ಅಂತರ್ಜಾಲ ಮೂಲಕ ೪೧ ನೇ ಶರಣಕಮ್ಮಟ: ಅನುಭವಮಂಟಪ ಉತ್ಸವ ಉದ್ಘಾಟನೆ

0
63

ಬಸವಕಲ್ಯಾಣ: ಬಸವಾದಿ ಶರಣರ ಕ್ರಾಂತಿಭೂಮಿ, ಲಿಂಗಾಯತ ಧರ್ಮೀಯರ ಧರ್ಮಭೂಮಿಯಾದ ಬಸವಕಲ್ಯಾಣದಲ್ಲಿ ಕಳೆದ ೪೦ ವರ್ಷಗಳಿಂದ ಪ್ರತಿವರ್ಷ ಶರಣಕಮ್ಮಟ ಆಚರಿಸುತ್ತಾ ಬರಲಾಗುತ್ತಿದೆ. ಈ ವರ್ಷ ಕೋವಿಡ್-೧೯ ಇರುವುದರಿಂದ ೪೧ ನೆಯ ಶರಣಕಮ್ಮಟ ಹಾಗೂ ಅನುಭವಮಂಟಪ ಉತ್ಸವ ಆನ್‌ಲೈನ್ ಮುಖಾಂತರ ದಿ: ೨೮ ಮತ್ತು ೨೯ ನವ್ಹೆಂಬರ್ ರಂದು ಎರಡು ದಿವಸಗಳು ಆಚರಿಸಲಾಯಿತು.

ರಾಮಚಂದ್ರನ್ ಆರ್. ಜಿಲ್ಲಾಧಿಕಾರಿಗಳು ಬೀದರ ಅವರಿಂದ ಧ್ವಜಾರೋಹಣ ನೆರವೇರುವುದು. ಶರಣಬಸಪ್ಪ ಕೊಟ್ಟಪ್ಪಗೋಳ, ಆಯುಕ್ತರು, ಬಸವಕಲ್ಯಾಣ ಅಭಿವೃದ್ಧಿ ಬಸವಕಲ್ಯಾಣ ಅವರಿಂದ ವಚನಪಠಣ, ಮತಿ ಸಾವಿತ್ರಿ ಶರಣು ಸಲಗರ, ತಹಸೀಲ್ದಾರರು ಮತ್ತು ಸುರೇಶ ಚನ್ನಶೆಟ್ಟಿ, ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೀದರ ಅವರಿಂದ ಬಸವಗುರುಪೂಜೆ ನೇರವೇರಿಸಲಾಗುವುದು. ವೈಜಿನಾಥ ಕಾಮಶೆಟ್ಟಿ, ಡಾ.ಎಸ್.ಬಿ.ದುರ್ಗೆ, ಕುಪೇಂದ್ರ ಪಾಟೀಲ, ಮತಿ ಮಾಲತಿ ಇವಳೆ, ಡಾ.ಸೋಮನಾಥ ಯಾಳವಾರ, ಧನರಾಜ ತಾಳಂಪಳ್ಳಿ, ಜಯರಾಜ ಖಂಡ್ರೆ, ಗುರುನಾಥ ಕೊಳ್ಳುರು, ಶೈಲೇಂದ್ರ ಬೆಲ್ದಾಳೆ ಅವರು ಉಪಸ್ಥಿತರಿರುವರು. ನವಲಿಂಗ ಪಾಟೀಲ ಹಾಗೂ ರಾಜಕುಮಾರ ಹೂಗಾರ ಸಂಗಡಿಗರಿಂದ ವಚನ ಗಾಯನ ನಡೆಯಿತು.

Contact Your\'s Advertisement; 9902492681

ಉದ್ಘಾಟನಾ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಪೂಜ್ಯ ರವಿಶಂಕರ ಗುರೂಜಿ, ಆರ್ಟ ಆಫ್ ಲಿವಿಂಗ್ ಬೆಂಗಳೂರು ಮತ್ತು ಪೂಜ್ಯ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರಾಘಮಠ ಧಾರವಾಡ ವಹಿಸಿಕೊಳ್ಳಲಿದ್ದಾರೆ. ಅನುಭವಮಂಟಪ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರಿಂದ ಆಶಯ ನುಡಿ ಕಲ್ಲಿದ್ದಲ್ಲು ಮತ್ತು ಗಣಿಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರಿಂದ ಕಾರ್ಯಕ್ರಮ ಉದ್ಘಾಟನೆ ನೆರವೇರುವುದು. ಅಧ್ಯಕ್ಷತೆ ವಿಶ್ವೇಶ್ವರ ಕಾಗೇರಿ ಸಭಾಪತಿಗಳು, ಕರ್ನಾಟಕ ಸರಕಾರ ಬೆಂಗಳೂರು ವಹಿಸಲಿದ್ದು, ಮುಖ್ಯಅತಿಥಿಗಳಾಗಿ, ಜಗದೀಶ ಶೆಟ್ಟರ್, ಬೃಹತ್ ಕೈಗಾರಿಕಾ ಸಚಿವರು, ಬೆಂಗಳೂರು, ಈಶ್ವರ ಖಂಡ್ರೆ, ಮಾಜಿಸಚಿವರು, ಶಾಸಕರು, ಭಾಲ್ಕಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತ ಸದಸ್ಯರು ಬೆಂಗಳೂರು, ಅನೀಲ ರಗಟೆ, ಅಧ್ಯಕ್ಷರು, ಬಸವೇಶ್ವರ ದೇವಸ್ಥಾನ ಪಂಚಕಮೀಟಿ ಬಸವಕಲ್ಯಾಣ, ಬಸವರಾಜ ಬಾಲಕೀಲೆ, ಸಹಕಾರ್ಯದರ್ಶಿಗಳು, ಬಸವೇಶ್ವರ ದೇವಸ್ಥಾನ ಪಂಚಕಮೀಟಿ ಕಾರ್ಯಕ್ರಮದ ಸ್ವಾಗತ ನುಡಿಯನ್ನು ನುಡಿದರು.

ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು, ಸಂಸ್ಥಾನ ಹಿರೇಮಠ ಹಾರಕೂಡ ಹಾಗೂ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸಾಣೇಹಳ್ಳಿ ಮತ್ತು ಪೂಜ್ಯ ಮ.ನಿ.ಪ್ರ.ಡಾ.ಶಿವಾನಂದ ಮಹಾಸ್ವಾಮಿಗಳು, ಹುಲಸೂರು ಅವರ ದಿವ್ಯ ಸಾನಿಧ್ಯದಲ್ಲಿ ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆ ವಹಿಸಿದರು.

ಖ್ಯಾತ ಚಲನಚಿತ್ರ ನಟರಾದ ಚೇತನಕುಮಾರ ಬೆಂಗಳೂರು ಹಾಗೂ ಡಾ.ವಚನಕುಮಾರ ಸ್ವಾಮಿ ಮೈಸೂರು ಅವರಿಂದ ಅನುಭಾವ ಇರುತ್ತದೆ. ಗೋವಿಂದ ಕಾರಜೋಳ, ರಾಜಶೇಖರ ಪಾಟೀಲ ಮುಖ್ಯ ಅತಿಥಿ ಸ್ಥಾನ ವಹಿಸಲಿದ್ದಾರೆ. ಕಾರ್ಯಕ್ರಮದ ಸ್ವಾಗತವನ್ನು ರವಿ ಕೋಳಕೂರು ಬಸವಕಲ್ಯಾಣ ಅವರು ನಡೆಸಿಕೊಟ್ಟಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here