ಸುರಪುರ: ಮಹರ್ಷಿ ಯಾಜ್ಞವಲ್ಕ್ಯರು ಇಡೀ ಮನುಕುಲಕ್ಕೆ ಆದರ್ಶಪ್ರಾಯರು ಶುಕ್ಲ ಯಜುರ್ವೇದದ ಸಂಸ್ಥಾಪಕರಾದ ಅವರು ಸತ್ಯ ನಿಷ್ಠೆ ಸಾಹಸಪೂರ್ಣ ಸಾಧನೆಗೆ ಹೆಸರುವಾಸಿ ಅವರು ಜನಸಾಮನ್ಯರಿಗೆ ನೀಡಿದ ಸಹಾಯಸೂತ್ರಗಳೂ ಸಾರ್ವಕಾಲಿಕ ಎಂದು ವೇದ ಮೂರ್ತಿ ಭೀಮಸೇನ ಆಚಾರ ಜೋಷಿ ಹೇಳಿದರು.
ನಗರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ಬುಧವಾರ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸಂಘದ ವತಿಯಿಂದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತಿಯನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಜಗದ್ಗುರು ಆದಿ ಶಂಕರಾಚಾರ್ಯರು ಯಾಜ್ಞವಲ್ಕ್ಯ ಮಹರ್ಷಿಗಳನ್ನು ತಮ್ಮ ಉಪನಿಷತ್ ಭಾಷ್ಯದಲ್ಲಿ ಭಗವಾನ ಎಂದು ಸಂಭೋದಿಸಿ ಅವರ ಸ್ರೇಷ್ಠತೆಯನ್ನು ಕೊಂಡಾಡಿದ್ದಾರೆ ಎಂದರು.
ಯಾಜ್ಞವಲ್ಕ್ಯರ ಜಯಂತಿ ನಿಮಿತ್ಯ ಬೆಳಿಗ್ಗೆ ವಿಪ್ರ ಬಾಂಧವರು ವಿಶೇಷ ಅಷ್ಟೋತ್ತರ, ಅಲಂಕಾರ, ವಿಶೇಷ ಪೋಜೆಗಳು ನಡೆದವು ಎಸ್.ಎಸ್.ಎಲ್.ಸಿಯಲ್ಲಿ ಉನ್ನತ ಸಾಧನೆ ಮಾಡಿದ ವಿಪ್ರ ಸಮಾಜದ ವಿದ್ಯಾರ್ಥಿ ಸುಧನ ಸಾಲವಾಡಗಿ ಅವರಿಗೆ ಅನುಗ್ರಹ ಪ್ರಶಸ್ತಿನೀಡಿ ಸನ್ಮಾನಿಸಲಾಯಿತು.
ಅಶೋಕ ಕುಲ್ಕರ್ಣಿ ಹೇಮನೂರು, ಮಲ್ಲಾರಾವ ಸಿಂದಗಿರಿ, ಅಪ್ಪಣ್ಣ ಕುಲ್ಕರ್ಣಿ, ಲಕ್ಷ್ಮೀಕಾಂತರಾವ ಅಮ್ಮಾಪೂರ, ರಾಘವೇಂದ್ರ ಹಳ್ಳದ, ಚಂದ್ರಕಾಂತ ನಾಡಗೌಡ, ಪ್ರಹ್ಲಾದ ಧೀಕ್ಷೀತ, ಶ್ರೀನಿವಾಸ ದೇವರು, ಮಲ್ಲಾರವ ಪಟವಾರಿ, ಶ್ರೀನಿವಾಸ ಸಿಂದಗಿರ, ರಾಘವೇಂದ್ರ ಗೆದ್ದಲಮರಿ, ಶ್ರೀನಿವಾಸ ದೇವಡಿ, ಪ್ರವೀಣ ಕುಲ್ಕರ್ಣಿ, ದತ್ತುರಾವ ಏವೂರು, ಗಿರೀಶ ಕುಲ್ಕರ್ಣಿ, ವೆಂಕಟೇಶ ಜೋಶಿ, ಕಲ್ಯಾಣ ರಾವ ಕೋಟಿಕಾನಿ, ವಿಜಯ ಕುಲ್ಕರ್ಣಿ, ಬಲಭೀಮರಾವ ಕುಲ್ಕರ್ಣಿ, ಪ್ರಕಾಶ ಕುಲ್ಕರ್ಣಿ ಸೇರಿದಂತೆ ಇನ್ನಿತರರಿದ್ದರು.