ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

0
63

ಜೇವರ್ಗಿ: ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ರೈತರ ಮೇಲಿನ ದೌರ್ಜನ್ಯ ನೈತಿಕ ಹೊಣೆಹೊತ್ತು ಪ್ರಧಾನಮಂತ್ರಿಗಳು ದೇಶದ ರೈತರಿಗೆ ಕ್ಷಮೆ ಕೇಳಬೇಕು. ಕೃಷಿ ಸಂಬಂಧಿಸಿದ ಮೂರು ಕಾಯ್ದೆಗಳು ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ 2020ನ್ನು ಕೂಡಲೇ ರದ್ದು ಪಡಿಸಬೇಕು. ಡಾ. ಎಮ್ ಎಸ್ ಸ್ವಾಮಿನಾಥನ್ ವರದಿ ಯನ್ನು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮಾಡುವ ಕಾನೂನು ಹಾಗೂ ರೈತ ಕೃಷಿ ಕೂಲಿಕಾರರ ಗ್ರಾಮೀಣ ಬಡವರಿಗೆ ಕಡಿಮೆ ಬಡ್ಡಿಯಲ್ಲಿ ಬ್ಯಾಂಕ್ ಸಾಲಗಳು ನೀಡಬೇಕು ಹಾಗೂ ಈ ಸಂದರ್ಭದಲ್ಲಿ ಋಣಮುಕ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು

Contact Your\'s Advertisement; 9902492681

ಪ್ರತಿಭಟನೆ ಉದ್ದೇಶಿಸಿ ಸುಭಾಷ್ ಹೊಸಮನಿ ಮಾತನಾಡಿ ಕಳೆದ 30 ವರ್ಷಗಳಲ್ಲಿ ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಕೃಷಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡು ಸುಮಾರು ಲಕ್ಷ ರೈತರು ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ಈ ನಡುವೆ ಜಗತ್ತು ಆವರಿಸಿದ ಕೋರೋನ್ ರೋಗ ನಮ್ಮ ದೇಶದಲ್ಲಿ ಎಲ್ಲಾ ಬಿಕ್ಕಟ್ಟುಗಳನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ವಿಶೇಷವಾಗಿ ಗ್ರಾಮೀಣ ಜನತೆಯ ಅಪಾರ ಕಷ್ಟನಷ್ಟಗಳು ಅನುಭವಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ವೆಂಕೋಬರಾವ್ ವಾಗಣಗೇರೆ, ಪರಶುರಾಮ್ ಬಡಿಗೇರ್, ಸಿದ್ದರಾಮ್ ಹರವಾಳ, ಹರನೂರ ಗ್ರಾಮದ ರೈತ ಮುಖಂಡರು ಮಲ್ಕಪ್ಪ ಮ್ಯಾಗೇರಿ, ಸಕ್ರಪ್ಪ ಮ್ಯಾಗೇರಿ, ಬಸವರಾಜ್, ಸಿದ್ದಪ್ಪ, ಶ್ರೀನಾಥ್, ರೈತ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here