ಅಲೆಮಾರಿ ಹೆಳವ ಸಮುದಾಯಕ್ಕೆ ವಸತಿ ಸೌಕರ್ಯ ನೀಡಲು ಸಚಿವರಿಗೆ ಆಗ್ರಹ

0
38

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಅಲೆಮಾರಿ ಹೆಳವ ಸಮುದಾಯದ ಆಶ್ರಯ ಕಾಲೋನಿಯನ್ನು ವಾಸಿಸಲು ಯೋಗ್ಯವಾದ ಸರಕಾರಿ ಗೈರಾಣು ಜಮೀನಿನಲ್ಲಿ ನಿರ್ಮಿಸಿ ವಸತಿ, ನಿವೇಶನ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾದ್ಯಕ್ಷ ಸಾಯಬಣ್ಣ ಹೆಳವರ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಪ್ರವರ್ಗ-1 ರಲ್ಲಿ ಬರುವ ಅಲೆಮಾರಿ/ಅರೆ-ಅಲೆಮಾರಿ ಜನಾಂಗದಲ್ಲಿರುವ ಹೆಳವ ಸಮುದಾಯದವರು ಕಡು ಬಡತನದಿಂದ ಕೂಡಿದ್ದು, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ರಾಜ್ಯದಲ್ಲಿಯೇ ಅತಿ ಹಿಂದುಳಿದ ಸಮುದಾಯದವರಾಗಿದ್ದು, ಅವರ ಕುಲ ಕಸಬು ಚಾಪೆ ಎಣಿಯುವುದು, ಬಾರಿಗೆ ತಯಾರು ಮಾಡುವುದು ಮತ್ತು ಒಕ್ಕಲು ಮನೆಗಳಿಗೆ ಹೋಗಿ ಕುಲ ಕೊಂಡಾಡುವ ಕಾಯಕವನ್ನು ಮಾಡಿ ಅವರು ಕೊಟ್ಟಷ್ಟು ದವಸ ದಾನ್ಯಗಳನ್ನು ತೆಗೆದುಕೊಂಡು ಊರಿಂದ ಊರಿಗೆ ಅಲೆಯುತ್ತಾ ಎಲ್ಲಿಯೂ ನೆಲೆಯಾಗಿ ನಿಲ್ಲದೆ ತಾತ್ಕಾಲಿಕ ಟೆಂಟಗಳೇ ಮನೆಯಾಗಿ ಮಾಡಿಕೊಂಡು ಮಕ್ಕಳು ಮರಿಗಳೊಂದಿಗೆ ವಾಸವಾಗಿರುತ್ತಾ ಅಲೆಮಾರಿಯಾಗಿ ಬಹಳ ಕಷ್ಟಕರ ಜೀವನ ನಡೆಸಿಕೊಂಡು ಬರುತ್ತಿರುವ ಸಮುದಾಯ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಹೆಳವ ಸಮಾಜದ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಆರ್. ಹೆಳವರ ಹೆಬ್ಬಾಳ ನಮಗೆ ಸ್ವಂತದ್ದು ಎಂದು ಹೇಳಿಕೊಳ್ಳಲು ಮನೆಗಳಿಲ್ಲ. ನಮ್ಮದು ಅಂತ ಹೇಳಿಕೊಳ್ಳಲು ಗಟ್ಟಿ ನೆಲವೂ ಇಲ್ಲ. ಒಂದೇ ಕಡೆ ನೆಲೆ ನಿಂತುಕೊಂಡರೆ, ಹೊಟ್ಟೆಗೇನು ಮಾಡಬೇಕೆಂದು ಚಿಂತೆ ಕಾಡುತ್ತದೆ.ದುಡಿಮೆಗಾಗಿ ಊರೂರುಗಳನ್ನ ಅಲೆಯುತ್ತ ಹೋದರೆ, ಮಕ್ಕಳ ಪಾಲಣೆ-ಪೋಷಣೆ ಹೇಗೆ ಮಾಡಬೇಕೆಂದು ಆತಂಕ ಕಾಡುತ್ತದೆ. ಬದುಕಬೇಕು ಎಂಬ ಛಲ ಎನ್ನುವುದಕ್ಕಿಂತ ಅನಿವಾರ್ಯತೆಯಿದೆ. ಹೀಗಾಗಿಯೇ ನಾವು ಅಲೆಮಾರಿಗಳಾಗಿಯೇ ಉಳಿದಿದ್ದೇವೆ. ಅಲೆಮಾರಿ ಸಮುದಾಯದವರು ನಗರದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದು, ಇದುವರೆಗೂ ಸೂಕ್ತ ನೆಲೆ ಕಾಣದ ಸ್ಥಿತಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಪ್ರದೇಶಗಳಲ್ಲಿ ಗುಡಿಸಲುಗಳು ಹಾಕಿಕೊಂಡು ವಾಸಿಸುತ್ತಿದ್ದಾರೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಅಲೆಮಾರಿ ಹೆಳವ ಸಮುದಾಯದ ಆಶ್ರಯ ಕಾಲೋನಿಯನ್ನು ವಾಸಿಸಲು ಯೋಗ್ಯವಾದ ಸರಕಾರಿ ಗೈರಾಣು ಜಮೀನಿನಲ್ಲಿ ನಿರ್ಮಿಸಿ ವಸತಿ, ನಿವೇಶನ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾದ್ಯಕ್ಷ ಸಾಯಬಣ್ಣ ಹೆಳವರ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಅಲೆಮಾರಿಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ನಗರದಲ್ಲಿ ವಾಸಿಸುವ ಎಲ್ಲಾ ಅಲೆಮಾರಿ ಸಮುದಾಯಗಳಿಗೆ ನೆಲೆ ಕಲ್ಪಿಸಬೇಕು.

ಸರಕಾರದ ವತಿಯಿಂದ ನಿವೇಶನ ಮತ್ತು ವಸತಿ ಒದಗಿಸುವ ಮೂಲಕ ಅರ್ಹ ಅಲೆಮಾರಿ ಸಮುದಾಯದವರಿಗೆ ಸೌಲಭ್ಯ ಕಲ್ಪಿಸುವ ಮೂಲಕ ಸರ್ಕಾರದ ನಿರ್ಧಾರದಂತೆ ಗುಡಿಸಲು ಮುಕ್ತ ನಗರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೆಳವ ಸಮಾಜದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿ.ಎಚ್ ಹೆಳವರ, ರಾಜ್ಯ‌ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಹಾಗೂ ಸಮಾಜದ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here