ಸಫಾಯಿ ಕರ್ಮಚಾರಿ ಕಾವಲು ಸಮಿತಿಯಿಂದ ಮಹಾ ಪರಿನಿರ್ವಾಣ ದಿನ ಆಚರಣೆ

0
38

ಸುರಪುರ: ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಸುರಪುರ ತಾಲೂಕು ಘಟಕ ದಿಂದ ಡಾ: ಬಾಬಾ ಸಾಹೇಬ ಅಂಬೇಡ್ಕರರ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ:ಬಿ.ಆರ್.ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಧಮ್ಮ ವಂದನೆಯ ಮೂಲಕ ಅಂಬೇಡ್ಕರರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಮಹಾದೇವಪ್ಪ ಸತ್ಯಂಪೇಟೆ ಮಾತನಾಡಿ,ದೀನ ದಲಿತರು ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇಂದು ಸರಕಾರದ ಯಾವುದೇ ಯೋಜನೆಯ ಉಪಯೋಗ ಪಡೆಯುತ್ತಾರೆಂದರೆ ಅದಕ್ಕೆ ಬಾಬಾ ಸಾಹೇಬರು ಬರೆದು ಕೊಟ್ಟ ಸಂವಿಧಾನ ಕಾರಣವಾಗಿದೆ.ಅಂತಹ ಜಗತ್ತು ಮೆಚ್ಚುವ ಸಂವಿಧಾನವನ್ನು ಬರೆದು ಕೊಟ್ಟು ಅಂಬೇಡ್ಕರರು ಡಿಸೆಂಬರ್ ೬ ರಂದು ಈಹ ಲೋಕವನ್ನು ತ್ಯಜಿಸಿ ನಮ್ಮಿಂದ ಮರೆಯಾದ ಈ ದಿನವನ್ನು ಅಂದಿನಿಂದ ಮಹಾ ಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕರಡಕಲ್ ಮಾಳಪ್ಪ ಕಿರದಹಳ್ಳಿ ರಾಹುಲ್ ಹುಲಿಮನಿ ಗೋಪಾಲ ತಳವಾರ ಹಾಗು ಸಮಿತಿಯ ಗೌರವಾಧ್ಯಕ್ಷ ಹಣಮಂತ ತೇಲ್ಕರ್ ಉಪಾಧ್ಯಕ್ಷ ವೆಂಕಟೇಶ ಹುಲಿಕರ್ ಬಸವರಾಜ ಉಲ್ಪೇನವರ್ ಕೃಷ್ಣ ಕಟ್ಟಿಮನಿ ಹಣಮಂತ ಕಟ್ಟಿಮನಿ ಗೌತಮ ತೇಲ್ಕರ್ ಚಿರಂಜೀವಿ ಹುಣಸಿಹೊಳೆ ಮರೆಪ್ಪ ಚಲುವಾದಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here