ಕಲಬುರಗಿ; ಜಿಲ್ಲೆಯ ಗ್ರಾಮ ಪಂಚಾಯತಿ ಚಿನಾವಣೆಯ ನಿಮಿತ್ತ ಜೆಡಿಎಸ್ ಬೆಂಬಲಿತರಿಗೆ ಬೆಂಬಲಿಸಲು ಆಳಂದನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ ಅವರು ಮಾತನಾಡುತ್ತಾ ಆಳಂದ ತಾಲೂಕಿನಲ್ಲಿ ಇಬ್ಬರು ಮಾಜಿ ಹಾಲಿ ಶಾಸಕರು ಆಡಳಿತ ಹಂಚಿಕೆ ಹಾಗೂ ಆಳಂದದಲ್ಲಿ ಕುಟುಂಬ ರಾಜಕೀಯ ನಡೆದಿದಕ್ಕೆ ಖಂಡಿಸಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಎಂ.ಡಿ ಅಲಿಂ ಇನಾಮದಾರ ಮಾತನಾಡಿ ಈ ಹಿಂದೆ ನೇರ ಪರಿಹಾರದ ಗೋಸ್ಕರ್ ವಿವಿಧ ತಾಲೂಕು ಕಡೆಗೆ ಪ್ರವಾಸ ಮಾಡಲಾಯಿತು ಇದರ ಪ್ರಕಾರ ಪ್ರತಿ ಎಕರೆಗೆ ೨೫೦೦೦/-ರೂ ಪರಿಹಾರ ನಿಡಲು ಸರಕಾರಕ್ಕೆ ಮನವಿ ಸಲ್ಲಿಸಿದ್ದರು ಯಾವೂದೆ ಪರಿಹಾರ ನೀಡಲ ಕಾರಣ ಕೂಡಲೇ ಪರಿಹಾರ ನೀಡಲು ಆಗ್ರಹಿಸಿದರು.
ತಾಲೂಕಿ ನಿಂಬಾಳ, ಯಳಸಂಗಿ, ಮಾಡಿಯಾಳ, ದಂಗಾಪೂರ, ನಿಂಬರ್ಗಾ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪರವಾಣಿರುವಂತ ವ್ಯಕ್ತಿಗಳಿಗೆ ಮಾಜಿ ಸಿಎಂ ಕುಮಾರ ಸ್ವಾಮಿ ಅವರ ಕೋಡುಗೆಯನ್ನು ವೀವರಿಸುತ್ತ ಪಕ್ಷದ ಪ್ರಚಾರವನ್ನು ಮಾಡುತ್ತ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರುನಾಥ ಪೂಜಾರಿ, ಮಲಿಕಾರ್ಜುನ ಸಂಗಾಣಿ, ಬಾಬುರಾವ ಸಲ್ಲದ್, ಅರವಿಂದ ರಂಜೋರಿ, ಸೈಫಾನ ಖುರೇಷಿ ಹಾಗೂ ಜೆಡಿಎಸ್ ಮುಖಂಡರು ಇದ್ದರು.