ್ಥಿತಿಯಲ್ಲಿದ್ದಾರೆ,ಇಂತಹ ಸಂದರ್ಭದಲ್ಲಿ ಸರಕಾರ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರ ಮರಣ ಶಾಸನಕ್ಕೆ ನಿಂತಿವೆ ಇದನ್ನು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ಇನ್ನು ರೈತರಿಗೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲ, ರೈತರಿಗೆ ಯಾವುದೇ ಸೌಲಭ್ಯಗಳಿಲ್ಲ,ರೈತರ ಬೆಳೆಗಳಿಗೆ ಸ್ವಾಮಿನಾಥನ ವರದಿ ಆಧಾರದ ಮೇಲೆ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು,ಕೃಷಿ ಮಸೂದೆಯನ್ನು ಕೈಬಿಡಬೇಕು,ಕಾರ್ಮಿಕರ ವಿರೋಧಿ ಕಾನೂನುಗಳನ್ನು ಕೈಬಿಡಬೇಕು,ಗ್ರಾಮೀಣ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕನಿಷ್ಠ ೨೦೦ ದಿನಗಳ ಕೂಲಿ ನೀಡಬೇಕು,ಆದಾಯ ತೆರಿಗೆಯಿಂದ ಹೊರಗಿರುವ ಕುಟುಂಬಗಳಿಗೆ ೭೫೦೦ ರೂಪಾಯಿಗಳ ನಗರದು ವರ್ಗಾವಣೆ ನೀಡಬೇಕು ಮತ್ತು ತಿಂಗಳಿಗೆ ೧೦ ಕೆಜಿ ಪಡಿತರ ನೀಡಬೇಕು,ಆಶಾ ಅಂಗನವಾಡಿ ಸೇರಿದಂತೆ ಹೊರ ಗುತ್ತಿಗೆ ದಿನಗೂಲಿ ನಿಶ್ಚಿತ ವೇತನ ಇತ್ಯಾಇದ ಹೆಸರಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ೨೧ ಸಾವಿರ ವೇತನ ನೀಡಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.

ಇದಕ್ಕು ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿಯನ್ನು ನಡೆಸಿ ಸರಕಾರಗಳ ವಿರುಧ್ಧ ಘೋಷಣೆಗಳನ್ನು ಕೂಗಿದರು.ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಧರಣಿ ನಡೆಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಾರ್ಯಾಲಯದ ಸಿರಸ್ಥೆದಾರ ಸೋಮನಾಥ ನಾಯಕ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ದೇವಿಂದ್ರಪ್ಪ ಪತ್ತಾರ ಡಿ.ಉಮಾದೇವಿ ಸುರೇಖಾ ಕುಲಕರ್ಣಿ ಚನ್ನಪ್ಪ ಆನೆಗುಂದಿ ಬಸ್ಸಮ್ಮ ಆಲ್ಹಾಳ ಮಲ್ಲಯ್ಯ ವಗ್ಗಾ ಧರ್ಮಣ್ಣ ದೊರೆ ಯಲ್ಲಪ್ಪ ಚಿನ್ನಾಕಾರ ಯಮುನಾ ಕಕ್ಕೇರಾ ಹಣಮಂತ್ರಾಯ ಮಡಿವಾಳ ಶೈಜಾಜ ಬೇಗಂ ತಿಮ್ಮಣ್ಣ ದೊರೆತಿಮ್ಮಯ್ಯ ತಳವಾರ ಈರಪ್ಪ ದೊರೆ ಕಾಮಣ್ಣ ರಾಧಾಬಾಯಿ ಲಕ್ಷ್ಮೀಪುರ ಕಮಲಾಬಾಯಿ ಮಹಿಬೂಬ ರಾಮನಗೌಡ ಗೂಗಲ್ ಆನಂದ ಕಟ್ಟಿಮನಿ ರಫೀಕ ಸುರಪುರ ರಾಮಯ್ಯ ಬೋವಿ ಅಬ್ದುಲ್ ರೌಫ್ ಗೋವಿಂದ ಪತ್ತಾರ ವೆಂಕಟೇಶ ಕುಪಗಲ್ ಕಾಶೀಬಾಯಿ ಸಂಗೀತಾ ಈರಮ್ಮ ಬಸಮ್ಮ ಹಣಮವ್ವ ತಿಪ್ಪಬಾಯಿ ಮರೆಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here