ಸುರಪುರ: ನಗರದಲ್ಲಿ ಕುಡಿಯುವ ನೀರಿನ ಅಭಾವ ದೊಡ್ಡ ಮಟ್ಟದಲ್ಲಿ ಉಂಟಾಗಿದ್ದು ನೀರಿನ ಅಭಾವ ನೀಗಿಸಲು ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಹಸನಾಪುರ ವಾರ್ಡ ಸಂಖ್ಯೆ ೧೯ರ ಸಾರ್ವಜನಿಕರು ಮಂಗಳವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಹಸನಾಪುರದಲ್ಲಿನ ಜನರಿಗೆ ಕುಡಿಯುವ ನೀರಿಲ್ಲದೆ ಅನೇಕ ತಿಂಗಳುಗಳಿಂದ ಸಮಸ್ಯೆಯಿದೆ,ಇದನ್ನ ನಗರಸಭೆಯ ಗಮನಕ್ಕೆ ತಂದರು ಯಾವುದೇ ಪ್ರಯೋಜನೆಯಾಗುತ್ತಿಲ್ಲ.ಆದ್ದರಿಂದ ಇಂದು ಮಹಿಳೆಯರು ಕೂಡ ಬೇಸತ್ತು ನಗರಸಭೆ ಮುಂದೆ ಪ್ರತಿಭಟನೆ ನಡೆಸುವ ಅನಿವಾರ್ಯತೆ ಉಂಟಾಗಿದೆ,ಕೂಡಲೆ ಕುಡಿಯುವ ನೀರು ಒದಗಿಸಬೇಕು ಮತ್ತು ಈ ನಮ್ಮ ವಾರ್ಡಿಗೆ ನೀರು ಬಿಡುವ ಕೆಲಸಗಾರ ಸರಿಯಾಗಿ ಕೆಲಸ ನಿರ್ವಹಿಸದೆ ಜನರಿಗೆ ನೀರಿನ ತೊಂದರೆ ಉಂಟಾಗುವಲ್ಲಿ ಇವರದು ಪಾತ್ರ ದೊಡ್ಡದಿದೆ.ಆದ್ದರಿಂದ ಕೂಡಲೆ ನೀರು ಬಿಡುವ ಕೆಲಸಗಾರ ಬೇರೆಯವರನ್ನು ನಿಯೋಜಿಸುವಂತೆ ಒತ್ತಾಯಿಸಿದರು.
ನಗರಸಭೆಯ ಪೌರಾಯುಕ್ತರಿಗೆ ಬರೆದ ಮನವಿಯನ್ನು ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಪದ್ದಮ್ಮ ಅಡಿವೆಪ್ಪ,ಶಂಕರಮ್ಮ ಮಾನಪ್ಪ,ಮಲ್ಲಮ್ಮ ಯಂಕಣ್ಣ,ದ್ಯಾವಣ್ಣ ಭೀಮಣ್ಣ,ಲಕ್ಷ್ಮೀ ಜಗದೀಶ,ಪದ್ಮಾವತಿ ವೆಂಕಟೇಶ,ಹಸೀನಾಬೇಗಂ,ಮಂಜುಳಾ ಬಸವರಾಜ,ಶರಣಮ್ಮ ಪರಶುರಾಮ,ಲಕ್ಷ್ಮಣ,ಅಬ್ದುಲ ಮಜೀದ್,ಪರಶುರಾಮ ಸೇರಿದಂತೆ ಅನೇಕರಿದ್ದರು.