ಅಟ್ಟದ ಮೇಲೆ ಬೆಟ್ಟದ ವಿಚಾರ ಕಾರ್ಯಕ್ರಮ

0
64

ಕಲಬುರಗಿ : ಭಾರತೀಯ ರಂಗಭೂಮಿಗೆ ಶತಶತಮಾನಗಳ ಇತಿಹಾಸ ಮತ್ತು ಪರಂಪರೆ ಇದೆ ಒಂದು ಪ್ರಾಚೀನ ಜನಪದ ರಂಗಭೂಮಿಯ ಇನ್ನೊಂದು ನಾಟ್ಯಶಾಸ್ತ್ರ ಕಿಂತ ಪೂರ್ವದಲ್ಲಿ ಜಾನಪದ ರಂಗಭೂಮಿಯ ಪ್ರಯೋಗಗಳು ಜನಸಮುದಾಯದಲ್ಲಿ ರೂಢಿಯಲ್ಲಿದ್ದವು ಜನಪದ ರಂಗಭೂಮಿಗೆ ರಾಮಾಯಣ ಮತ್ತು ಮಹಾಭಾರತ ಕಥೆಗಳು ಪ್ರೇರಣೆ ನೀಡಿವೆ ಎಂದು ಯುವ ಸಾಹಿತಿ ಸಂಗಪ್ಪ ತೌಡಿ ಅವರು ಹೇಳಿದರು.

ನಗರದ ಸಿದ್ದಲಿಂಗೇಶ್ವರ ಬುಕ್ ಮಾಲಿನಲ್ಲಿ ನಡೆದ ಅಟ್ಟದ ಮೇಲೆ ಬೆಟ್ಟದ ವಿಚಾರ ಕಾರ್ಯಕ್ರಮದಲ್ಲಿ ಡಾ.ಗವಿಸಿದ್ದಪ್ಪ ಪಾಟೀಲ್ ಅವರು ರಚಿಸಿರುವ “ರಂಗಸಿರಿ” ಕೃತಿ ಕುರಿತು ಮಾತನಾಡುತ್ತಾ ಕಲ್ಯಾಣ ಕರ್ನಾಟಕದ ರಂಗಭೂಮಿಯನ್ನು ಕುರಿತು ಇಷ್ಟು ದೊಡ್ಡ ಗ್ರಂಥವನ್ನು ಹೊರಬಂದಿರುವುದು ತುಂಬಾ ಹೆಮ್ಮೆಯ ಸಂಗತಿ ಇದರಲ್ಲಿ ಹತ್ತು ಲೇಖನಗಳಿಗೆ ಮೊದಲೇ ಭಾಗದಲ್ಲಿ ವೃತ್ತಿರಂಗಭೂಮಿಯ ಸಾಹಿತ್ಯವನ್ನು ಒಂದೆಡೆಯಲ್ಲಿ ಕ್ರೂಡಿಸಿದ್ದಾರೆ. ಅಲ್ಲದೆ ರಂಗಭೂಮಿಯ ಬೆಳವಣಿಗೆಯ ದರ ಚಾರಿತ್ರಿಕ ವಿವರಣೆಯನ್ನು ನೀಡುವುದು ಜೊತೆಯಲ್ಲಿ ರಂಗಭೂಮಿಯ ಪ್ರಕಾರಗಳನ್ನು ಚರ್ಚಿಸಿದ್ದಾರೆ ವೃತ್ತಿರಂಗಭೂಮಿಯ ತಮ್ಮ ವೃತ್ತಿಯನ್ನು ರಂಗಭೂಮಿಯನ್ನೇ ಆಗಿದ್ದರಿಂದ ವೃತ್ತಿರಂಗಭೂಮಿ ಸಾಮೂಹಿಕವಾಗಿ ಬೆಳೆಯುತ್ತವೆಂದು ಗುರುತಿಸುತ್ತಾರೆ ಇದನ್ನು ವ್ಯವಸಾಯ ರಂಗಭೂಮಿ ಕಂಪನಿ ನಾಟಕ ನಾಟಕ ಮಂಡಳಿ ಎಂಬ ಹಲವಾರು ಅರ್ಥಗಳಿಂದ ಆಯಾ ಪ್ರಯೋಗ ವಿಷಯ ವಸ್ತುಗಳಿಂದ ಕರೆಯುತ್ತ ಬಂದಿದ್ದಾರೆ ಎಂದು ದಾಖಲಿಸುವರು.

Contact Your\'s Advertisement; 9902492681

ಮರಾಠಿ ರಂಗಭೂಮಿಯ ವಿಷ್ಣುದಾಸ ಭಾವೆಯವರು ಕರಾವಳಿಯ ಭಾಗವತ ಮೇಳ ನೋಡಿ ಪ್ರಭಾವಿತರಾಗಿ ಕನ್ನಡ ನಾಟಕ ಮಾದರಿಯ ಮರಾಠಿ ನಾಟಕ ಬರೆದರು ಸೀತಾಸ್ವಯಂವರ ಈ ನಾಟಕ ಹೊಸ ರಂಗ ಪರಿಕರಗಳ ಮೂಲಕ ಅಲಂಕಾರಗಳಿಂದ ಕನ್ನಡದ ಜನರಿಗೆ ಆಕರ್ಷಣೆ ಮಾಡಿದವು ಈ ಕಾರಣಕ್ಕಾಗಿ ಶಾಂತಕವಿಗಳು ಮೊಟ್ಟಮೊದಲಬಾರಿಗೆ ರಚಿಸಿದರು.

ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ ಹುಟ್ಟುಹಾಕಿದರು ಇದೇ ವೃತ್ತಿರಂಗಭೂಮಿಯ ಮೊದಲ ಕಂಪನಿ ಎಂದು ಹೆಸರಾಯಿತು ಗವಿಸಿದ್ದಪ್ಪ ಪಾಟೀಲರು ಶಾಂತಕವಿಗಳ ರಂಗ ಸಂವೇದನೆಯನ್ನು ಗಾಡವಾಗಿ ಚರ್ಚಿಸುತ್ತ ವೃತ್ತಿ ರಂಗಭೂಮಿ ಬಗೆಗಳನ್ನು ಬೆಳೆದು ಬಂದ ಚರಿತ್ರೆಯನ್ನು ರಂಗಸಿರಿ ಪುಸ್ತಕದಲ್ಲಿ ವಿವರಿಸಿದ್ದಾರೆ.

ಇದರಂತೆ ರಂಗಸಂಪದ ಸಂಗ್ಯಾ ಬಾಳ್ಯಾ ಯಯಾತಿ ಮಹಾಚೈತ್ರ ಮುಖ್ಯಮಂತ್ರಿ ನಾಟಕವನ್ನು ಕಲಾಗಂಗೋತ್ರಿ ತಂಡ ಪ್ರಯುಕ್ತ ಈ ನಾಟಕಗಳ ವಿಚಾರಗಳ ಜನರ ಮೇಲೆ ಪ್ರಭಾವ ಬೀರಿದವು ವಿಶೇಷವಾಗಿ ಸಾಮಾಜಿಕ ಪರಿವರ್ತನೆ ಹಾಗೂ ಅದನ್ನು ಸಾಧಿಸುವ ಮಾರ್ಗ ಗಳನ್ನು ಕುರಿತು ವಿಚಾರಗಳನ್ನು ತಮ್ಮ ಅಧ್ಯಯನದಲ್ಲಿ ದಾಖಲಿಸುತ್ತಾರೆ.

ದೇವರು-ಧರ್ಮ ಮೊದಲಾದವುಗಳ ಬಗೆಗಿರುವ ಸಾಂಪ್ರದಾಯಿಕ ಕಲ್ಪನೆ ವಿಚಾರಗಳಲ್ಲಿ ಪ್ರತಿಯೊಂದನ್ನು ಬುದ್ಧಿಯ ಒರೆಗಲ್ಲಿಗೆ ನೋಡುವುದು ಸಾಧ್ಯವಾಗಿದೆ ಸಾಮಾಜಿಕ ಸಮಸ್ಯೆಗಳನ್ನು ನೋಡುವ ದೃಷ್ಟಿಕೋನಗಳು ನಾಟಕದಲ್ಲಿವೆ ಎಂಬುದನ್ನು ಗಮನಿಸಬಹುದು ಇದಲ್ಲದೆ ಕಲಬುರ್ಗಿ-ಬೀದರ ರಾಯಚೂರು ಕೊಪ್ಪಳ ಜಿಲ್ಲೆಗಳ ರಂಗಚಟುವಟಿಕೆಗಳ ಕುರಿತು,ಅಲ್ಲದೆ ಜಿಲ್ಲೆಯ ಚಾರಿತ್ರಿಕತೆ,ಸಾಹಿತ್ಯ, ಕಥೆಯನ್ನು ವಿವರಿಸಿ ಅಲ್ಲಿನ ರಂಗಕರ್ಮಿಗಳ ಸೇವೆಯನ್ನು ತಮ್ಮ ರಂಗಸಿರಿ ಪುಸ್ತಕದಲ್ಲಿ ವಿಶ್ಲೇಷಿಸುವುದನ್ನು ಗಮನಿಸಬಹುದಾಗಿದೆ ಅಲ್ಲದೆ ಕಲ್ಯಾಣ ಕರ್ನಾಟಕದ ರಂಗಭೂಮಿ ಇತಿಹಾಸ ಹಾಗೂ ಸಮಕಾಲೀನ ಆಗುಹೋಗುಗಳನ್ನು ಆಳವಾಗಿ ಅಧ್ಯಯನ ಮಾಡುವುದರೊಂದಿಗೆ ಈ ಪುಸ್ತಕದಿಂದ ನಮ್ಮ ರಂಗಭೂಮಿಯ ಹಿರಿಮೆಗಳನ್ನು ಸ್ಥೂಲವಾಗಿ ಪರಿಚಯ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಅತಿಥಿಗಳಾದ ಡಾ. ಸದಾನಂದ ಪೆರ್ಲ ಅವರು ಮಾತನಾಡುತ್ತಾ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ನಾಟಕ ರಂಗಭೂಮಿ ಹುಟ್ಟುವುದಕ್ಕೆ ಅನೇಕ ಚರಣ ಎಲ್ಲೆಡೆಯೂ ಘಟಿಸಿವೆ ಎಂದರೆ ಅದಕ್ಕೆ ಮನುಷ್ಯನ ಮೂಲ ಪ್ರವೃತ್ತಿಯೇ ಕಾರಣ ಈ ಹಿನ್ನೆಲೆಯಲ್ಲಿ ಅನೇಕ ವಿಚಾರಗಳು ನೋಡುವುದಾದರೆ ಪ್ರತಿಯೊಂದು ದೇಶದ ಪ್ರತಿ ಭೂಮಿ ಬೇರೆ ಬೇರೆ ಘಟನೆಗಳ ಮುಖಾಂತರ ಹುಟ್ಟಿಕೊಂಡಿವೆ. ಅಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಸಲಿಕ್ಕೆ ಇಂತಹ ಒಂದು ಮೌಲ್ಯದ ವಾದಂತಹ ಚರ್ಚೆ ಅಗತ್ಯ ಎಂದರು.

ದೊಡ್ಡದೊಡ್ಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಬಂದು ಮಾತನಾಡಲು ಅಟ್ಟದ ಮೇಲೆ ಬೆಟ್ಟದಂತ ವೇದಿಕೆ ಯುವಕರಿಗೆ ದಾರಿದೀಪವಾಗಲಿದೆ ಎಂದರು.ವೇದಿಕೆ ಮೇಲಿದ್ದ ಕಾವ್ಯಶ್ರೀ ಮಹಾಗಂವಕರ್ ಮಾತನಾಡಿ ರಂಗಭೂಮಿ ರಂಗತಂತ್ರಗಳನ್ನು ವೃತ್ತಿ ಕಲಾ ತಂಡಗಳು ಕುರಿತು ಚರ್ಚಿಸುವ ದು ಇಂದಿನ ದಿನ ಮಾನಗಳಲ್ಲಿ ರಂಗಭೂಮಿಗೂ ಪ್ರೇಕ್ಷಕವರ್ಗಕ್ಕೂ ನಡುವೆ ಸಂಬಂಧ ಸಂಪೂರ್ಣವಾಗಿ ಕತ್ತರಿಸಲಾಗಿದೆ ಇಂತಹ ಪರಿಸ್ಥಿತಿಯಲ್ಲಿ ಪಾಟೀಲರು ವೃತ್ತಿರಂಗಭೂಮಿಯ ಚಾರಿತ್ರಿಕತೆಯನ್ನು ಸಮಾಜಕ್ಕೆ ಪರಿಚಯಿಸುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ ಪ್ರಕಾಶಕರಾದ ಬಸವರಾಜ ಕೊನೇಕ್ ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದು ತುಂಬಾ ಖುಷಿ ಎನಿಸಿದೆ ಇನ್ನೂ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವಿಶ್ವವಿದ್ಯಾಲಯ ಮಟ್ಟದ ಸಂಶೋಧನಾ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ವಿಮರ್ಶಾ ಕ್ಷೇತ್ರವನ್ನ ವಿಸ್ತರಿಸಲು ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಗವಿಸಿದ್ದಪ್ಪ ಪಾಟೀಲ್, ಸಂಚಾಲಕರಾದ ಡಾ. ಶಿವರಾಜ್ ಪಾಟೀಲ್, ಡಾ. ಶ್ರೀನಿವಾಸ್ ಶಿರಾನೂರ್ಕರ್, ಸುಬ್ಬರಾವ್ ಕುಲಕರ್ಣಿ, ಪ. ಮನುಸಗರ್,ಡಾ. ಸ್ವಾಮೀರಾವ್ ಕುಲಕರ್ಣಿ, ಡಾ. ರೋಲೇಕರ್ ನಾರಾಯಣ, ಡಾ. ಕೆ. ಎಸ್. ಬಂಧು,ಹಿರಿಯರಾದ ಜಿ. ಬಿ. ಸಿದ್ದಬಟ್ಟೆ,ಡಾ. ಶರಣಪ್ಪ ಚಲವಾದಿ, ಡಾ. ಆನಂದ್ ಸಿದ್ದಮನಿ, ಡಾ. ಶರಣಮ್ಮ ಪಾಟೀಲ್, ಇದ್ದರು. ಡಾ. ಚಿ. ಸಿ. ನಿಂಗಣ್ಣ ಸ್ವಾಗತಿಸಿದರು, ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here