ಸರ್ವರು ಜಾತಿಬೇದ ಮರೆತು ಬಾಳಬೇಕು: ಶಶೀಲ ನಮೋಶಿ

0
36

ಕಲಬುರಗಿ: ಸರ್ವರನ್ನೂ ಜೊತೆಯಲ್ಲಿ ತೆಗೆದುಕೊಂಡು, ಸರ್ವರಿಗೂ ಸಮಬಾಳು, ಸಮಪಾಲು ಎನ್ನುತ್ತಾ ನಾವೆಲ್ಲರೂ ಜಾತಿಬೇದ ಮರೆತು ಬಾಳಬೇಕೆಂದು ನೂತನವಾಗಿ ಆಯ್ಕೆಗೊಂಡ ಬಿಜೆಪಿ ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ ಹೇಳಿದರು.

ಅವರು ನಗರದ ಶಹಬಜಾರ ಬಡಾವಣೆಯ ವೀರಶೈವ ಲಿಂಗಾಯತ ಬಂದು ಸಮಾಜದ ವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಬಸವಣ್ಣನವರು ಮೇಲು ಕಿಳೂ ಎಂಬ ಬೇದಭಾವನ್ನು ದೂರಮಾಡಿ ಇವ್ ನಮ್ಮವ ಎಂಬ ಸಂದೇಶ ಸಾರಿ ಹೋಗಿದ್ದಾರೆ. ಅವರ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನಮ್ಮವ ಎಂಬ ಭಾವ ಮೂಡಿದಾಗಲೇ ಸಮಾಜ ಅಭಿವೃದ್ಧಿಯಾಗುತ್ತದೆ. ಹಾಗೇ ನಮ್ಮ ಸಮಾಜದ ಏಳಿಗೆಗೆ ನಾವೆಲ್ಲರೂ ಶ್ರಮಿಸಬೇಕೆಂದು ಹೇಳಿದರು. ಈ ದೇಶದ ಸಂವಿಧಾನದ ಅಢಿಯಲ್ಲಿ ನಾವೆಲ್ಲರೂ ಸರ್ವರು ನಮ್ಮವರೆಂದು ಸಾರಿದ ಅಂಬೇಡ್ಕರ್ ಹಾಗೂ ಬಸವಣ್ಣನವರ ಹಿತನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

Contact Your\'s Advertisement; 9902492681

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇದರ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಬಿಜೆಪಿ ಯುವ ಮುಖಂಡ ಚಂದು ಪಾಟೀಲ ಮಾತನಾಡಿ, ಶಹಬಜಾರ ಬಡಾವಣೆಯೂ ನನ್ನ ಪಾಲಿಗೆ ಗಂಗೆ ಸ್ವರೂಪ ಇದ್ದಂಗೆ. ಇಲ್ಲಿಯ ಹಿರಿಯ ನಾಯಕರ, ಕಾರ್ಯಕರ್ತರ ಆಶಿರ್ವಾದದಿಂದಲೇ ನನಗೆ ಈ ಸ್ಥಾನ ಸಿಕ್ಕಿದೆ ಎಂದರು. ೧೩ ವರ್ಷಗಳ ಬಳಿಕ ಉತ್ತರ ಮತಕ್ಷೇತ್ರದಲ್ಲಿ ದೀಪ ಬೆಳಗಿದೆ. ಈ ದೀಪವನ್ನು ಪ್ರತಿ ಮನೆಯಲ್ಲಿ ಹಚ್ಚುವ ಕೆಲಸ ನಾನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿ, ನಿಮ್ಮೆಲ್ಲರ ಸಹಕಾರ ಮುಂಬರುವ ದಿನಗಳಲ್ಲಿ ಹೀಗೆ ಇರಲಿ ಎಂದು ಮನವಿ ಮಾಡಿ, ನಿಮ್ಮೆ ಸೇವೆಗಾಗಿ ನಾನು ಸದಾ ಸಿದ್ದನಿದ್ದೇನೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಸಾರಂಗಧರ ದೇಶಿಕೆಂದ್ರ ಮಹಾಸ್ವಾಮಿಗಳು ಶ್ರೀಶೈಲಂ, ಸುಲಪಲಮಠ, ಶ್ರೀ ರಾಜಶೇಖರ ಶಿವಾಚಾರ್ಯರು ಚವದಾಪುರಿ ಮಠ ವಹಿಸಿದ್ದರು. ಸ್ವಾಗತ ಬಾಷಣವನ್ನು ವಕೀಲರಾದ ಈರಣ್ಣ ಗೊಳೆದ ಮಾಡಿದರು. ವೇದಿಕೆ ಮೇಲೆ ಬಿಜೆಪಿ ಅಧ್ಯಕ್ಷ ಸಿದ್ದಾಜೀ ಪಾಟೀಲ, ಸಮಾಜದ ಅಧ್ಯಕ್ಷರಾದ ಶರಣಬಸಪ್ಪ ರೇವೂರೆ, ಮಲ್ಲಿಕಾರ್ಜುಣ ಖೇಮಜಿ, ಶಿವಾನಂದ ಬಂಡಕ, ಲಿಂಗಣ್ಣ ಮಳ್ಳಿ, ಮಲ್ಲಿಕಾರ್ಜುಣ ಓಕಳಿ, ಅಪ್ಪು ಅಸ್ಪಲ್ಲಿ, ಪ್ರಭು ಹಾದಿಮನಿ, ಉತ್ತರ ಮಂಡಲದ ಅದ್ಯಕ್ಷ ಅಶೋಕ ಮಾನಕರ್, ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪದವಿಗೆ ಭಾಜನರಾದ ಪೋಲಿಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here