ಕೋಲಿ ( ಕಬ್ಬಲಿಗ) ಸಮಾಜವನ್ನು ತಳ ಮಟ್ಟದಿಂದ ಕಟ್ಟಿದ ಕೀರ್ತಿ ಶ್ರೀ ವಿಠಲಹೇರೂರಜೀ ಅವರಿಗೆ ಸಲ್ಲುತ್ತದೆ: ತಳವಾರ

0
70

ಕಲಬುರಗಿ: ನಗರದ (ಎಂ ಎಸ್ ಕೆ ಮಿಲ್ ) ಕಣ್ಣಿ ಮಾರ್ಕೆಟ್ ಹತ್ತಿರ ಇರುವ ಹರಳವಾಕರ ಬಿಲ್ಡಿಂಗ್ ನಲ್ಲಿ ಸ್ವಾಭಿಮಾನಿ ದಿ.ವಿಠಲ ಹೇರೂರ ಮಾಟ್ರೀಕ್ ನಂತರದ ಬಾಲಕರ ಉಚಿತ ವಸತಿ ನಿಲಯದಲ್ಲಿ ವಿಠಲ ಹೇರೂರ ಅವರ ೭ನೇ ಪುಣ್ಯ ಸ್ಮರಣೆ ನಿಮಿತ್ಯ ವಾಗಿ ಎರಡು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.

ಪ್ರಾರಂಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರ ಹಾಗೂ ವಿಠಲ ಹೇರೂರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

Contact Your\'s Advertisement; 9902492681

ಮೂದಲನೆಯ ವಿಚಾರ ಸಂಕಿರಣದ ವಿಷಯವನ್ನು “ಸಮಾಜದಲ್ಲಿ ಸಾಮಾಜಿಕ ಕಾರ್ಯಕರ್ತರ ಅವಶ್ಯಕತೆ ಮತ್ತು ಕರ್ತವ್ಯಗಳನ್ನು ಕುರಿತು ಪ್ರೊ:ಯಲ್ಲಪ್ಪಾ ತಳವಾರ ವಿಷಯವನ್ನು ಮಂಡಿಸುತ್ತಾ.ಶೋಷಿತ ಸಮುದಾಯಗಳಲ್ಲಿ ಕೋಲಿ ಕಬ್ಬಲಿಗ ಸಮಾಜವೂ ಒಂದು. ನಿಮಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಾನಮಾನಗಳು ಸಿಗಬೇಕಾದರೆ ಸಮಾಜದ ಕಾರ್ಯಕರ್ತರು ಸಮಾಜದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಮತ್ತು ನಿಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬೇಕು ಸಮಾಜದ ಶ್ರೀಮಂತ ವರ್ಗವು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ: ಮಲ್ಲಿಕಾರ್ಜುನ ಮುಕ್ಕಾ ರವರು ಮಾತನಾಡಿ ರಾಜಕೀಯ ಅವಕಾಶವನ್ನು ಪಡೆದುಕೊಳ್ಳಬೇಕಾದರೆ ನಾವು ಮೂದಲು ಶಿಕ್ಷಣ ಕ್ಕೆ ಹೆಚ್ಚಿನ ಒತ್ತುಕೊಟ್ಟು ಸಂಘ ಸಂಸ್ಥೆಗಳು ಬಲಿಷ್ಠ ಮಾಡಿಕೊಂಡು ಹೋರಾಟ ಮಾಡಿದಾಗ ಮಾತ್ರ ನಮಗೆ ಅವಕಾಶಗಳು ಹುಡುಕಿಕೊಂಡು  ಬರುತ್ತವೆ…ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಿದಾಗ ಮಾತ್ರ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.

ಸಮಾಜದ ಪ್ರಮುಖರಾದ ಬಸವರಾಜ ಸಪ್ಪನಗೋಳ, ಸುನಿತಾ ತಳವಾರ, ರೇವಣಸಿದ್ದಪ್ಪಾ ಕಮಾನಮನಿ, ಡಾ: ಸರ್ದಾರ್, ಶ್ರೀಮಂತ ನಾಟೀಕಾರ, ಈರಣ್ಣಾ ಜಮಾದಾರ, ಪ್ರಕಾಶ ತಲಾರಿ, ಧರ್ಮರಾಜ ಜವಳಿ, ಶಿವಶರಣಪ್ಪಾ ಜಮಾದಾರ, ಅಮೃತ ಮಾಲಿಪಾಟೀಲ, ಬೇರೆ ಬೇರೆ ತಾಲೂಕಿನಿಂದ ಸಮಾಜದ ಮುಖಂಡರು, ೨೧ ಹಳ್ಳಿಗಳಿಂದ ಕಾರ್ಯಕರ್ತರು, ವಿಠಲ ಹೇರೂರ ಅಭಿಮಾನಿಗಳು ಹಾಜರಿದ್ದರು.

ವೇದಿಕೆಯ ಮೇಲೆ ಇದ್ದ ಗಣ್ಯರನ್ನು ಸಿದ್ದಣ್ಣಾ ಮುಕರಂಬಿ ಸ್ವಾಗತಿಸಿದರು. ವಿಠಲ ಹೇರೂರ ಅವರನ್ನು ಕುರಿತು ಪ್ರೊ:ಮಲ್ಲಪ್ಪಾ ಮಾನೇಗಾರ ಮಾತನಾಡಿದರು,  ಶ್ಯಾಮಕುಮಾರ ಸಂಗಾವ್ಹಿಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ: ಭೀಮರಾಯ ಅರಕೇರಿ ನಿರೂಪಿಸಿದರು, ಡಾ. ರಾಮಕೃಷ್ಣ ಬಗ್ಗುರಿ ಯವರು ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here