ಡಿ.3ಕ್ಕೆ ಗಡಿನಾಡು ಕನ್ನಡ ಉತ್ಸವ

0
31

ಆಳಂದ: ಡಿ.೩ರಂದು ಪಟ್ಟಣದ ಗುರುಭವನ ಆವರಣದಲ್ಲಿ ಬೆಳಗಿನ ೧೧:೦೦ಗಟೆಗೆ ಗಡಿನಾಡು ಕನ್ನಡ ಉತ್ಸವ ಹಾಗೂ ಕೋವಿಡ್-೧೯ ಸಾಂಕ್ರಮಿಕ ರೋಗದ ವಿರುದ್ಧ ಉತ್ತಮ ಕೆಲಸ ನಿರ್ವಹಿಸಿದ ವಿವಿಧ ಕ್ಷೇತ್ರಗಳ ಮಹನೀಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ ಕೊರಳ್ಳಿ ಅವರು ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಪಟ್ಟಣದಲ್ಲಿ ಪ್ರಕಟಣೆ ನೀಡಿರುವ ಅವರು, ಸಮಾರಂಭದ ಸಾನ್ನಿಧ್ಯವನ್ನು ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮತ್ತು ಚಿಕ್ಕಮಂಗಳೂರು ಹೊದಲೂರ ಮಠದ ಋಷಬೇಂದ್ರ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.

Contact Your\'s Advertisement; 9902492681

ಸಂಘಟನೆಯ ರಾಜ್ಯ ಅಧ್ಯಕ್ಷ ಡಾ. ಬಿ.ಎನ್. ಜಗದೀಶ ಅಧ್ಯಕ್ಷತೆ ವಹಿಸುವರು. ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ ಮತ್ತು ವೀರಶೈವ ಸಮಾಜ ಜಿಲ್ಲಾ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಸಮಾರಂಭವನ್ನು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.

ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಸಮಾರಂಭದ ಜೋತಿ ಬೆಳೆಗಿಸುವರು. ನಾಡದೇವಿಯ ಭಾವಚಿತ್ರವನ್ನು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ ನೆರವೇರಿಸುವರು. ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಅವರು ಪುಷ್ಪಾರ್ಚನೆ ಕೈಗೊಳ್ಳುವರು. ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಸಿಪಿಐ ಮಂಜುನಾಥ ಎಸ್. ಸಂಘಟನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ, ಚಂದ್ರಕಾಂತ ಚವ್ಹಾಣ, ರಾಕೇಶ ಕಲ್ಲೂರ, ಬಿಜಾಪೂರದ ಬಸವಲಿಂಗಪ್ಪಗೌಡ ಇಂಗಳಗಿ, ಪಿರಪ್ಪ ಯಾತನೂರ, ಯಾದಗಿರಿಯ ವಿಶ್ವನಾಥ ನಾಯಕ, ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಸದಸ್ಯ ಫೀರದೋಸ್ ಅನ್ಸಾರಿ, ಶಿವುಪುತ್ರ ನಡಗೇರಿ, ಬಸವ ಸೇನೆ ಲಿಂಗರಾಜ ಪಾಟೀಲ ಅವರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಡಾ. ರಾಜು ಹಿರೇಮಠ, ಡಾ. ಅಭಿನಂದನ ಬೇಡಗೆ, ಪತ್ರಕರ್ತ ಮಹಾದೇವ ವಡಗಾಂವ, ಹೋರಾಟಗಾರ ಮೌಲಾ ಮುಲ್ಲಾ, ಜಾನಪದಕಾರ ರಾಜು ತಳವಾರ, ಸಂಗೀತ ಕಲಾವಿದ ಶಿವಶರಣಪ್ಪ ಪೂಜಾರಿ, ಕ್ರೀಡಾದಲ್ಲಿ ಕಾಸಿಫ್ ಅನ್ಸಾರಿ, ಮಲ್ಲಿಕಾರ್ಜುನ ಟುಟನಿ, ಅಪ್ಪಾಸಾಬ ತೀರ್ಥೆ ಕೃಷಿಯಲ್ಲಿ ಶಿವರಾಜ ಮಹಾಗಾಂವ, ಹೈನುಗಾರಿಕೆಯಲ್ಲಿ ಭೀಮರಾವ್ ಪಾರಾಣೆ, ಸ್ನಾತಕ್ಕೊತ್ತರ ಪದವಿಯಲ್ಲಿ ೧೧ ಚಿನ್ನದ ಪದಕ ಪಡೆದ ಜಯಶ್ರೀ ಶಿವಶರಣಪ್ಪ ಯಳಸಂಗಿ ಮತ್ತು ಚಂದ್ರು ಸ್ವಾಮಿ ಚೌಕಿಮಠ ಅವರನ್ನು ಮತ್ತು ತಾಲೂಕು ಮಟ್ಟದ ಆಯ್ದ ಅಧಿಕಾರಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು. ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಮತ್ತು ನಾಗರಿಕರು ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here