ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಖಜೂರಿ ಶ್ರೀಗಳಿಗೆ ಅಧಿಕೃತ ಆಹ್ವಾನ

0
140

ಆಳಂದ: ವಿಶ್ವಜ್ಯೋತಿ ಪ್ರತಿಷ್ಠಾನವು ನವೆಂಬರ್ ೩೦ ರಂದು ಖಜೂರಿಯಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಖಜೂರಿಯ ಶ್ರೀ ಕೋರಣೇಶ್ವರ ಸಂಸ್ಥಾನ ಮಠದ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರನ್ನು ಶ್ರೀಮಠದಲ್ಲಿ ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ನೇತೃತ್ವದಲ್ಲಿ ಸಾಂಸ್ಕೃತಿಕ ಬಳಗದವರೆಲ್ಲರೂ ಸೇರಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲು ಕೋರಿ ಅಧಿಕೃತ ಆಹ್ವಾನ ನೀಡಿ, ವಿಶೇಷವಾಗಿ ಗೌರವಿಸಿದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು, ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದು ನಾವೆಲ್ಲ ಒಂದಾಗಿ ಮುಂದೆ ಸಾಗಬೇಕಾಗಿದೆ. ಕನ್ನಡ ಭಾಷಾ ಪ್ರೀತಿ, ಭಾಷೆಯ ಸತ್ವ, ಮಹತ್ವ, ಹಿರಿಮೆಗಳ ಕುರಿತು ಗಡಿನಾಡು ಕನ್ನಡ ಸಾಹಿತ್ಯ ಸಮ್ಮಳೆನ ಇನ್ನಷ್ಟು ಜಾಗೃತಿ ಮೂಡಿಸಲಿ, ಆ ಮೂಲಕ ಜನರಲ್ಲಿ ಭಾಷೆ ಮತ್ತು ಸಾಹಿತ್ಯದ ಸೆಳೆತ ಉಂಟಾಗಲಿ. ಈ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳು ಯುವ ಜನತೆಯಲ್ಲಿ ಪುಸ್ತಕ ಪ್ರೀತಿ-ಅಭಿಮಾನ ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆ ನೀಡಲಿ ಎಂದು ಹಾರೈಸಿದ ಶ್ರೀಗಳು, ಈ ನಿಟ್ಟಿನಲ್ಲಿ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರು ಭಾಷಾ ಪ್ರೇಮ, ಸಾಹಿತ್ಯದ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಮದು ಮನದುಂಬಿ ಮಾತನಾಡಿದರು.

Contact Your\'s Advertisement; 9902492681

ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕಲಬುರಗಿ ಜಿಲ್ಲೆಯ ಗಡಿ ಭಾಗದಲ್ಲಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ತಮ್ಮ ಮಠವನ್ನೇ ಕನ್ನಡದ ಏಳಿಗೆಗಾಗಿ ಮೀಸಲಿಟ್ಟು, ಮರಾಠಿ ಭಾಷೆಯ ಅತೀಯಾದ ಪ್ರಭಾವವಿರುವ ಗಡಿಭಾಗದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುತ್ತಿರುವ ಶ್ರೀಗಳು, ತಮ್ಮ ವೈಶಿಷ್ಟ್ಯಪೂರ್ಣ ಕಾರ್ಯಗಳೊಂದಿಗೆ ಕನ್ನಡ ಭಾಷೆಯ ಮಹತ್ವವನ್ನು ಸಾರುತ್ತಾ ಕನ್ನಡದ ಕಂಪನ್ನು ಎಲ್ಲಡೆ ಪಸರಿಸುತ್ತಿರುವುದು ಶ್ರೀಗಳಿಗೆ ಕನ್ನಡ ಭಾಷೆಯ ಮೇಲಿರುವ ಅಭಿಮಾನಕ್ಕಿರುವ ಸಾಕ್ಷಿಯಾಗಿದೆ. ಗಡಿ ಭಾಗದಲ್ಲಿ ಶ್ರೀಗಳ ಕನ್ನಡ ಕಟ್ಟುವ ಕಾರ್ಯವನ್ನು ಗುರುತಿಸಿ ಖಜೂರಿಯಲ್ಲಿ ಹಮ್ಮಿಕೊಂಡಿರುವ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಸ್ಥಾನ ನೀಡುವ ಮೂಲಕ ಅವರಿಗೆ ನಿಜವಾದ ಗೌರವ ಕೊಡುವ ಕಾರ್ಯ ಮಾಡಿದ್ದೇವೆ ಎಂದರು.

ಶ್ರೀಮಠದ ಮಹಿಳಾ ಚರಮೂರ್ತಿ ನೀಲಲೋಚನ ತಾಯಿ, ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಪತ್ರಕತ್ರ ಹಿರಿಯ ಕವಿ ನಾಗೇಂದ್ರಪ್ಪ ಮಾಡ್ಯಾಳೆ, ವಲಯ ಕಸಾಪ ಅಧ್ಯಕ್ಷ ಶಿವಪುತ್ರಪ್ಪ ಶ್ಯಾರ್, ಸಾಹಿತ್ಯ ಪ್ರೇರಕರಾದ ಹಣಮಂತ ಖಜೂರಿ, ಕುಮಾರ ಬಂಡೆ, ರಾಜಶೇಖರ ಗುಗರೆ, ವೈಜನಾಥ ಶಿವಬಸಗೋಳ, ಕಿರಣ ಬಂಗರಗಿ, ಬಸವರಾಜ ಹೊಸಮನಿ, ದಯಾನಂದ ಚೌಲ್ ಕೊರಳ್ಳಿ, ಮಂಜುನಾಥ ಕಂದಗೂಳೆ, ರಾಜಶೇಖರ ಘುಗರೆ, ರವೀಂದ್ರಕುಮಾರ ಭಂಟನಳ್ಳಿ, ಈರಣ್ಣ ಮದಗುಣಕಿ, ಶರಣರಾಜ್ ಛಪ್ಪರಬಂದಿ, ರವಿಕುಮಾರ ಶಹಾಪುರಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಖಜೂರಿಯಲ್ಲಿ ಹಮ್ಮಿಕೊಂಡಿರುವ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಮಾಜಿಕ ಜಾತ್ರೆಯನ್ನಾಗಿಸದೇ, ಅನುಭವ ಮಂಟಪದ ರೀತಿಯಲ್ಲಿ ನಡೆಸಿ, ಈ ಭಾಗದ ರೈತರು, ಯುವ ಜನತೆಯ ಬದುಕಿನಲ್ಲಿ ಉತ್ತಮ ಭರವಸೆ ಮೂಡಿಸಿ, ಕನ್ನಡವನ್ನು ಕಟ್ಟುವ ಕಾರ್ಯ ಮಾಡಲಾಗುತ್ತಿದೆ. -ವಿಜಯಕುಮಾರ ತೇಗಲತಿಪ್ಪಿ, ಸಂಸ್ಥಾಪಕ, ವಿಶ್ವಜ್ಯೋತಿ ಪ್ರತಿಷ್ಠಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here