ಕಲಬುರಗಿ: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘದ ವತಿಯಿಂದ ೬೫ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಾನಪದ ಲೋಕ ನೃತ್ಯೋತ್ಸವ ಹಾಗೂ ಸಂಗಿತ ಕಾರ್ಯಕ್ರಮದಲ್ಲಿ ಕೋವಿಡ್-೧೯ ನಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ವೈದ್ಯರು, ಪೋಲಿಸ್ ಅಧಿಕಾರಿಗಳು, ದಕ್ಷ ಅಧಿಕಾರಿಗಳಿಗೆ ಹಾಗೂ ಕೊರೋನಾ ವಾರಿಯರ್ಸ್‌ಗಳಿಗೆ ಸನ್ಮಾನಿಸಲಾಯಿತು. ಬಿಜೆಪಿ ಮುಖಂಡರಾದ ಜಯಶ್ರೀ ಬಿ.ಮತ್ತಿಮೂಡ ಅವರು ಉದ್ಘಾಟಿಸಿದರು.
ಮುಗುಳನಾಗಾಂವ ಕಟ್ಟಿಮನಿ ಸಂಸ್ಥಾನ ಹೀರೆಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಣ್ಣ ನೀರಾವರಿ ಇಲಾಖೆ ವೃತ್ತ ಅಧೀಕ್ಷರು ಅಭಿಯಂತರಾದ ಡಾ. ಸುರೇಶ ಶರ್ಮಾ, ಹೆಚ್‌ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪ, ಡ್ಯಾನ್ಸ್ ಸಂಘ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಯೋಜಕ ಯಂಕಪ್ಪ (ಅಕ್ಷಯ), ಜ್ಯೋತಿ ಅಕ್ಷಯ, ಶಾಮ ನಾಟೀಕಾರ, ಸಚಿನ್ ಫರತಾಬಾದ, ಅಮೃತ ಸಿ.ಪಾಟೀಲ, ಎಂ.ಎ.ಸಿದ್ಧಿಕಿ, ಮಲ್ಲಿಕಾರ್ಜುನ ಟೆಂಗಳಿ, ಮಲ್ಲಿಕಾರ್ಜುನ ನಿಲ್ಲೂರ, ಸಾಯಬಣ್ಣ ಹೋಳಕರ್, ಆಕಾಶ ಪಾರ್ಚಾ, ರಾಜು ಡೊಂಗರಗಿ ಇದ್ದರು.