ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭ : ವೇಳಾಪಟ್ಟಿ ಪ್ರಕಟ

0
91

ಸುರಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ೨೦೨೦-೨೫ನೇ ಅವಧಿಯ ಸುರಪುರ ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆ ಪ್ರಕ್ರಿಯೆ ಇಂದಿನಿಂದ ಪ್ರಾರಂಭಗೊಳ್ಳಲಿದ್ದು ವೇಳಾಪಟ್ಟಿ ಪ್ರಕಟಿಸಲಾಗಿದ್ದು ಇಂದಿನಿಂದ (ನ೨೬ರಿಂದ) ಚುನಾವಣಾ ಪ್ರಕ್ರಿಯೆಗಳು ಪ್ರಾರಂಭಗೊಳ್ಳುವುದು ಎಂದು ಚುನಾವಣಾಧಿಕಾರಿಗಳಾದ ಕೆ.ಎಲ್.ವಸಂತಕುಮಾರ ಹಾಗೂ ಸಿದ್ದಪ್ಪ ಹೊಸಗೌಡರ್ ತಿಳಿಸಿದ್ದಾರೆ.

ನ೨೬ ರಿಂದ ೨೮ರವರೆಗೆ ನಾಮಪತ್ರಗಳ ವಿತರಣೆ, ೨೮ ರಂದು ಸಂಜೆ ೫ಗಂಟೆವರೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ನಗರದ ಶಂಷೀರಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಾಲಯದಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು ಅಂದೇ ಸಂಜೆ ೬.೩೦ಗಂಟೆವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ.

Contact Your\'s Advertisement; 9902492681

ನ೨೯ ರಂದು ಸಂಜೆ ೪ಗಂಟೆಯವರೆಗೆ ನಾಮಪತ್ರ ವಾಪಾಸು ಪಡೆಯಲು ಕೊನೆಯ ದಿನಾಂಕವಾಗಿದ್ದು ಡಿ೬ ರಂದು ಬೆಳಿಗ್ಗೆ ೮.೩೦ ರಿಂದ ಸಂಜೆ ೪ಗಂಟೆಯವರೆಗೆ ಮತದಾನ ನಡೆಯುವುದು ಅಂದೇ ಸಂಜೆ ೫.೩೦ರ ನಂತರ ಮತಗಳ ಎಣಿಕೆ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here