ಕಲಬುರಗಿ: ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ , ಸರಕಾರಿ ಅನುದಾನಿತ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ನಾಲ್ಕು ತಿಂಗಳ ವೇತನ ವಿಳಂಬ ವಿರೋಧಿಸಿ, ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಂಘದ ವತಿಯಿಂದ ಇಂದು ಅನಿರ್ದಿಷ್ಟ ಅವಧಿ ಧರಣಿ ನಡೆಸಿದರು.
ನಗರದ ಪ್ರಾಂಶುಪಾಲರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದ ಶಿಕ್ಷಕರು ಕೋವಿಡ- ೧೯ ನಂತಹ ಕಷ್ಟ ಕಾಲದಲ್ಲಿ ಕೂಡ ಆನ್ಲೈನ್ ತರಗತಿ ಮಾಡುತ್ತಿದ್ದು, ತಕ್ಷಣ ಬಾಕಿ ಇರುವ ನಾಲ್ಕು ತಿಂಗಳ ವೇತನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರೊ.ಗಣೇಶ್ ಪಾಟೀಲ್, ಕಾರ್ಯದರ್ಶಿ ಪ್ರೊ.ಪ್ರಶಾಂತ್ ಕಾಂಬ್ಳೆ, ಸದಸ್ಯರಾದ ಪ್ರೊ.ಎಸ್. ಕೆ. ಇಂಗನಕಲ್, ಪ್ರೊ. ಹರೀಶ್ ಅಷ್ಟಗಿ, ಪ್ರೊ.ಚಂದ್ರಶೇಖರ್ ಸೆರಿಗಾರ, ಪ್ರೊ.ಬಾಬುರಾವ್ ಶೇರಿಕಾರ್, ಪ್ರೊ.ವಿ.ಬಿ.ಹಿಪ್ಪರಗಿ, ಪ್ರೊ.ಎಂ.ಬಿ.ಮಳಖೇಡ್, ಶಿಕ್ಷಕೇತರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಹಿರೇಮಠ್, ಬಿ.ಜಿ.ಝಳಕಿಕರ್, ಶಿವಪುತ್ರ ಹಾಗೂ ಹಿರಿಯ ಪ್ರಾಧ್ಯಾಪಕರು ಸದಸ್ಯರು ಇದ್ದರು.