ಕಲಬುರಗಿ: ಸರಕಾರ ಹಾಗೂ ಕಾರ್ಮಿಕ ಮುಖಂಡರು ಸಾರಿಗೆ ವ್ಯವಸ್ಥೆಯು ಅಗತ್ಯ ಸೇವೆಯ ಅಡಿಯಲ್ಲಿ ಬರುವುದರಿಂದ ತಕ್ಷಣ ಮಾತುಕತೆಯಿಂದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಕೆಲವೊಂದು ಬಂದ್ ಗಳು ಪ್ರತಿಭಟನೆಗಳು ನಡೆದ ನಂತರ ಈಗ ಕೆಎಸ್ಆರ್ ಟಿಸಿ ಸಾರಿಗೆ ಬಸ್ ಗಳ ಮುಷ್ಕರ ನಡೆಯುತ್ತಿದೆ. ಕೋವಿಡ್ ನಿಂದ ಈಗ ತಾನೇ ರಾಜ್ಯದ ಜನತೆ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಮುಷ್ಕರದಿಂದ ಸಾರ್ವಜನಿಕರ ಸಂಚಾರಕ್ಕೆ ಬಹುದೊಡ್ಡ ಹೊಡೆತವಾಗಿದೆ ಎಲ್ಲಾ ಕೆಲಸ ಕಾರ್ಯಗಳು ನಿರ್ವಹಿಸಲು ಸಮಸ್ಯೆಯಾಗುತ್ತಿದೆ ಹಲವಾರು ಮದುವೆ ಸಮಾರಂಭಗಳಿಗೂ, ಸಾವು ನೋವುಗಳಿಗೆ ಹಾಗೂ ಇತರ ಅಗತ್ಯ ಕಾರ್ಯಗಳಿಗೆ ಓಡಾಡಲು ಜನರು ಹರಸಾಹಸ ಪಡಬೇಕಾಗಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾತುಕತೆಯಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಜನ ಕೆಲಸ ಇಲ್ಲದೇ ಪರಿತಪಿಸುತ್ತಿದ್ದಾರೆ.ಕೊರೊನಾ ಬಂದ ಮೇಲೆ ಎಲ್ಲಾ ತರಹ ಸಾರ್ವಜನಿಕರು ಸಂಕಷ್ಟ ಕ್ಕೀಡಾಗಿ ಒಂದೊಂದು ದಿನದ ಜೀವನಕ್ಕೂ ಒಂದೊತ್ತಿನ ಊಟಕ್ಕೂ ತುಂಬಾ ತೊಂದರೆಗಳಾಗಿದ್ದಾರೆ. ಕೆಎಸ್ಆರ್ ಟಿಸಿಗೆ ಸೇರುವಾಗಲೆ ಗೊತ್ತಿರ್ಲಿಲ್ಲವಾ ? ಕೆಎಸ್ ಆರ್ ಟಿಸಿ ಸರಕಾರ ಅಲ್ಲ , ನಿಗಮ ಅಂತ. ಅವರಿಗವರೇ ಹಳ್ಳ ತೋಡ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚಿನ ಅಧಿಕ ನಿಗಮ ಮಂಡಳಿಗಳು ಇವೆ. ಅವರು ಸುಮ್ಮನಿರುತ್ತಾರೆಯೇ ಸ್ವಲ್ಪ ನಾದರೂ ಯೋಚನೆ ಮಾಡದ ಸಾರಿಗೆ ಸಿಬ್ಬಂದಿ ನೌಕರರ ವರ್ಗ ಯಾರು ಎತ್ತಿ ಕಟ್ಡಿದ್ದರೆ , ಇವರು ಕುಣಿಯುವುದು ಯಾವ ನ್ಯಾಯ ? ಸ್ವಂತ ಬುದ್ದಿ ಬೆಳೆಸಿಕೊಂಡರೆ ಅವರ ಸಂಸಾರನ್ನು ಚೆನ್ನಾಗಿರುತ್ತೆ. ಆ ಭಗವಂತ ಸಾರಿಗೆ ನೌಕರರಿಗೆ ಒಳ್ಳೆಯ ಬುದ್ದಿಕೊಡಲೆಂದು ಅವರು ಪ್ರಾರ್ಥಿಸಿದ್ದಾರೆ.