ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷವೆಂದರೆ ಬಿಜೆಪಿ- ಅಮರನಾಥ ಪಾಟೀಲ

0
108

ಶಹಾಬಾದ:ಪಕ್ಷದ ಸಂಘಟನೆ, ಪಕ್ಷ ನಿಷ್ಠೆ ನೋಡಿ ಕಾರ್ಯಕರ್ತರಿಗೆ ಸ್ಥಾನ ಮಾನಗಳನ್ನು ನೀಡುತ್ತದೆ.ಆದ್ದರಿಂದ ಪಕ್ಷಕ್ಕೆ ಯಾವಾಗಲೂ ಪ್ರಾಮಾಣೀಕತೆಯಿಂದ ಸೇವೆ ಸಲ್ಲಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಹೇಳಿದರು.

ಅವರು ಶನಿವಾರ ಭಂಕೂರ ಗ್ರಾಮದಲ್ಲಿ ಚಿತ್ತಾಪೂರ ಬಿಜೆಪಿ ಮಂಡಲದಿಂದ ಆಯೋಜಿಸಲಾದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಪದಾಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಬಿಜೆಪಿಯಲ್ಲಿ ಕೆಲಸ ಮಾಡುವ ಸಾಮನ್ಯ ಕಾರ್ಯಕರ್ತನಿಗೂ ಉನ್ನತವಾದ ಸ್ಥಾನಮಾನಗಳನ್ನು ನೀಡಿದೆ.ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷವೆಂದರೆ ಬಿಜೆಪಿ ಎಂದರು.ಪಕ್ಷಕ್ಕಾಗಿ ದೀನ ದಯಾಳ , ಶ್ಯಾಮ ಪ್ರಸಾದ ಮುಖರ್ಜಿ ಅವರ ಸೇವೆ ಅನನ್ಯ. ಅವರ ದಾರಿಯಲ್ಲಿ ನಾವು ನಡೆಯಬೇಕಿದೆ.ಅಲ್ಲದೇ ಪಕ್ಷದ ಧ್ಯೇಯ ಉದ್ದೇಶಗಳಿಗೆ ಬದ್ಧರಾಗಿ ಪಕ್ಷದ ಸಂಘಟನೆ ಕೈಗೊಳ್ಳಬೇಕು.ಸುಸಂಕೃತರಾಗಬೇಕು.ಸಮಾಜಕ್ಕೆ ಹಾಗೂ ದೇಶಕ್ಕೆ ಮಾದರಿಯಾಗುವ ವೈಯಕ್ತಿಕ ವರ್ಷಸ್ಸನ್ನು ಬೆಳೆಸಿಕೊಳ್ಳುವುದರ ಜತೆಗೆ ಸಮಾಜಕ್ಕೆ ಕೊಡುಗೆ ನೀಡಿದರೇ, ಪಕ್ಷಕ್ಕೆ ಹೆಸರು ಬರುವಂತಾಗುತ್ತದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ಮಾತನಾಡಿ,ಪಕ್ಷ ನೀಡಿದ ಸ್ಥಾನಮಾನಗಳು ಸರಿಯಾಗಿ ಬಳಸಿಕೊಳ್ಳುವ ಜತೆಗೆ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು.ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಹಿರಿಯ ಕಾರ್ಯಕರ್ತರ ಜತೆಗೆ ಯುವ ಹಾಗೂ ಉತ್ಸಾಹಿ ಕಾರ್ಯಕರ್ತರು ಸೇರಿ ಪಕ್ಷವನ್ನು ಮುನ್ನಡೆಸಬೇಕು.ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕೆಂದು ಹೇಳಿದರು.

ಜಿಲ್ಲಾ ಅಭ್ಯಾಸ ವರ್ಗದ ಸಂಚಾಲಕ ಸಂಜಯ್ ಮಿಸ್ಕಿನ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣ ವರ್ಗದಲ್ಲಿ ಸಮಯ ಪಾಲನೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿ ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು.ಈ ವರ್ಗದಲ್ಲಿ ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳಬೇಕು.ನಿಮ್ಮ ಭವಿಷ್ಯಕ್ಕೆ ಹಾಗೂ ಪಕ್ಷಕ್ಕೆ ಈ ಶಿಕ್ಷಣ ಮಾರ್ಗಸೂಚಿಯಾಗಬೇಕೆಂದು ಹೇಳಿದರು.

ಚಿತ್ತಾಪೂರ ಮಂಡಲ ಅಧ್ಯಕ್ಷ ನೀಲಕಂಠರಾವ ಪಾಟೀಲ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಚಿತ್ತಾಪೂರ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ. ನಿವೇದಿತಾ ದಹಿಂದೆ, ಪ್ರಧಾನ ಕಾರ್ಯದಶಿ ರಾಮದಾಸ ಚವ್ಹಾಣ, ವಿಠ್ಠಲ ಚವ್ಹಾಣ, ಸೀಬಾ ಭೀಮಣ್ಣ, ಬಸವರಾಜ ಪಂಚಾಳ, ಭರತ್ ಮುತ್ತಗಾ,ಪುಟ್ಟುಗೌಡ, ಮಹೇಶ ಬೇಟಗೇರಿ, ಗೋಪಾಲ ರಾಠೋಡ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here