ಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದಿಂದ ಸಂವಿಧಾನ ಸಮರ್ಪಣಾ ದಿನಾಚಾರಣೆ

0
39

ಕಲಬುರಗಿ: ಸಂವಿಧಾನದ ಮೂಲ ಆಶಯಗಳು ಜನರಿಗೆ ತುಲುಪುವಂತಾಗಬೇಕು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಾಗೃತ ಮೂಡಿಸುವ ಕೆಲಸವಾಗಬೇಕು ಅಪ ಪ್ರಚಾರ ಮಾಡುವವರಿಗೆ ದೇಶದ್ರೋಹ ಪಟ್ಟಕಟ್ಟಿ ಕಠಿಣ ಶಿಕ್ಷೆಗೆ ಗುರುಪಡಿಸುವಂತಾಗಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯಾಧ್ಯಕ್ಷ ಎ.ಬಿ.ಹೊಸಮನಿ ಹೇಳಿದರು.

ನಗರದ ಜಗತ್ತವೃತ್ತದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಬಳಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ನಗರ ಘಟಕದ ವತಿಯಿಂದ 71ನೇ ಸಂವಿಧಾನ ಸಮರ್ಪಣಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ ತಳ ಸಮುದಾಯದ ಅಭಿವೃದ್ಧಿಯಾದಾಗ ಮಾತ್ರ ಆಡಳಿತ ನಡೆಸುವ ಪಕ್ಷಗಳನ್ನು ಜನರು ಮೆಚ್ಚಿಕೊಳ್ಳುತ್ತಾರೆ ಹಾಗೂ ಸಂವಿಧಾನಕ್ಕೆ ಗೌರವ ಬರುತ್ತದೆ ಎಂದರು.

Contact Your\'s Advertisement; 9902492681

ರಾಜ್ಯ ಪ್ರ.ಕಾರ್ಯದರ್ಶಿ ಮಂಜೂರುಲ್ ಹಸನ್ ಮಾತನಾಡಿ ದೇಶದಲ್ಲಿ ಸಂವಿಧಾನವಿದ್ದರೂ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿವೆ ಸವಿಧಾನದ ಪಾಲನೆ ಮಾಡದ ಸರ್ಕಾರವನ್ನು ಜನರು ಕಿತ್ತೆಸೆಯಬೇಕು ಎಂದು ಹೇಳಿದರು.

ನಗರಾಧ್ಯಕ್ಷ ಡಾ.ಶಂಕರರಾವ ಎಂ.ಕಿಲ್ಲೇದಾರ ಪ್ರಸ್ತಾವಿಕ ಮಾತನಾಡುತ್ತಾ ಬ್ರಿಟಿಷರ ಕಪಿಮುಷ್ಠಯಿಂದ ಭಾರತ ದೇಶವು ಸ್ವಾತಂತ್ರ್ಯವಾಯಿತು ಸಂವಿಧಾನದ ಅವಶ್ಯಕತೆ ಇತ್ತು. ಆಗ ಪ್ರಥಮ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ ಹಾಗೂ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ಅವರು ಡಾ:ಬಿ.ಆರ್.ಅಂಬೇಡ್ಕರ್‍ರವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.

ಸಂವಿಧಾನವನ್ನು ರಚನೆ 2 ವರ್ಷ, 11 ತಿಂಗಳು, 17 ದಿನಗಳಲ್ಲಿ, 395 ವಿಧಿಗಳು, 22 ಭಾಗಗಳು, 284 ಸದಸ್ಯರ ಸಹಿವುಳ್ಳ ಸಂವಿಧಾನವನ್ನು ಸಿದ್ಧಗೊಳಿಸಿ ನವಂಬರ 26, 1949ರಂದು ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ ಹಾಗೂ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ಅವರಿಗೆ ಸಂವಿಧಾನವನ್ನು ಸಮರ್ಪಿಸಿದರು. ವಿಶ್ವವೇ ಮೇಚ್ಚುವ ಅದ್ಭುತ ಮತ್ತು ದೊಡ್ಡ ಸಂವಿಧಾನವನ್ನೆ ನೀಡಿದ್ದಾರೆ ಎಂದು ಹೇಳಿದರು.

ನ್ಯಾಯವಾದಿ ಬಸಣ್ಣ ಸಿಂಗೆ, ರಾಜ್ಯ ಸಮಿತಿ ಸದಸ್ಯರಾದ ದತ್ತಾತ್ರೇಯ ಸೂರ್ಯವಂಶಿ, ಶೇಳ್ಳಗಿ ದೇವಿಂದ್ರ, ಜಿಲ್ಲಾಧ್ಯಕ್ಷ ದತ್ತಾತ್ರೇಯ ಕಾಂಬಳೆ, ಕರ್ನಾಟಕ ಸಮತಾ ಸೈನಿಕದಳ ವಿಭಾಗೀಯ ಅಧ್ಯಕ್ಷ ಸಂಜೀವ ಟಿ.ಮಾಲೆ, ಮಹಿಳಾ ಅಧ್ಯಕ್ಷೆ ಗುಂಡಮ್ಮ ದೊಡ್ಡಮನಿ, ಯಾದಗಿರಿ ಜಿಲ್ಲಾಧ್ಯಕ್ಷ ತಿಮ್ಮಣ್ಣ ಬಡಿಗೇರ, ಯುವ ಘಟಕದ ಅಧ್ಯಕ್ಷ ಅಭಿಷೇಕ ಚಕ್ರವರ್ತಿ, ಲೀಲಾವತಿ ಗಾಯಕವಾಡ, ಮಹಾಂತೇಶ ಹೂವಿನಹಳ್ಳಿ, ಭೀಂಆಶಂಕರ ಕಟ್ಟಿ ಸಂಗಾವಿ, ಶಿವಲಿಂಗಪ್ಪ ಹತಗುಂದಿ, ರೇವಣಸಿದ್ದಪ್ಪ ಘಾಳೆನೂರೆ, ಹಣಮಂತಪ್ಪ ಗಾರಂಪಳ್ಳಿ, ಶರಣಪ್ಪ ವಾಡೇಕಾರ, ನಂದಕುಮಾರ ತಳಕೇರಿ, ಅಮೃತಪ್ಪ ಹುಣಸಿಹಡಲಗಿ, ಸುಗಂಧಾ ಪೂಜಾರಿ, ಎಂ.ಎನ್.ಸುಗಂಧಿ, ಗಿರಿಜಾಪತಿ ಪವಾರ್, ಸಿದ್ಧಾರ್ಥ ಬುದ್ಧವಿಹಾರ ಭಂತೆ ಸಂಘಾನಂದ ಪೂಜೆ ನೇರವೇರಿಸಿದರು. ಮಿಲಿಂದ ಕಣ್ಮುಸ್ ನಿರೂಪಿಸಿದರು ಅನಿಲ ದೇವರಮನಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here