ಅಂಬೇಡ್ಕರ್ ಮನುಕುಲದ ಉದ್ಧಾರಕ -ಗಿರೀಶ ಕಂಬಾನೂರ

0
81

ಶಹಾಬಾದ:ಭಾರತಕ್ಕೊಂದು ಸಂವಿಧಾನವನ್ನು ನಿರ್ಮಿಸಿ, ಆಡಳಿತವನ್ನು ಜನರ ಕೈಗೆ ಕೊಟ್ಟ ಕಾನೂನು ನಿರ್ಮಾಪಕ ಡಾ.ಅಂಬೇಡ್ಕರ್ ಮನುಕುಲದ ಉದ್ಧಾರಕ ಎಂದು ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಹೇಳಿದರು.

ಅವರು ರವಿವಾರ ನಗರದ ಬಸ್ ನಿಲ್ದಾಣದ ಸಮೀಪದ ಬಾಬು ಜಗಜೀವನರಾಮ ವೃತ್ತದಲ್ಲಿ ಆಯೋಜಿಸಲಾದ ಡಾ|ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ನಾಯಕರಲ್ಲ. ಅವರು ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲಾ ವರ್ಗದ ಧೀಮಂತ ನಾಯಕ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಿವಶರಣ ಮಾದಾರ ಚನ್ನಯ್ಯ ಸಮಿತಿ ಅಧ್ಯಕ್ಷ ಕಿರಣ ಕೋರೆ, ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಎಲ್ಲವನ್ನೂ ಸಾಧಿಸಬಹುದೆಂದು ಅಂಬೇಡ್ಕರ್ ನಮಗೆ ತಿಳಿಸಿಕೊಟ್ಟಿದ್ದಾರೆ. ಅವರು ನಡೆದು ಬಂದ ದಾರಿಯಲ್ಲಿ ನಾವುಗಳು ನಡೆದು ಅವರಂತೆ ನೊಂದ ಮನುಷ್ಯರ ಕಣ್ಣೀರು ಓರೆಸುವ ಕೆಲಸ ಇಂದಿನ ದಿನಗಳಲ್ಲಿ ನಡೆಯಬೇಕಿದೆ.

ಮುಖಂಡ ರಾಜೇಶ ಯನಗುಂಟಿಕರ್ ಮಾತನಾಡಿ,ಸ್ವಾತಂತ್ರ್ಯ ಮತ್ತು ಸಮಾನತೆ ಎಲ್ಲಾ ವರ್ಗದವರ ಸ್ವತ್ತಾಗಿದ್ದು, ಅದನ್ನು ಎಲ್ಲರೂ ಸಮಾನವಾಗಿ ಪಡೆದುಕೊಂಡಾಗ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಎಲ್ಲಾ ಸಮುದಾಯದಲ್ಲಿ ಸಾಮರಸ್ಯ, ಸೌಹಾರ್ದತೆ ಮೂಡಬೇಕಾದರೆ ರಾಮರಾಜ್ಯದ ಬದಲಿಗೆ, ಭೀಮರಾಜ್ಯದ ಕನಸನ್ನು ನನಸು ಮಾಡಬೇಕಾಗಿದೆ ಎಂದು ಹೇಳಿದರು.

ಬಾಬು, ಶಿವರಾಜ ಜಿನಕೇರಿ, ಮಲ್ಲೇಶಿ ಸೈದಾಪೂರ,ಮಲ್ಲಪ್ಪ ಮಲ್ಲೇದ, ರಾಮು ಬೆಣ್ಣೂರಕರ್,ಶಿವಕುಮಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here