ಕಲಬುರಗಿ: ಸಮಾನತೆ,ಸಹೋದರತೆ ಮತ್ತು ಮಾನವಿಯತೆಗಾಗಿ ಅವಿಶ್ರಾಂತ ಹೋರಾಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ನಿಮಿತ್ಯ ಅವರನ್ನ ನಾವೇಲ್ಲರೂ ಸ್ಮರಿಸುವುದು ಹಾಗೂ ಅವರ ವಿಚಾರ ಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಚಾರ ಮಾಡುವುದು ಅವಶ್ಯಕವಾಗಿದೆ ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಡಾ ಬಿ ಆರ್ ಅಂಬೇಡ್ಕರ್ ರವರ 64ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಪ್ರಮುಖ ಅಂಬಾರಾಯ ಅಷ್ಠಗಿ ಮಾತನಾಡಿ,ಡಾ ಅಂಬೇಡ್ಕರ್ ರವರ ರಾಷ್ಟ್ರೀಯ ಪ್ರಜ್ಞೆ,ವಾಸ್ತವವಾಗಿ ಅಂಬೇಡ್ಕರ್ ಅವರೊಳಗಿನ ಐಕ್ಯತೆ,ರಾಷ್ಟ್ರ ಪ್ರೇಮ ಜಾಗೃತ ಜ್ಯೋತಿಯಾಗಿತ್ತು.ಆ ಅದಮ್ಯ ಧ್ಯೇಯವನ್ನು ಸಾರ್ವತ್ರಿಕವಾಗಿ ವಿಮರ್ಶೇಗೆ ಹಚ್ಚಿದ್ದು ತೀರಾ ವಿರಳ. ಪ್ರಸ್ತುತ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರ್ಕಾರ ಡಾ ಅಂಬೇಡ್ಕರ್ ರ ಜೀವನ ಮತ್ತು ಅವರ ಸಮಗ್ರ ಬದುಕಿಗೆ ಸಂಬಂಧಿಸಿದ ವಿವರವುಳ್ಳ “ಪಂಚ ತೀರ್ಥ” ಯೋಜನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಡಾ ಅಂಬೇಡ್ಕರ್ ಆದರ್ಶ ಹಾಗೂ ವಿಚಾರಧಾರೆಗಳಿಗೆ ಹೆಚ್ಚಿನ ಪ್ರಚಾರ ಮಾಡುತ್ತಿರುದು ಶ್ಲಾಘನೀಯ ಎಂದು ಅಂಬಾರಾಯ ಅಷ್ಠಗಿ ಅಭಿಪ್ರಾಯ ಪಟ್ಟರು.
ಅವರೊಂದಿಗೆ ಬಿಜೆಪಿ ಯವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತವೀರ ಬಡಿಗೇರ ಇತರರಿದ್ದರು..