ಗಿರೀಶ್ ಕಾರ್ನಾಡ ನಿಧನಕ್ಕೆ ಸಸಿ ನೆಟ್ಟು ಸಂತಾಪ ಸೂಚನೆ

0
83

ಸುರಪುರ: ತಾಲ್ಲೂಕಿನ ದೇವರಗೋನಾಲ ಗ್ರಾಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಿ ಸಾಹಿತಿ ಗಿರೀಶ್ ಕಾರ್ನಾಡರ ನಿಧನಕ್ಕೆ ಸಸಿಗಳ ನೆಟ್ಟು ಸಂತಾಪ ಸೂಚಿಸಲಾಯಿತು.ನಗರದ ಗ್ರಾಮ ಪಂಚಾಯತಿ ಕಾರ್ಯಾಲಯ ಆವರಣ ಮತ್ತು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸಸಿಗಳ ನೆಡುವ ಮೂಲಕ ಅರ್ಥಪೂರ್ಣವಾಗಿ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯಗುರು ನಾಗರತ್ನ ನಾಗಾವಿ ಮಾತನಾಡಿ,ಗಿರೀಶ ಕಾರ್ನಾಡರು ನಾಡುಕಂಡ ಬಹುದೊಡ್ಡ ಸಾಹಿತಿಗಳು,ಅವರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ,ಅಂತಹ ಸಾಗಿತಿ ಇಂದು ನಮ್ಮೆಲ್ಲರನ್ನು ಅಗಲಿದ್ದು ದುಖದ ಸಂಗತಿಯಾಗಿದೆ.ಅವರ ನೆನಪು ಚಿರವಾಗಿ ಉಳಿಯುವಂತೆ ಯೋಚಿಸಿ ಗ್ರಾಮದ ಪ್ರಮೂಖರು ಅವರ ಸಂತಾಪ ಸೂಚಕವಾಗಿ ಮರಗಳ ಬೆಳೆಸುವ ಸಂಕಲ್ಪ ಮಾಡಿದ್ದು ಶ್ಲಾಘನೀಯ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟೇಶ ಬೇಟೆಗಾರ ಮಾತನಾಡಿ,ಎಲ್ಲರು ಪರಿಸರ ಕಾಡುವ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ.ನಾವೆಲ್ಲರ ಮರಗಳ ನಾಶ ಮಾಡುತ್ತಿರುವುದರಿಂದ ಇಂದು ಮಳೆ,ಬೆಳೆ ಇಲ್ಲದೆ ನಿರಂತರ ಬರಗಾಲ ಹೆದರಿಸುವಂತಾಗಿದೆ ಆದ್ದರಿಂದ ಎಲ್ಲರು ಮರಗಳ ಬೆಳೆಸೋಣ ಎಂದರು.

ಮತ್ತೋರ್ವ ಮುಖಂಡ ಸಣ್ಣ ದೇಸಾಯಿ ಮಾತನಾಡಿ,ಪ್ರತಿಯೊಬ್ಬರು ಮನೆಗೊಂದು ಮರವನ್ನು ಬೆಳೆಸುವ ಸಂಕಲ್ಪ ಮಾಡೋಣ,ಇಂದು ನೆಡುತ್ತಿರುವ ಸಸಿಯನ್ನು ಮಕ್ಕಳು ತಮ್ಮ ಸ್ನೇಹಿತರೆಂದು ಭಾವಿಸಿ ದಿನಾಲು ಅವುಗಳ ರಕ್ಷಣೆ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾನಪ್ಪ ಶಹಾಪುರಕರ್,ಹಣಮಂತ ಕಾಡ್ಲೂರ,ವಿಜಯಕುಮಾರ ದಿವಳಗುಡ್ಡ,ದೇವಿಂದ್ರಪ್ಪ ಬಡಿಗೇರ,ಅಮರಪ್ಪ ಕೋತಿಗುಡ್ಡ,ಭೀಮಣ್ಣ ಸಿಪಾಯಿ,ಬಸವರಾಜ ಬಾಗಲಿ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.ಸ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here