ಗೋವು ಹತ್ಯೆ, ಭೂಸುಧಾರಣೆ ಕಾಯ್ದೆಗಳ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಆಕ್ರೋಶ: ಕಾಯ್ದೆ ವಾಪಸ್ಗೆ ಒತ್ತಾಯ

0
52

ಕಲಬುರಗಿ: ನಿನ್ನೆ ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಕಾಯ್ದೆಗಳಾದ ಗೋಹತ್ಯೆ ನಿಷೇಧ, ಹಾಗೂ ಭೂಸುಧಾರಣೆ ಕಾಯ್ದೆಗಳ ವಿರುದ್ಧ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ನೂತನ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ನಗರದ ಜಗತ್ ವೃತದ ಡಾ. ಅಂಬೇಡ್ಕರ್ ಪ್ರತಿಮೆ ಮುಂದೆ ನೂತನ ಕಾಯ್ದೆಗಳ ಪ್ರತಿಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ನೂತನ ತಿದ್ದುಪಡಿ ಮಸೂದೆಗಳ ಪರವಾಗಿ ಜನತಾ ದಳ (ಎಸ್‌) ಸಹ ಮತ ಚಲಾಯಸಿ,  ರೈತರಿಗೆ ಮಾಡುವ ದ್ರೋಹವಲ್ಲದೆ ಮತ್ತೇನು? ಸರಕಾರದ ಮತ್ತು ಜೆಡಿಎಸ್‌ ನ ಈ ನೀತಿ ಖಂಡನೀಯವಾಗಿದ್ದು, ಜಾನುವಾರು ವಧೆ, ಪ್ರತಿಬ೦ಧಕ ಮತ್ತು ಸಂರಕ್ಷಣಾ ಮಸೂದೆಯನ್ನು ಪಾಸು ಮಡಿದೆ ಎಂದು ಸಂಘಟನೆ ಕಾರ್ಯಕರ್ತರು ತೀವ್ರ ಖಂಡಿಸಿದ್ದಾರೆ.

Contact Your\'s Advertisement; 9902492681

ಭೂಸುಧಾರಣಾ ತಿದ್ದುಪಡಿ ಕಾಯ್ದೆಯ ಮೂಲಕ ಕೃಷಿಯನ್ನು ಕೃಷಿಕರ ಕೈಯಿಂದ ಕಿತ್ತುಕೊಂಡು ಕಾರ್ಪೋರೇಟಿಗರ ಮತ್ತವರ ಏಜೆಂಟತರ ಕೈವಶ ಮಾಡುವ ಹುನ್ನಾರ ಮಾತ್ರ ಆಗಿದೆ. ಕೃಷಿಯೇತರರು ಭೂಮಿಯನ್ನು ಖರಿದಿಸಲು ಇರುವ ಆದಾಯ ಮಿತಿಯನ್ನು ತೆಗೆದು ಹಾಕಿ ಯಾರು ಬೇಕಾದರೂ ಭೂಮಿಯನ್ನು ದಿಸುವ ಅವಕಾಶವನ್ನು ಇದರಲ್ಲಿ ಒದಗಿಸಲಾಗಿದೆ. ಇಂತಹ ರೈತ ವಿರೋಧಿ ಮಸೂದೆಗೆ ಮಣ್ಣಿನ ಮಗ ಎಂದು ಹೇಳಿಕೊಂಡು ಜಾತ್ಯಾತೀತ ಸೋಗು ಹಾಕಿಕೊಂಡ ಜನತಾದಳ (ಎಸ) ನ ಕುಮಾರ ಸ್ವಾಮಿಯವರು ಸಮರ್ಥಿಸಿಕೊಂಡಿರುವುದು ರಾಜ್ಯದ ರೈತರಿಗೆ ದ್ರೋಹ ಮಾಡಿದಂತಾಗಿದೆ ಎಂದು ಸಂಘಟನೆ ರಾಜ್ಯ ಸಮಿತಿಯ ಉಪಧ್ಯಕ್ಷ ಹಾಗೂ ಲೇಖಕಿ ಕೆ ನೀಲಾ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಸೂದೆಯ (79)ಎಬಿ ಕಲಂ ಗೆ ತಿದ್ದುಪಡಿ ತರುವ ಮೂಲಕ ಯುವಜನತೆಗೆ ಅವಕಾಶ ಒದಗಿಸಲಾಗಿದೆ. ಎಂದು ಹೇಳಿದ್ದಾರೆ. ಯಾವ ಯುವಕರಿಗೆ ಏನು ಅನುಕೂಲ ಕಲ್ಪಿಸಲಾಗುತ್ತದೆ ಎಂಬುದನ್ನು ಹೇಳಬೇಕು. ರೈತರ ಕೈಯಿಂದ ಭೂಮಿಯನ್ನು ಕಿತ್ತುಕೊಂಡು ಹಣವಿದ್ದವರಿಗೆ ಬ೦ಡವಾಳಿಗರಿಗೆ ಭೂಮಿ ಕೊಡುವುದು ದರೆ ವಿನರ್ಥಳ ಈ ಕಲಂಗೆ ತಿದ್ದು ಪಡಿ ಮೂಲಿಕೆ ಕಾರ್ಪೋರಟಿಗರಿಗೆ ರತ್ನಗಂಬಳಿ ಹಾಸಿ ಕೃಷಿಯನು ಒಪಿಸುವುದೇ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸಹ ಈ ಕಾಯ್ದೆಗಳ ಮೂಲಕ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದ್ದು, ಗೋಮಾಂಸ ರಫ್ತು ನಿಷೇಧವೂ ಮಾಡುವುದೆ ಸರಕಾರ? ಈ ಪ್ರಶ್ನೆಗೆ ಉತ್ತರವಿಲ್ಲ ಎಂದು ಹರಿಹಾಯಿದಿದ್ದಾರೆ.

ಈ ಕಾಯ್ದೆಯ ಮೂಲಕ ಸಂಘಪರಿವಾರದ ಗೋರಕ್ಷಕ ಹೆಸರಿನ ಗೋವಿರೋಧಿಗಳಿಗೆ ನೈತಿಕ ಪೋಲಿಸಗಿರಿ ಮಾಡಲು ಕಾನೂನಿನ ನೆರವು ಕೊಟ್ಟಂತೆ ಆಗಿದ್ದು, ಜನತೆಯ ಆಹಾರದ ಹಕ್ಕಿನ ಮೇಲೆ ಧಾಳಿ ಮಾಡುವ ಒಳ ಉದ್ದೇಶವೂ ಅಡಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ಮತೀಯ ಧೋರಣೆಯ ಕಾಯ್ದೆಯನ್ನು ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೂಡಲೇ ಈ ಎರಡೂ ಕಾಯ್ದೆಗಳನ್ನು ವಾಪಾಸು ತೆಗೆದುಕೊಳ್ಳಬೇಕಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಅಮಿನಾ ಬೇಗಂ, ನಂದಾದೇವಿ ಮಂಗೊಂಡಿ, ಜಗದೇವಿ ನೂಲಕರ್, ಚಂದಮ್ಮ ಗೋಳಾ, ಶಹೇನಾಜ್ ಅಕ್ತರ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here